ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ: ಹುಬ್ಬಳ್ಳಿ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡಿನ ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 4:38 PM

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ 17 ಕಳ್ಳತನ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ಪೊಲೀಸರಿಂದ ಗುಂಡಿನ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದ್ದ 17 ಕಳ್ಳತನ ಕೇಸ್​ನಲ್ಲಿ ಆರೋಪಿ ಭಾಗಿಯಾಗಿದ್ದ.​

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ: ಹುಬ್ಬಳ್ಳಿ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡಿನ ದಾಳಿ
ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ: ಹುಬ್ಬಳ್ಳಿ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡಿನ ದಾಳಿ
Follow us on

ಹುಬ್ಬಳ್ಳಿ, ಸೆಪ್ಟೆಂಬರ್​ 23: 17 ಕಳ್ಳತನ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆ ಪೊಲೀಸರಿಂದ ಗುಂಡಿನ ದಾಳಿ (firing) ಮಾಡಲಾಗಿದೆ. ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಬಳಿ ಆರೋಪಿ ವಿನೋದ್ ಕಾಲಿಗೆ ಗುಂಡೇಟು ನೀಡಲಾಗಿದೆ. ಕಳ್ಳತನ ಪ್ರಕರಣದಲ್ಲಿ ನಿನ್ನೆ ವಿನೋದ್​ನನ್ನು ಪೊಲೀಸರು ಬಂಧಿಸಿದ್ದರು. ತನ್ನ ಸಹಚರರನ್ನು ತೋರಿಸುತ್ತೇನೆಂದು ಕರೆದೊಯ್ದಿದ್ದ ವಿನೋದ್, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.

ಬೆಂಡಿಗೇರಿ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಜಯಶ್ರೀ ಛಲವಾದಿ, ಕಾನ್ಸ್​ಟೇಬಲ್ ರಮೇಶ್ ಹಿತ್ತಲಮನಿ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದ. ಆತ್ಮರಕ್ಷಣೆಗಾಗಿ ವಿನೋದ್ ಕಾಲಿಗೆ ಪಿಐ ಜಯಶ್ರೀ ಗುಂಡು ಹಾರಿಸಿದ್ದರು.

ಬೆಂಗಳೂರಿನಲ್ಲಿ ನಡುರಸ್ತೆಯಲ್ಲಿ ಝಳಪಿಸಿದ ಮಚ್ಚು, ಲಾಂಗ್‌

ಬೆಂಗಳೂರು: ನಗರದ ನಡುರಸ್ತೆಯಲ್ಲಿ ಮಚ್ಚು, ಲಾಂಗ್‌ ಝಳಪಿಸಿರುವಂತಹ ಘಟನೆ ಸಿಕೆ ಅಚ್ಚುಕಟ್ಟೆ ಠಾಣಾ ವ್ಯಾಪ್ತಿಯ ಕತ್ತರಿಗುಪ್ಪೆಯಲ್ಲಿ ನಡೆದಿದೆ. ಸದ್ಯ ರೌಡಿಶೀಟರ್​ಗಳ ಹಾವಳಿಗೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದಿದ್ದಾರೆ.

ಇದನ್ನೂ ಓದಿ: FSL​ ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!

ಅಭಿ ಹಾಗೂ ದೀಪಕ್ ಮೇಲೆ ಪ್ರದೀಪ್ ಅಲಿಯಾಸ್ ಜೂಲಿ ಗ್ಯಾಂಗ್​ನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಅಭಿ ಎಂಬಾತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕತ್ತರಿಗುಪ್ಪೆಯಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಲಾಂಗ್, ಮಚ್ಚುಗಳಿಂದ ಹೊಡೆದಾಡಿಕೊಂಡಿದ್ದಾರೆ. ಸಿಕೆ ಅಚ್ಚುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಲ್ಲಿ ಮುಂದುವರಿದ ಪುಂಡರ ಹಾವಳಿ

ಬೆಂಗಳೂರು ನಗರದಲ್ಲಿ ಪುಂಡರ ಹಾವಳಿ ಮುಂದುವರೆದಿದ್ದು, ಯಾರೂ ಇಲ್ಲದ ವೇಳೆಯಲ್ಲಿ 3 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವಂತಹ ಘಟನೆ ಹೆಚ್ಎಂಟಿ ಲೇಔಟ್‌ನಲ್ಲಿ ನಡೆದಿದೆ. ಉತ್ತರ ಭಾರತದ‌ ವಿದ್ಯಾರ್ಥಿಗಳ ಬೈಕ್‌ಗಳೇ ಟಾರ್ಗೆಟ್​ ಮಾಡಲಾಗಿದೆ.

ಇದನ್ನೂ ಓದಿ: Accident: ರಾಜ್ಯದ ಹಲವೆಡೆ ಭೀಕರ ಅಪಘಾತ; ಪ್ರತ್ಯೇಕ ಘಟನೆಗಳಲ್ಲಿ 6 ಜನರ ಸಾವು

ಬುಲೆಟ್ ಬೈಕ್‌ನಿಂದ ಪೆಟ್ರೋಲ್‌ ಕದ್ದು 3 ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿ ಮಾಡಲಾಗಿದೆ. ಸೆ.18ರಂದು ತಡರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಪತ್ತೆಗಾಗಿ ಶೋಧ ನಡೆದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.