ರೈಲು ಪ್ರಯಾಣಿಕರೇ ಗಮನಿಸಿ: ತುಮಕೂರು ರೈಲ್ವೆ ನಿಲ್ದಾಣದ ಕಾಮಗಾರಿಯಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

ತುಮಕೂರು ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯಿಂದಾಗಿ ಅಕ್ಟೋಬರ್ 23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ತುಮಕೂರು–ಬೆಂಗಳೂರು ಮೆಮು ರೈಲುಗಳು 12 ದಿನ ರದ್ದಾಗಲಿದ್ದು, ಯಶವಂತಪುರ–ಶಿವಮೊಗ್ಗ ಮತ್ತು ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ ರೈಲುಗಳ ನಿರ್ಗಮನ ವಿಳಂಬವಾಗಲಿದೆ. ರೈಲು ಸಂಚಾರ ಬದಲಾವಣೆಗೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.

ರೈಲು ಪ್ರಯಾಣಿಕರೇ ಗಮನಿಸಿ: ತುಮಕೂರು ರೈಲ್ವೆ ನಿಲ್ದಾಣದ ಕಾಮಗಾರಿಯಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 21, 2026 | 8:06 AM

ಮುಖ್ಯಾಂಶಗಳು

  • ತುಮಕೂರು–ಬೆಂಗಳೂರು ಮೆಮು ರೈಲುಗಳು 12 ದಿನ ರದ್ದು
  • ಯಶವಂತಪುರ–ಶಿವಮೊಗ್ಗ ರೈಲು 75 ನಿಮಿಷ ವಿಳಂಬ
  • ಹಲವು ರೈಲುಗಳ ಮಾರ್ಗಮಧ್ಯೆ ಸಂಚಾರ ನಿಯಂತ್ರಣ

ಬೆಂಗಳೂರು, ಅಕ್ಟೋಬರ್ 21: ತುಮಕೂರು ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗಿದ್ದು, ಹಲವು ರೈಲುಗಳನ್ನು ಮಾರ್ಗಮಧ್ಯೆ ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಅಕ್ಟೋಬರ್ 23ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ. ಹೀಗಾಗಿ, ಈ ಮಾರ್ಗದಲ್ಲಿ ಪ್ರಯಾಣಿಸುವವರು ರೈಲುಗಳ ವೇಳಾಪಟ್ಟಿಯನ್ನು ಗಮನಿಸಿ ಪ್ರಯಾಣದ ಯೋಜನೆ ರೂಪಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

12 ದಿನ ತುಮಕೂರು–ಬೆಂಗಳೂರು ಮೆಮು ರೈಲು ಸಂಚಾರ ರದ್ದು

ತುಮಕೂರು ನಿಲ್ದಾಣದ ಯಾರ್ಡ್‌ನಲ್ಲಿ ಪುನರಾಭಿವೃದ್ಧಿ ಕಾಮಗಾರಿಗಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಎರಡು ಮೆಮು ರೈಲುಗಳ ಸಂಚಾರವನ್ನು ಒಟ್ಟು 12 ದಿನಗಳ ಕಾಲ ರದ್ದುಗೊಳಿಸಲಾಗಿದೆ.

  • ರೈಲು ಸಂಖ್ಯೆ 66572: ತುಮಕೂರು–ಕೆಎಸ್‌ಆರ್ ಬೆಂಗಳೂರು ಮೆಮು
  • ರೈಲು ಸಂಖ್ಯೆ 66571: ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು

ಈ ರೈಲುಗಳು ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಸಂಚರಿಸುವುದಿಲ್ಲ.

ಎರಡು ರೈಲುಗಳ ನಿರ್ಗಮನ ಸಮಯದಲ್ಲಿ ಬದಲಾವಣೆ

  • ನಿಗದಿತ ದಿನಗಳಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳ ನಿರ್ಗಮನ ಸಮಯವನ್ನು ವಿಳಂಬಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 20689 – ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್: ಯಶವಂತಪುರದಿಂದ 75 ನಿಮಿಷ ತಡವಾಗಿ ಹೊರಡಲಿದೆ.
  • ರೈಲು ಸಂಖ್ಯೆ 12725 – ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್: ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

ಈ ಬದಲಾವಣೆಗಳು ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಜಾರಿಯಲ್ಲಿರಲಿವೆ.

ಹಲವು ರೈಲುಗಳು ಮಾರ್ಗಮಧ್ಯೆ ತಾತ್ಕಾಲಿಕ ನಿಯಂತ್ರಣ

ಕೆಲವು ರೈಲುಗಳನ್ನು ನಿಗದಿತ ದಿನಗಳಲ್ಲಿ ಮಾರ್ಗಮಧ್ಯೆ ತಾತ್ಕಾಲಿಕವಾಗಿ ನಿಲ್ಲಿಸಿ ಅಥವಾ ನಿಯಂತ್ರಿಸಿ ಸಂಚರಿಸಲಾಗುತ್ತದೆ. ರೈಲು ಸಂಖ್ಯೆ ಮತ್ತು ವಿಳಂಬದ ವಿವರಗಳು ಹೀಗಿವೆ;

  • ರೈಲು ಸಂಖ್ಯೆ 20652 – ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್: 40 ನಿಮಿಷ ನಿಯಂತ್ರಣ.
  • ರೈಲು ಸಂಖ್ಯೆ 66567 – ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು: 30 ನಿಮಿಷ ನಿಯಂತ್ರಣ.

ಈ ಎರಡೂ ರೈಲುಗಳಿಗೆ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಈ ನಿಯಂತ್ರಣ ಅನ್ವಯಿಸುತ್ತದೆ.

ಇತರ ರೈಲುಗಳ ಸಮಯ ಬದಲಾವಣೆ ವಿವರ

  • ರೈಲು ಸಂಖ್ಯೆ 1730 – ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್: 15 ನಿಮಿಷ ನಿಯಂತ್ರಣ. ಈ ಬದಲಾವಣೆ ಅಕ್ಟೋಬರ್ 22ರಿಂದ 24ರವರೆಗೆ, ಅಕ್ಟೋಬರ್ 27ರಿಂದ 31ರವರೆಗೆ ಹಾಗೂ ನವೆಂಬರ್ 3ರಿಂದ 6ರವರೆಗೆ ಅನ್ವಯಿಸುತ್ತದೆ.
  • ರೈಲು ಸಂಖ್ಯೆ 20676 – ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್: 15 ನಿಮಿಷ ನಿಯಂತ್ರಣ. ಈ ಬದಲಾವಣೆ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಅನ್ವಯಿಸುತ್ತದೆ.
  • ರೈಲು ಸಂಖ್ಯೆ 19667 – ಉದಯಪುರ ಸಿಟಿ–ಮೈಸೂರು ಎಕ್ಸ್‌ಪ್ರೆಸ್: ಅಕ್ಟೋಬರ್ 26 ಮತ್ತು ನವೆಂಬರ್ 2ರಂದು 30 ನಿಮಿಷ ಮಾರ್ಗಮಧ್ಯೆ ನಿಯಂತ್ರಣ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ


ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. ರೈಲುಗಳ ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ತಮ್ಮ ರೈಲಿನ ಇತ್ತೀಚಿನ ವೇಳಾಪಟ್ಟಿಯನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಲು ರೈಲ್ವೆ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 am, Wed, 21 October 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us