ತುಮಕೂರು: ಬಾಡಿಗೆ ಕೇಳಿದ್ದಕ್ಕೆ ಥಳಿತ ಪ್ರಕರಣ, ನ್ಯಾಯಕ್ಕಾಗಿ ಗೃಹಸಚಿವರ ಬಳಿ ಅಂಗಲಾಚಿದ ಮಹಿಳೆ

ಕಟ್ಟಡದ ಬಾಡಿಗೆ ಕೇಳಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತುಮಕೂರಿನಲ್ಲಿ ನಡೆದಿತ್ತು. ಘಟನೆ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದರೂ ಪೊಲೀಸರು ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ. ಹೀಗಾಗಿ ನೊಂದ ಮಹಿಳೆ ನ್ಯಾಯ ಕೊಡಿಸುವಂತೆ ಗೃಹಸಚಿವ ಪರಮೇಶ್ವರ ಅವರ ಬಳಿ ಕೈ ಮುಗಿದು ಅಂಗಲಾಚಿದ್ದಾರೆ.

ತುಮಕೂರು: ಬಾಡಿಗೆ ಕೇಳಿದ್ದಕ್ಕೆ ಥಳಿತ ಪ್ರಕರಣ, ನ್ಯಾಯಕ್ಕಾಗಿ ಗೃಹಸಚಿವರ ಬಳಿ ಅಂಗಲಾಚಿದ ಮಹಿಳೆ
ನ್ಯಾಯಕ್ಕಾಗಿ ಗೃಹಸಚಿವ ಜಿ. ಪರಮೇಶ್ವರ ಬಳಿ ಕೈ ಮುಗಿದು ಅಂಗಲಾಚಿದ ಮಹಿಳೆ
Follow us
| Updated By: Rakesh Nayak Manchi

Updated on: Oct 03, 2023 | 10:38 AM

ತುಮಕೂರು, ಅ.3: ಕಟ್ಟಡದ ಬಾಡಿಗೆ ಕೇಳಿದ್ದಕ್ಕೆ ಥಳಿಸಿದ ಪ್ರಕರಣ ಸಂಬಂಧ ನ್ಯಾಯ ಕೊಡಿಸುವಂತೆ ಮಹಿಳೆಯೊಬ್ಬರು ಗೃಹಸಚಿವ ಪರಮೇಶ್ವರ (Dr.G.Parameshwara) ಅವರ ಬಳಿ ಕೈ ಮುಗಿದು ಅಂಗಲಾಚಿದ್ದಾರೆ. ದೂರು ದಾಖಲಾಗಿ ನಾಲ್ಕು ದಿನ ಕಳೆದರೂ ಆರೋಪಿ ಲಿಂಗರಾಜುನನ್ನ ಬಂಧಿಸದ ಕಾರಣ ಮನನೊಂದ ಹಲ್ಲೆಗೊಳಗಾದ ಮಹಿಳೆಯ ಸಹೋದರಿ ಖುದ್ದು ಗೃಹ ಸಚಿವರನ್ನೇ ಭೇಟಿಯಾಗಿ ನ್ಯಾಯ ಕೊಡಿಸುವಂತೆ ಅಳಲು ತೊಡಿಕೊಂಡಿದ್ದಾರೆ.

ತಿಪಟೂರು ಪಟ್ಟಣದಲ್ಲಿ ಶಾಹಿನ್ ತಾಜ್ ಅವರಿಗೆ ಸೇರಿದ ಕಟ್ಟಡದಲ್ಲಿ ತಿಪಟೂರು ತಾಲೂಕಿನ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜು ಬಾಡಿಗೆಗೆ ನೆಲೆಸಿದ್ದರು. ಆದರೆ ಕಳೆದ ಎರಡೂವರೆ ವರ್ಷಗಳಿಂದ ಬಾಡಿಗೆ ಕೊಡದೆ ಸತಾಯಿಸುತ್ತಿದ್ದನು. ಹೀಗಾಗಿ ಬಾಡಿಗೆ ನೀಡುವಂತೆ ಕೇಳಲು ಹೋದ ಶಾಹಿನ್ ತಾಜ್, ಗುಜರ್ ಬಾನು ಅವರ ಮೇಲೆ ಲಿಂಗರಾಜು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ? ಗೃಹ ಸಚಿವ ಪರಮೇಶ್ವರ್‌ ಉಡಾಫೆ ಮಾತು

ಹಲ್ಲೆಗೊಳಗಾದ ಮಹಿಳೆಯು ತಿಪಟೂರು ಪೊಲೀಸ್ ಠಾಣೆಗೆ ತೆರಳಿ ಲಿಂಗರಾಜು ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಸೆ. 27 ರಂದು ನಡೆದ ಘಟನೆ ಇದಾಗಿದ್ದು, ಗಲಾಟೆ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು