AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶೋತ್ಸವ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ವ್ಯಕ್ತಿ ಸಾವು; ಸೌಂಡ್​ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ

ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿಯುವಾಗ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ.

ಗಣೇಶೋತ್ಸವ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ವ್ಯಕ್ತಿ ಸಾವು; ಸೌಂಡ್​ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ
ಗಣೇಶ ಮೆರವಣಿಗೆ ವೇಳೆ ವ್ಯಕ್ತಿ ಸಾವು
TV9 Web
| Edited By: |

Updated on:Sep 18, 2022 | 3:51 PM

Share

ತುಮಕೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿಯುವಾಗ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷ (48) ಮೃತ ದುರ್ದೈವಿ. ತಡರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ಕುಣಿಯುವಾಗ ವಿರೂಪಾಕ್ಷ ಸಾವನ್ನಪ್ಪಿದ್ದಾನೆ. ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ‌ ವ್ಯಕ್ತವಾಗಿದೆ. ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.‘

ಮಾರಕಾಸ್ತ್ರ ಹಿಡಿದು ಪುಂಡಾಟ ಮಾಡಿದ್ದ ಯುವಕರ  ಬಂಧನ

ಬೆಂಗಳೂರು: ಗಣಪತಿ ವಿಸರ್ಜನೆ ವೇಳೆ ಮಾರಕಾಸ್ತ್ರ ಹಿಡಿದು ಪುಂಡಾಟವಾಡಿದ್ದ ಆರು ಜನ ಯುವಕರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಸಿದ್ದಾರೆ. ಚಿರು, ಅಭಿ, ಯಶವಂತ,ಮನೋಜ್, ಹರೀಶ್, ಪ್ರಜ್ವಲ್ ಬಂಧಿತ ಆರೋಪಿಗಳು.

ಪುಟ್ಟೇನಹಳ್ಳಿಯ ಸಾರಕ್ಕಿ ಲೇಕ್ ಬಳಿ  ಸೆ. 14 ರಂದು ಮಾರಕಾಸ್ತ್ರ, ಬಾಟಲ್ ಹಿಡಿದು ಪುಂಡಾಟ ಮೆರದಿದ್ದರು. ಯುವಕರ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಸುಮೋಟೊ ದೂರು ದಾಖಲಿಸಿಕೊಂಡಿದ್ದರು. ಕೇಸ್ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೀನು ಹಿಡಿಯಲು ಹೋದವರು ನೀರುಪಾಲು: ಬೆಂಗಳೂರಿನ ನೈಸ್ ರಸ್ತೆಯ ಹೆಮ್ಮಿಗೆಪುರದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ನಿನ್ನೆ (ಸೆ. 17) ಸಂಜೆ ಶಿವ , ಶಂಕರ್ ಹಾಗು ಚಿರಂಜೀವಿ ಎಂಬುವರು ಕೆರೆಯಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ತೆಪ್ಪ ಮಗುಚಿ ಬಿದ್ದಿದೆ.

ಆಗ ಚಿರಂಜೀವಿ ಈಜಿ ದಡ ಸೇರಿದ್ದಾನೆ. ಆದರೆ ಶಿವ ಹಾಗು ಶಂಕರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಅಗ್ನಿಶಾಮಕದಳ ಸಿಬ್ಬಂಧಿಯಿಂದ ಮೃತದೇಹ ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Sun, 18 September 22

ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?