13 ಮಹಿಳೆಯರಿದ್ದ ಆಟೋಗೆ ಮುಖಾಮುಖಿ ಡಿಕ್ಕಿ ಹೊಡೆದ ಬೊಲೆರೋ ವಾಹನ, ಆಟೋ ಪಲ್ಟಿ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಟಿ.ಎನ್ ಪೇಟೆ ರೈಲ್ವೆ ಬ್ರಿಡ್ಜ್ ಬಳಿ ಬೊಲೆರೋ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ 13 ಜನರಲ್ಲಿ 9 ಜನರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ತುಮಕೂರು: ಪಾವಗಡ (Pavagada) ತಾಲ್ಲೂಕಿನ ಟಿ.ಎನ್ ಪೇಟೆ ರೈಲ್ವೆ (Railway) ಬ್ರಿಡ್ಜ್ ಬಳಿ ಬೊಲೆರೋ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ (Auto) 13 ಜನರಲ್ಲಿ 9 ಜನರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ತುಮಕೂರು (Tumakuru) ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಂಧ್ರದ ಹಿಂದೂಪುರ ಇಂಡಿಯನ್ ಡಿಸೈನಿಂಗ್ ಗಾರ್ಮೆಂಟ್ಟ್ನಲ್ಲಿ ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. 9 ಜನ ಗಾಯಾಳುಗಳನ್ನು ಪಾವಗಡ ತಾಲ್ಲೂಕು ಆಸ್ಪತ್ರೆ ಚಿಕಿತ್ಸೆ ಪಡಯುತ್ತಿದ್ದಾರೆ.
ಗಾಯಾಳುಗಳು ಪಾವಗಡದ ರೊಪ್ಪ ಗ್ರಾಮದವರು ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಪಾವಗಡ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ: ಉದಯಪುರದಲ್ಲಿ ಗುಂಡು ಹಾರಿಸಿ 4 ದರೋಡೆಕೋರರ ಬಂಧನ, 3 ಕೆಜಿ ಚಿನ್ನ ವಶ
ನಾಪತ್ತೆಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ಶವವಾಗಿ ಪತ್ತೆ
ಧಾರವಾಡ: ನಾಪತ್ತೆಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ಶೋಭಾ(22) ಧಾರವಾಡ ತಾಲೂಕಿನ ಸವದತ್ತಿ ರಸ್ತೆಯ ಮರೇವಾಡ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶೋಭಾ ಮಾದರರನ್ನು ಕೊಲೆಗೈದು ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:49 pm, Wed, 6 July 22