ತುಮಕೂರಿನಲ್ಲಿ ಕಾರು, ಟಿಟಿ ವಾಹನ ನಡುವೆ ಡಿಕ್ಕಿ! ಇಬ್ಬರು ದುರ್ಮರಣ
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವಾಪಸ್ ಹೋಗುತಿದ್ದರು. ಈ ವೇಳೆ ಕಾರು ಡಿವೈಡರ್ ದಾಟಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟಿಟಿ ವಾಹನದಲ್ಲಿದ್ದ ಐವರಿಗೆ ಗಾಯವಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು: ಕಾರು (Car) ಮತ್ತು ಟಿಟಿ ವಾಹನ (TT Vehicle) ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಕುಣಿಗಲ್ ತಾಲೂಕಿನ ಬೇಗೂರು ಬೈಪಾಸ್ ಬಳಿ ನಡೆದಿದೆ. ಮೃತರಾದ ರಘು(27), ಸಂತೋಷ(21) ಬೆಂಗಳೂರು ಮೂಲದವರು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವಾಪಸ್ ಹೋಗುತಿದ್ದರು. ಈ ವೇಳೆ ಕಾರು ಡಿವೈಡರ್ ದಾಟಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟಿಟಿ ವಾಹನದಲ್ಲಿದ್ದ ಐವರಿಗೆ ಗಾಯವಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಪ್ರಕರಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರೈತನ ಬರ್ಬರ ಹತ್ಯೆ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕರಿಶೆಟ್ಟಿಹಟ್ಟಿ ಗ್ರಾಮದಲ್ಲಿ ದುಷ್ಕರ್ಮಿಗಳು ರೈತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚೌಕೇನಹಳ್ಳಿ ನಿವಾಸಿ ಮೂಡ್ಲಯ್ಯ(40) ಕೊಲೆಯಾದ ರೈತ. ತೋಟದಿಂದ ಬೈಕ್ನಲ್ಲಿ ವಾಪಸ್ ಮನೆಗೆ ತೆರಳುವಾಗ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪುರದಕಟ್ಟಿ ಕೆರೆಯಲ್ಲಿ ನಡೆದಿದೆ. ಹಸು ಮೈ ತೊಳೆಯಲು ಹೋದಾಗ ರಮೇಶ್ (15) ಕೆರೆಯಲ್ಲಿ ಮುಳುಗಿದ್ದಾನೆ.
ಪಲ್ಟಿಯಾದ ಆಟೋ: ಮೈಸೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಅಪಘಾತದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕೆ.ಆರ್.ಎಸ್.ರಸ್ತೆಯ ಇಎಸ್ಐ ಆಸ್ಪತ್ರೆ ಬಳಿ ಸಂಭವಿಸಿದೆ. ಸ್ಥಳೀಯರು ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಪೆಟ್ರೋಲ್ ಸುರಿದು ಕೊಲೆಗೆ ಯತ್ನ: ದೊಡ್ಡಬಳ್ಳಾಪುರ: ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ವೃದ್ಧನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾರೆ. ಬಿಡಿಸಲು ಹೋದ ವೃದ್ಧನ ಮಗನಿಗೂ ಪೆಟ್ರೋಲ್ ಹಾಕಿ ಕೊಲೆ ಮಾಡಲು ಮುಂದಾಗಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ. ರಾಮಯ್ಯ (64) ಗಾಯಾಳು ವೃದ್ಧ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮಯ್ಯನ ಅಣ್ಣನ ಮಕ್ಕಳಿಂದಲೇ ಅಮಾನವೀಯ ದುಷ್ಕೃತ್ಯ ನಡೆದಿದೆ. ಚಿಕ್ಕವೆಂಕಟರಮಣಪ್ಪ ಮತ್ತು ರಾಮಯ್ಯ ಕುಟುಂಬಸ್ಥರ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಘಟನೆ ಸಂಬಂಧ ಹೊಸಹಳ್ಳಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
ಬಾಯ್ಫ್ರೆಂಡ್ ಜತೆ ಇರಾ ಖಾನ್ ಬರ್ತ್ಡೇ ಆಚರಣೆ; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು
GST ಆಡಿಟ್ ಮಾಡಿಕೊಡುವುದಾಗಿ ಹೇಳಿ 10 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್!
Published On - 9:02 am, Tue, 10 May 22