ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳ ಸಂಚಾರ ರದ್ದು
ತುಮಕೂರು ನಗರ ಹಾಗೂ ಮಲ್ಲಸಂದ್ರ ರೈಲು ನಿಲ್ದಾಣಗಳ ಮಧ್ಯೆ ವಿವಿಧ ಕಾಮಗಾರಿ ಹಿನ್ನಲೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರ ರದ್ದು, ಭಾಗಶಃ ರದ್ದುಗೊಳಿಸುವ ಜೊತೆಗೆ ಕೆಲವು ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ಯಾವೆಲ್ಲಾ ಮಾರ್ಗದ ರೈಲು ಸಂಚಾರ ರದ್ದು ಎಂಬ ಮಾಹಿತಿ ಇಲ್ಲಿದೆ.

ತುಮಕೂರು, ಡಿಸೆಂಬರ್ 11: ತುಮಕೂರು ಮತ್ತು ಮಲ್ಲಸಂದ್ರ (Tumakuru and Mallasandra) ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿ ಹಿನ್ನಲೆ ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್‌ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ ಮತ್ತು ಮುದ್ದಲಿಂಗನಹಳ್ಳಿ ಹಾಲ್ಸ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲೇತುವೆ ನಿರ್ಮಾಣ ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್-28 ರಲ್ಲಿನ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆ ಕೆಲವು ರೈಲು ಸೇವೆಗಳನ್ನು ರದ್ದು, ಮತ್ತೆ ಕೆಲ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಜೊತೆಗೆ ಇನ್ನು ಕೆಲವು ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ (South Western Railway) ಮಾಹಿತಿ ನೀಡಿದೆ.
ರದ್ದಾಗಿರುವ ರೈಲುಗಳು
- ಡಿಸೆಂಬರ್ 17 ಮತ್ತು 24 ರಂದು ರೈಲು ಸಂಖ್ಯೆ (16239) ಚಿಕ್ಕಮಗಳೂರು-ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್, ರೈಲು ಸಂಖ್ಯೆ (16240) ಯಶವಂತಪುರ-ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್ ಹಾಗೂ ರೈಲು ಸಂಖ್ಯೆ (12614) ಕೆಎಸ್‌ಆರ್ ಬೆಂಗಳೂರು-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ನೈರುತ್ಯ ರೈಲ್ವೆ ಟ್ವೀಟ್
Kindly note:
Due to essential engineering works between Tumakuru and Mallasandra, including girder replacement at Bheemasandra Limited Height Subway and Foot Over Bridge works at Bheemasandra and Muddalinganahalli, as well as works at Level Crossing–28 between Nidvanda and… pic.twitter.com/LSfnAQ538Y
— South Western Railway (@SWRRLY) December 11, 2025
ಭಾಗಶಃ ರದ್ದಾಗಿರುವ ರೈಲುಗಳು
- ಡಿ. 17, 20, 21 ಹಾಗೂ 24ರಂದು ರೈಲು ಸಂಖ್ಯೆ (66567) ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಸಂಚಾರ ಕೊನೆಗೊಳ್ಳುತ್ತದೆ.
- ಡಿ. 17, 20, 21, 24 ರಂದು ರೈಲು ಸಂಖ್ಯೆ (66572) ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ಪ್ರಯಾಣವನ್ನು ಆರಂಭಿಸುತ್ತದೆ.
- ಡಿ. 17, 20, 21, 24 ರಂದು ರೈಲು ಸಂಖ್ಯೆ (20652) ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್‌ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್‌ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರ ಕೊನೆಗೊಳ್ಳುತ್ತದೆ.
- ಡಿ. 17, 20, 21, 24 ರಂದು ರೈಲು ಸಂಖ್ಯೆ (12725) ಕೆಎಸ್‌ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಅರಸೀಕೆರೆಯ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್‌ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದಲೇ ಸಂಚಾರ ಆರಂಭಿಸಲಿದೆ.
- ಡಿ.17, 24ರಂದು ರೈಲು ಸಂಖ್ಯೆ (12726) ಧಾರವಾಡ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್‌ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್‌ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರ ಕೊನೆಗೊಳಿಸಲಿದೆ.
- ಡಿ. 17 ಮತ್ತು 24 ರಂದು, ರೈಲು ಸಂಖ್ಯೆ (66571) ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಸಂಚಾರ ಕೊನೆಗೊಳಿಸಲಿದೆ.
- ಡಿ. 17 ಮತ್ತು 24 ರಂದು, ರೈಲು ಸಂಖ್ಯೆ (66568) ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ಸಂಚಾರ ಆರಂಭಿಸಲಿದೆ.
- ಡಿ. 17 ಮತ್ತು 24ರಂದು, ರೈಲು ಸಂಖ್ಯೆ (56281) ಚಾಮರಾಜನಗರ-ತುಮಕೂರು ಪ್ಲಾಸೆಂಜರ್ ರೈಲು ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ಚಿಕ್ಕಬಾಣಾವರದಲ್ಲಿ ಸಂಚಾರ ಕೊನೆಗೊಳ್ಳಲಿದೆ.
ರೈಲುಗಳ ಮಾರ್ಗ ಬದಲಾವಣೆ
- ಡಿ. 16 ಮತ್ತು 23 ರಂದು ಹೊರಡುವ ರೈಲು ಸಂಖ್ಯೆ (17310) ವಾಸ್ಕೋ ಡ ಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಇದು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ಡಿ. 16 ಮತ್ತು 23 ರಂದು ರೈಲು ಸಂಖ್ಯೆ (17316) ವೇಲಂಕಣಿ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
- ಡಿ. 17, 20, 21, 24 ರಂದು ರೈಲು ಸಂಖ್ಯೆ (17326) ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆ ಹೊಂದಿರುವುದಿಲ್ಲ.
- ಡಿ. 17, 20, 21, 24 ರಂದು ರೈಲು ಸಂಖ್ಯೆ (16579) ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲುಗಡೆ ಹೊಂದಿರುವುದಿಲ್ಲ.
ರೈಲುಗಳ ನಿಯಂತ್ರಣ
- ಡಿ. 17 ಮತ್ತು 24 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ (22685) ಯಶವಂತಪುರ-ಚಂಡೀಗಢ ಎಕ್ಸ್‌ಪ್ರೆಸ್, (17309) ಯಶವಂತಪುರ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ ಮತ್ತು (20651) ಕೆಎಸ್‌ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಣವಾಗಲಿವೆ.
- ಡಿ. 19 ಮತ್ತು 20 ರಂದು ಹೊರಡುವ ರೈಲು ಸಂಖ್ಯೆ (17310) ವಾಸ್ಕೋ ಡ ಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಪ್ರಯಾಣದ ಸಮಯದಲ್ಲಿ ಮಾರ್ಗ ಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲುಗಳ ಮರು ವೇಳಾಪಟ್ಟಿ
- ಡಿ. 15 ಮತ್ತು 22 ರಂದು ರೈಲು ಸಂಖ್ಯೆ (19667) ಉದಯಪುರ ಸಿಟಿ-ಮೈಸೂರು ವೀಕ್ಲಿ ಹಮ್ ಸಫರ್ ಎಕ್ಸ್‌ಪ್ರೆಸ್ ರೈಲು ಉದಯಪುರ ಸಿಟಿಯಿಂದ 180 ನಿಮಿಷ, ಮತ್ತು ರೈಲು ಸಂಖ್ಯೆ (22497) ಶ್ರೀ ಗಂಗಾನಗರ-ತಿರುಚ್ಚಿರಾಪಳ್ಳಿ ಹಮ್ ಸಫರ್ ವೀಕ್ಲಿ ಎಕ್ಸ್‌ಪ್ರೆಸ್ ಶ್ರೀ ಗಂಗಾನಗರದಿಂದ 120 ನಿಮಿಷ ತಡವಾಗಿ ಹೊರಡಲಿವೆ. ಅಲ್ಲದೆ, ರೈಲು ಸಂಖ್ಯೆ (22497) ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
- ಡಿ. 17, 24 ರಂದು ರೈಲು ಸಂಖ್ಯೆ (12649) ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, 56282 ತುಮಕೂರು-ಚಾಮರಾಜನಗರ ದೈನಂದಿನ ಪ್ಯಾಸೆಂಜರ್ ಮತ್ತು (12777) ಎಸ್‌ಎಸ್‌ಎಸ್ ಹುಬ್ಬಳ್ಳಿ-ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 120 ನಿಮಿಷಗಳು ತಡವಾಗಿ ಹೊರಡಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Thu, 11 December 25



