ತುಮಕೂರು: ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡರಿಂದ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ
ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ತುಮಕೂರು ಜಿಲ್ಲೆಯಲ್ಲಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ ಆರಂಭವಾಗಿದೆ. ತುಮಕೂರು ನಗರ ಜೈಪುರದ ದಲಿತ ಮುಖಂಡ ನವೀನ್ ಎನ್ನುವವರ ಮನೆಯಲ್ಲಿ ಬಿಜೆಪಿ ಮುಖಂಡರು ಸಹಪಂಕ್ತಿ ಭೋಜನ ಮಾಡಿದ್ದಾರೆ.
ತುಮಕೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಹೋಟೆಲಿನಿಂದ ತಿಂಡಿ ತರಿಸಿ ದಲಿತರ ಮನೆಯಲ್ಲಿ ಭೋಜನ ಮಾಡಿದ್ವಿ ಎಂದು ಈ ಹಿಂದೆ ಎಡವಟ್ಟು ಮಾಡಿಕೊಂಡ ಬಿಜೆಪಿ (BJP) ಈಗ ಮತ್ತೇ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ ಶುರುಮಾಡಿದೆ. ಆದರೆ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಟ್ಟ ಬಿಜೆಪಿ ದಲಿತರ ಮನೆಯಲ್ಲೇ ಅಡುಗೆ ತಯಾರಿಸಿ ಸಹಪಂಕ್ತಿ ಭೋಜನ(Dinner) ಮಾಡುತ್ತಿದೆ. ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿ (Ambedkar jayanti) ಪ್ರಯುಕ್ತ ತುಮಕೂರು ಜಿಲ್ಲೆಯಲ್ಲಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ ಆರಂಭವಾಗಿದೆ. ತುಮಕೂರು ನಗರ ಜೈಪುರದ ದಲಿತ ಮುಖಂಡ ನವೀನ್ ಎನ್ನುವವರ ಮನೆಯಲ್ಲಿ ಬಿಜೆಪಿ ಮುಖಂಡರು ಸಹಪಂಕ್ತಿ ಭೋಜನ ಮಾಡಿದ್ದಾರೆ.
ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ಲಕ್ಷ್ಮಿಶ್, ಮುಖಂಡರಾದ ಓಂಕಾರ್ ಸೇರಿ ಹಲವು ಪ್ರಮುಖರು ನವೀನ್ ಅವರ ಕುಟುಂಬದ ಜೊತೆ ಕುಳಿತು ಊಟ ಮಾಡಿದ್ದಾರೆ. ಅನ್ನ, ಸಾಂಬಾರ್, ಒಬ್ಬಟ್ಟನ್ನು ಸವಿದಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
ಟಿಪ್ಪು ಬಗ್ಗೆ ನಾವು ಓದಿದ್ದು, ತಿಳಿದುಕೊಂಡಿದ್ದು ಅಸತ್ಯ, ಸುಳ್ಳು: ಪ್ರಮೋದ್ ಮುತಾಲಿಕ್
ಟಿಪ್ಪು ಬಗ್ಗೆ ನಾವು ಓದಿದ್ದು, ತಿಳಿದುಕೊಂಡಿದ್ದು ಅಸತ್ಯ, ಸುಳ್ಳು. ಟಿಪ್ಪು ಒಬ್ಬ ಮತಾಂಧ, ಕ್ರೂರಿ, ದೇಶದ್ರೋಹಿ, ಕನ್ನಡ ದ್ರೋಹಿ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ವ್ಯಕ್ತಿ ಟಿಪ್ಪು. ಕೊಡಗು, ಕೇರಳಕ್ಕೆ ಹೋದರೆ ಅಲ್ಲಿರುವ ಬ್ಯಾರಿಗಳು ಸಿಗ್ತಾರೆ. ಅವರೆಲ್ಲರೂ ಹಿಂದೆ ಹಿಂದೂಗಳು, ಆದರೆ ಮತಾಂತರ ಆದವರು. ಈ ಹಿಂದೆ ಮಾಡಿದಂತಹ ತಪ್ಪನ್ನು ಮತ್ತೆ ಮಾಡುವುದು ಬೇಡ. ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಸಂಪೂರ್ಣ ರದ್ದುಗೊಳಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಾಳೆ ಪರೀಕ್ಷೆಗೆ ಹಿಜಾಬ್ ನಿರ್ಬಂಧ ಆದೇಶ ವಿಚಾರ
ಪರೀಕ್ಷೆ ಬರೆಯುವಂತೆ ಧರ್ಮ ಗುರುಗಳು ಮನವಿ ಮಾಡಲಿ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮೌಲ್ವಿಗಳು ಮನವಿ ಮಾಡಲಿ. ಒಂದು ಕಾರಣಕ್ಕೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ವಿದ್ಯೆಗೆ ಕಲ್ಲು ಹಾಕಬೇಡಿ, ಎಸ್ಎಸ್ಎಲ್ಸಿ ಅಂದ್ರೆ ಪ್ರಮುಖ ಘಟ್ಟ. ಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಿರಿ. ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ಅದನ್ನ ಪಾಲಿಸೋಣ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.
Crime News: ದಲಿತ ಮಹಿಳೆಗೆ ಬ್ಲಾಕ್ಮೇಲ್ ಮಾಡಿ, ಶಾಲಾ ವಿದ್ಯಾರ್ಥಿಗಳು ಸೇರಿ 8 ಜನರಿಂದ ನಿರಂತರ ಅತ್ಯಾಚಾರ!
Published On - 6:35 pm, Sun, 27 March 22