ದೇವರ ದರ್ಶನ ಮುಗಿಸಿ ವಾಪಸ್ ಬರುವ ವೇಳೆ ಕಾರು ಪಲ್ಟಿ, ಮಗು ಸ್ಥಳದಲ್ಲೇ ಸಾವು – ಬೈಕ್​ಗೆ ಲಾರಿ ಡಿಕ್ಕಿ ದಂಪತಿ ದಾರುಣ ಸಾವು, ಮಗು ಬಚಾವ್

ಮಾಗಡಿ ತಾಲೂಕಿನ ಕುದೂರು ಹೋಬಳಿಯ ನಾರಸಂದ್ರ ಗ್ರಾಮದ ಪರಮೇಶ್ ಹಾಗೂ ರಮ್ಯ ದಂಪತಿ ಮಗು ಸಮರ್ಥ ಮೃತಪಟ್ಟ ನತದೃಷ್ಟ ಮಗು. ಪರಮೇಶ್ ಕುಟುಂಬಸ್ಥರು ಇಂದು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ, ಕಾರಿನಲ್ಲಿ ವಾಪಸ್ ಆಗ್ತಿದ್ರು. ಈ ವೇಳೆ ಚಾಲನಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ.

ದೇವರ ದರ್ಶನ ಮುಗಿಸಿ ವಾಪಸ್ ಬರುವ ವೇಳೆ ಕಾರು ಪಲ್ಟಿ, ಮಗು ಸ್ಥಳದಲ್ಲೇ ಸಾವು - ಬೈಕ್​ಗೆ ಲಾರಿ ಡಿಕ್ಕಿ ದಂಪತಿ ದಾರುಣ ಸಾವು, ಮಗು ಬಚಾವ್
ದೇವರ ದರ್ಶನ ಮುಗಿಸಿ ವಾಪಸ್ ಬರುವ ವೇಳೆ ಕಾರು ಪಲ್ಟಿ, ಮಗು ಸ್ಥಳದಲ್ಲೇ ಸಾವು
Edited By:

Updated on: Jul 09, 2022 | 6:04 PM

ತುಮಕೂರು: ದೇವರ ದರ್ಶನ ಮುಗಿಸಿ ವಾಪಸ್ ಬರುವ ವೇಳೆ ಕಾರು ಪಲ್ಟಿಯಾಗಿ ಎರಡೂವರೆ ತಿಂಗಳ ಮಗು ಸ್ಥಳದಲ್ಲೇ ಅಸುನೀಗಿದೆ. ಸಮರ್ಥ ಸಾವನ್ನಪ್ಪಿದ ಮಗು. ಕಾರಿನಲ್ಲಿದ್ದ ತಂದೆ ತಾಯಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ನ ರಾಷ್ಟ್ರೀಯ ಹೆದ್ದಾರಿ 75 ರ ನಾಗೇಗೌಡನ ಪಾಳ್ಯ ಗೇಟ್ ಬಳಿ ಘಟನೆ ನಡೆದಿದೆ.

ಮಾಗಡಿ ತಾಲೂಕಿನ ಕುದೂರು ಹೋಬಳಿಯ ನಾರಸಂದ್ರ ಗ್ರಾಮದ ಪರಮೇಶ್ ಹಾಗೂ ರಮ್ಯ ದಂಪತಿ ಮಗು ಸಮರ್ಥ ಮೃತಪಟ್ಟ ನತದೃಷ್ಟ ಮಗು. ಪರಮೇಶ್ ಕುಟುಂಬಸ್ಥರು ಇಂದು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ, ಕಾರಿನಲ್ಲಿ ವಾಪಸ್ ಆಗ್ತಿದ್ರು. ಈ ವೇಳೆ ಚಾಲನಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಸ್ಥಳಕ್ಕೆ ಅಮೃತೂರು ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ದಂಪತಿ ದಾರುಣ ಸಾವು, ಮಗು ಬಚಾವ್

ಹೊಸೂರು: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ದಂಪತಿ ದಾರುಣವಾಗಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ನಾಲ್ಕು ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕರ್ನಾಟಕ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಈ ದುರ್ಘಟನೆ ನಡೆದಿದೆ. ಅನ್ಬು ಮತ್ತು ಸರಿತಾ ಅಪಘಾತದಲ್ಲಿ ಮೃತ ಪಟ್ಟ ದಂಪತಿ.

ಅನ್ಬು-ಸರಿತಾ ದಂಪತಿ 4 ತಿಂಗಳ ಮಗುವಿನ‌ ಜೊತೆ ಬೈಕ್ ನಲ್ಲಿ ಊರಿಗೆ ಹೊರಟಿದ್ದರು. ಲಾರಿ ಚಾಲಕರ ಅಜಾಗರೂಕತೆಯಿಂದ ಅಪಘಾತ ನಡೆದಿದೆ. ಟ್ಯಾಂಕರ್ ಲಾರಿ ಹೆದ್ದಾರಿಯಲ್ಲಿ ಏಕಾಏಕಿ ಯು ಟರ್ನ್ ತೆಗೆದುಕೊಳ್ಳಲು ಮುಂದಾದಾಗ ಈ ಘಟನೆ ನಡೆದಿದೆ. ಅತಿವೇಗವಾಗಿ ಹಿಂಬದಿಯಿಂದ ಬಂದ ಲಾರಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಸ್ಥಳದಲ್ಲಿಯೇ ಪತ್ನಿ ಸರಿತಾ ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವಾಗ ಪತಿ ಅನ್ಬು ಅಸುನೀಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Published On - 5:54 pm, Sat, 9 July 22