ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ನಿಡುವ ಸಲುವಾಗಿ ನಗರಕ್ಕೆ ಆಗಮಿಸಿದ್ದರು. ಅವರು ಕಾರು ಇಳಿಯುತ್ತಿದ್ದಂತೆ ಜನರು ಜಮಾವಣೆಗೊಂಡ ಹಿನ್ನೆಲೆ ಸ್ಥಳದಲ್ಲಿಯೇ ಇದ್ದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, DySP ಶ್ರೀನಿವಾಸ್ ವಿರುದ್ಧ ಗರಂ ಆದರು. ಜನರು ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಸಿಎಂ ಬೊಮ್ಮಾಯಿ ಜೋರು ದನಿಯಲ್ಲೆ ಕಿವಿಮಾತು ಹೇಳಿದರು. ಐಜಿ ಹತ್ತಿರ ಮಾತನಾಡಿದ ಸಿಎಂ ಬೊಮ್ಮಾಯಿ ಸೀನಿಯರ್ ಆಫೀಸರ್ ಆಗಿದೀಯಾ ಗೊತ್ತಾಗಲ್ವ ನಿನಗೆ? ಹೋಗು ದೂರ ನಿಲ್ಲು ಎಂದು ಝಾಡಿಸಿದರು.
ಒಟ್ಟಿನಲ್ಲಿ ಇಂದು ಕೋವಿಡ್ ಮಾರಿ ಕಟ್ಟಿಹಾಕುವ ನಿಟ್ಟಿನಲ್ಲಿ ತ್ವದ ನಿರ್ಧಾರ ತೆಗೆದುಕೊಳ್ಳಬೇಕಾದ, ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಸಿಎಂ ಬೊಮ್ಮಾಯಿ ಕೊರೊನಾ ಕಾಟದ ಬಗ್ಗೆ ಮೈಯೆಲ್ಲಾ ಕಣ್ಣಾಗಿರುವುದು ಸ್ಪಷ್ಟವಾಯಿತು.
ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡ್ತೇವೆ : ಸಿಎಂ ಬಸವರಾಜ ಬೊಮ್ಮಾಯಿ
ದಾಸೋಹ ನಮ್ಮ ಕರ್ನಾಟಕದ ಒಂದು ಪರಂಪರೆ. ವಿಶೇಷವಾಗಿ ಶ್ರೀಶರಣರು ಅದನ್ನ ನಡೆಸಿಕೊಂಡು ಬಂದಿದ್ದಾರೆ. ದಿವಂಗತ ಶಿವಕುಮಾರ ಶ್ರೀಗಳು 8-10 ದಶಕಗಳಿಂದ ಅನ್ನದಾಸೋಹ ಜೊತೆಗೆ ಅಕ್ಷರ ದಾಸೋಹ, ಜ್ಞಾನ ದಾಸೋಹ ಮಾಡಿದ್ದಾರೆ. ಈ ಆಧುನಿಕ ಕಾಲದಲ್ಲಿ ಇದಕ್ಕೆ ಮಹತ್ವ ಕೊಡಬೇಕು ಅನ್ನೋ ನಿಟ್ಟಿನಲ್ಲಿ ದಾಸೋಹವನ್ನು ದಿನಾ ಮಾಡುತ್ತಿದ್ದೇವೆ. ನಮ್ಮಷ್ಟಕ್ಕೆ ನಾವೇ ದಾಸೋಹ ಪರಂಪರೆಗೆ ಸಮರ್ಪಣೆ ಮಾಡಿಕೊಳ್ಳುವ ಧ್ಯೇಯ ಹೊಂದಿರಬೇಕು ಎಂದು ಸಿದ್ದಗಂಗಾ ಮಠದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಮ್ಮ ಸರ್ಕಾರ ಅನ್ನ ದಾಸೋಹ ಮಾಡೋದ್ರಲ್ಲಿ ಹಲವು ಕ್ರಮ ಕೈಗೊಂಡಿದೆ. 4 ಕೆಜಿ ಅಕ್ಕಿಯಿಂದ 5 ಕೆಜಿ ಅಕ್ಕಿ, ಗೋಧಿ ಹೆಚ್ಚಳ ಮಾಡಿದೆ. ಈ ರೀತಿ ದಾಸೋಹ ಮಾಡುವಂತಾ ಮಠಗಳಿಗೆ ಪಡಿತರ ವ್ಯವಸ್ಥೆ ಮಾಡುತ್ತಿದ್ದೇವೆ. ಇದರ ಜೊತೆಗೆ ಮಕ್ಕಳಿಗೆ ಅಕ್ಷರ ದಾಸೋಹ ಮಾಡುವಂತಹದ್ದು ಇದೆ. ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕೊಡುವ ಉದ್ದೇಶದಿಂದ 150 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಇದರ ಜೊತೆಗೆ ಆಶ್ರಯ ದಾಸೋಹ ಕೈಂಕರ್ಯವನ್ನು ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ.
ಕರ್ನಾಟಕದಲ್ಲಿರುವ ಯಾರಿಗೆ ಅನ್ನ, ಅಕ್ಷರ, ಆಶ್ರಯ ಅವಶ್ಯಕತೆ ಇದೆಯೋ ಅವರಿಗೆ ನೀಡುವ ಕೆಲಸ ಮಾಡ್ತಿದ್ದೇವೆ. ಕರ್ನಾಟಕ ಜನರಿಗೆ ಈ ದಾಸೋಹದ ದಿನವನ್ನ ಸಮರ್ಪಣೆ ಮಾಡಿದ್ದೇವೆ. ನಾನು ಇಂದು ಸಾಂಕೇತಿಕವಾಗಿ ದಾಸೋಹದ ದಿನಕ್ಕೆ ಚಾಲನೆ ನೀಡಿದ್ದೇನೆ. ಹಿರಿಯ ಶ್ರೀಗಳು ಈ ಮಠದಲ್ಲಿ ದಾಸೋಹ ಪರಂಪರೆಯನ್ನ ಮಾಡಿದ್ದಾರೆ. ಅದಕ್ಕೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಈ ದಾಸೋಹ ಪರಂಪರೆಯನ್ನ ಸರ್ಕಾರ ಗುರುತಿಸಿದೆ. ದಾಸೋಹ ದಿನ ಮುಂದುವರೆಸಲು ವ್ಯವಸ್ಥಿತವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮುಂದುವರೆಸುತ್ತೇವೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡ್ತೇವೆ ಎಂದು ಸಿದ್ದಗಂಗಾ ಮಠದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
‘ಜನ ಸೇರಿಸಬೇಡಿ ಅಂದ್ರೆ ಯಾಕೆ ಸೇರಿಸಿದ್ದೀರಾ?’ ತುಮಕೂರಿನಲ್ಲಿ ಜನಜಂಗುಳಿ ನೋಡಿ ಸಿಎಂ ಗರಂ