ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂಲಸೌಕರ್ಯ ಕೊರತೆ; ತುಮಕೂರಿನಲ್ಲಿ ಸೋಂಕಿತರ ಆಕ್ರೋಶ

ಕೊವಿಡ್ ಕೇರ್ ಸೆಂಟರ್​ನಲ್ಲಿ ಬಿಸಿ ನೀರು ಸಿಗುತ್ತಿಲ್ಲ. ಸ್ವಚ್ಛತೆಯಿಲ್ಲ, ವೈದ್ಯರು ರೋಗಿಗಳಿಗೆ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ ಸೋಂಕಿತರು ಕೊವಿಡ್ ಕೇರ್ ಸೆಂಟರ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂಲಸೌಕರ್ಯ ಕೊರತೆ; ತುಮಕೂರಿನಲ್ಲಿ ಸೋಂಕಿತರ ಆಕ್ರೋಶ
ಸಾಂದರ್ಭಿಕ ಚಿತ್ರ

ತುಮಕೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೆ, ಈ ನಡುವೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂಲಸೌಕರ್ಯ ಕೊರತೆಯು ಇನ್ನೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಜಿಲ್ಲೆಯ ಕೊವಿಡ್ ಕೇರ್ ಸೆಂಟರ್​ನಲ್ಲಿ ಇರುವ ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ. ಸೋಂಕಿತರಿಗೆ ಗುಣಮಟ್ಟದ ಊಟ ತಿಂಡಿ ನೀಡುತ್ತಿಲ್ಲ. ಕೊವಿಡ್ ಕೇರ್ ಸೆಂಟರ್​ನಲ್ಲಿ ಬಿಸಿ ನೀರು ಸಿಗುತ್ತಿಲ್ಲ. ಸ್ವಚ್ಛತೆಯಿಲ್ಲ, ವೈದ್ಯರು ರೋಗಿಗಳಿಗೆ ಸ್ಪಂದಿಸುತ್ತಿಲ್ಲವೆಂದು ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ.

ಜನರ ವಿರಳ
ರಾಜ್ಯ ಸರ್ಕಾರ ನಾಳೆಯಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಕೆಲವು ಜಿಲ್ಲೆಗಳಲ್ಲಿ ಇಂದು ಅಗತ್ಯ ವಸ್ತುಗಳನ್ನು ಖರೀದಿಸಲು ಮಾರ್ಕೆಟ್ ಬಳಿ ಮುಗಿಬಿದ್ದಿದ್ದಾರೆ. ಆದರೆ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚು ಜನರು ಕಾಣಿಸಿಕೊಂಡಿಲ್ಲ. ವಿರಳವಾಗಿ ತರಕಾರಿ, ಹೂ ಕೊಳ್ಳಲು ಅಂತರಸನಹಳ್ಳಿ ಮಾರುಕಟ್ಟೆಗೆ ಜನರು ಬಂದಿದ್ದಾರೆ.

ಇದನ್ನೂ ಓದಿ

ಕೊವಿಡ್ ಗೆದ್ದ 93 ವರ್ಷದ ಬೆಂಗಳೂರಿನ ವೃದ್ಧ; ನಮ್ಮಲ್ಲಿ ಆತ್ಮವಿಶ್ವಾಸವೊಂದಿರಲಿ ಸಾಕು

‘ಆಕ್ಸಿಜನ್ ಸಿಲಿಂಡರ್ ವಿಷಯದಲ್ಲಿ ರಾಜಕೀಯ ಮಾಡ್ತಿರೋದು ಹೇಸಿಗೆ ಅನಿಸಿದೆ; ನಿಮ್ಮ ಕೈಲಾದರೆ ಖಾಲಿ‌ ಸಿಲಿಂಡರ್‌ ಆದ್ರೂ ತನ್ನಿ’

(corona infected expressed outrage over lack of infrastructure at covid Care Center in tumkur)