ಚಹಾ ಅಂಗಡಿ ಮುಂದೆ ಡಿಎಸ್ಎಸ್ ಸಂಚಾಲಕನ ಬರ್ಬರ ಹತ್ಯೆ; ಶವಾಗಾರದಲ್ಲಿ ಅಂತಿಮ ದರ್ಶನ ಪಡೆದ ಶಾಸಕ ಶ್ರೀನಿವಾಸ್

ಡಿಎಸ್ಎಸ್ ತಾಲೂಕು ಸಂಚಾಲಕನಾಗಿದ್ದ ಕುರಿಮೂರ್ತಿ ಟೀ ಅಂಗಡಿ ಮುಂದೆ ಕುಳಿತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಹಾ ಅಂಗಡಿ ಮುಂದೆ ಡಿಎಸ್ಎಸ್ ಸಂಚಾಲಕನ ಬರ್ಬರ ಹತ್ಯೆ; ಶವಾಗಾರದಲ್ಲಿ ಅಂತಿಮ ದರ್ಶನ ಪಡೆದ ಶಾಸಕ ಶ್ರೀನಿವಾಸ್
ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ
TV9kannada Web Team

| Edited By: Ayesha Banu

Jun 15, 2022 | 7:47 PM

ತುಮಕೂರು: ಜಿಲ್ಲೆ ಗುಬ್ಬಿ ಪಟ್ಟಣದ ಬಿ.ಎಸ್.ರಸ್ತೆಯಲ್ಲಿ ಹಾಡಹಗಲೇ ಡಿಎಸ್ಎಸ್(DSS) ಮುಖಂಡ, ಗುಬ್ಬಿ ಪಟ್ಟಣ ಪಂಚಾಯಿತಿ 9ನೇ ವಾರ್ಡ್ನ ಮಾಜಿ ಸದಸ್ಯ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ(45) ಬರ್ಬರ ಹತ್ಯೆ(Murder) ನಡೆದಿದೆ. ಡಿಎಸ್ಎಸ್ ತಾಲೂಕು ಸಂಚಾಲಕನಾಗಿದ್ದ ಕುರಿಮೂರ್ತಿ ಟೀ ಅಂಗಡಿ ಮುಂದೆ ಕುಳಿತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಣದ ವಿಚಾರವಾಗಿ ಹಳೆ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗುಬ್ಬಿ ಶಾಸಕ ಶ್ರೀನಿವಾಸ್​ ಬೆಂಬಲಿಗ ನರಸಿಂಹಮೂರ್ತಿ ಗುಬ್ಬಿ‌ ಪಟ್ಟಣದಲ್ಲಿ ದಲಿತ ಮುಖಂಡರಲ್ಲಿ ಹೆಸರು ಮಾಡಿದ್ದರು. ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಶವಾಗಾರಕ್ಕೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆಗಮಿಸಿದ್ದಾರೆ. ಹಾಗೂ ನರಸಿಂಹಮೂರ್ತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನರಸಿಂಹಮೂರ್ತಿ ಜೆಡಿಎಸ್ ಮುಖಂಡ ಹಿನ್ನೆಲೆ ಶಾಸಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: BBMP Schools: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಹೊಸ ಕೊರೊನಾ ಮಾರ್ಗಸೂಚಿ ಪ್ರಕಟ

ಕೊಲೆ ವಿಚಾರ ತಿಳಿದು ಶವಾಗಾರಕ್ಕೆ ಸಚಿವ ಆರಗ ಜ್ಞಾನೇಂದ್ರ ಭೇಟಿ ಗುಬ್ಬಿ ಶಾಸಕ ಶ್ರೀನಿವಾಸ್​ ಬೆಂಬಲಿಗ ನರಸಿಂಹಮೂರ್ತಿ ಕೊಲೆ ಹಿನ್ನೆಲೆ ಡಿಸಿ ಕಚೇರಿ ಎದುರು ದಲಿತ ಮುಖಂಡರು ಗೃಹಸಚಿವ ಆರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಸದ್ಯ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರಗ ಜ್ಞಾನೇಂದ್ರ ಕೊಲೆ ವಿಚಾರ ತಿಳಿದು ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದು ದಲಿತರಿಗೆ ನ್ಯಾಯ ಕೊಡಿಸುವಂತೆ ಗೃಹಮಂತ್ರಿಗೆ ಕುಟುಂಬಸ್ಥರು ಒತ್ತಾರಿಸಿದ್ದಾರೆ. ನರಸಿಂಹಮೂರ್ತಿ ಕುಟುಂಬಸ್ಥರಿಗೆ ಸಚಿವ ಆರಗ ಜ್ಞಾನೇಂದ್ರ ಸಾಂತ್ವನ ಹೇಳಿ ಆರೋಪಿಗಳನ್ನು ತಕ್ಷಣ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕೊಲೆಯ ಪ್ರಕರಣ ಗಮನಕ್ಕೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಗಾಗಲೇ ಕ್ಲೂ ಸಿಕ್ಕಿದೆ, ಆರೋಪಿಗಳನ್ನ ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಎಲ್ಲಾ ರೀತಿಯ ಕ್ರಮ ವಹಿಸಲಾಗುತ್ತದೆ. ವೈಯಕ್ತಿಕ ವಿಚಾರಕ್ಕೆ ಕೊಲೆಯಾಗಿದೆ. ಇದು ದುರದೃಷ್ಟಕರ ಸಂಗತಿ. ದಲಿತರ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ರು.

ಐವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕಾರಿನಲ್ಲಿ ಬಂದು ನರಸಿಂಹಮೂರ್ತಿ ಹತ್ಯೆಗೈದಿದ್ದ ಐವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ಗುಬ್ಬಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದಷ್ಟು ಬೇಕ ಕೊಲೆ ಮಾಡುವ ಉದ್ದೇಶ ಬಹಿರಂಗವಾಗಲಿದೆ.

ತುಮಕೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada