ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ವಿಷ ಆಹಾರ ಸೇವಿಸಿ ಕುರಿಗಳ ಸಾವು, ಕುರಿ ಕಳೆದುಕೊಂಡ ರೈತ ಕಂಗಾಲು

ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದ ಚಿಕ್ಕಣ್ಣ ಎಂಬುವರಿಗೆ ಸೇರಿದ ಕುರಿಗಳು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಕುರಿಗಳು ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ವಿಷ ಆಹಾರ ಸೇವಿಸಿ ಕುರಿಗಳ ಸಾವು, ಕುರಿ ಕಳೆದುಕೊಂಡ ರೈತ ಕಂಗಾಲು
ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ವಿಷ ಆಹಾರ ಸೇವಿಸಿ ಕುರಿಗಳ ಸಾವು, ಕುರಿ ಕಳೆದುಕೊಂಡ ರೈತ ಕಂಗಾಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 21, 2022 | 2:13 PM

ತುಮಕೂರು: ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದ ಚಿಕ್ಕಣ್ಣ ಎಂಬುವರಿಗೆ ಸೇರಿದ ಕುರಿಗಳು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಕುರಿಗಳು ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ಹೌದು. ವಿಷ ಆಹಾರ ಸೇವಿಸಿ ಸುಮಾರು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ದಿನಪೂರ್ತಿ ಹೊರಗಡೆ ಮೇಯಲು ಹೋಗಿದ್ದ ಕುರಿಗಳು ರಾತ್ರಿ ಮನೆಗೆ ಸೇರಿವೆ. ಆದರೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಒಂದರ ಬಳಿಕ ಒಂದು ಒಟ್ಟು 20 ಕುರಿಗಳು ಸತ್ತಿವೆ. ಕುರಿಗಳ ಹೊಟ್ಟೆ ಸಂಪೂರ್ಣ ಊದಿಕೊಂಡಿದ್ದು ವಿಷ ಆಹಾರ ಸೇವನೆಯಾಗಿ ಹೀಗೆ ಆಗಿರಬಹುದು ಎನ್ನೋ ಶಂಕೆ ವ್ಯಕ್ತವಾಗಿದೆ. ಇವು ಗ್ರಾಮದ ಚಿಕ್ಕಣ್ಣರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಳನ್ನ ನಂಬಿ ಜೀವನ ಮಾಡುತ್ತಿದ್ದ ರೈತ ಈಗ ಕಂಗಲಾಗಿದ್ದಾನೆ. ಒಂದಲ್ಲ ಎರಡಲ್ಲ ಬರೋಬ್ಬರಿ 20 ಕುರಿಗಳು ಸತ್ತಿದ್ದು ಸರ್ಕಾರ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಒಟ್ಟಾರೆ ಕುರಿಗಳನ್ನ ನಂಬಿ ಜೀವನದ ಮಾಡ್ತಿದ್ದ ರೈತ ಕಣ್ ಮುಂದೆ ಕುರಿಗಳು ಸತ್ತಿದ್ದು ಕಂಗಲಾಗಿದ್ದಾ‌ನೆ.

ಪಾವಗಡ ಪಶು ವೈದ್ಯಾಧಿಕಾರಿಗಳು ಭೇಟಿ: ಸ್ಥಳಕ್ಕೆ ಪಾವಗಡದ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುರಿಗಳು ಹೇಗೆ ಸತ್ತವು ಅಂತಾ ಪ್ರಯೋಗಾಲಯಕ್ಕೆ ರಕ್ತದ ಮಾದರಿ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಕುರಿಗಳ ಹೊಟ್ಟೆಯಲ್ಲಿ ಓಪನ್ ಮಾಡಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲಾಗುವುದು. ಸಾವಿಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ – ವರದಿ: ಮಹೇಶ್

ಭವಾನಿ ದೇವಸ್ಥಾನದಲ್ಲಿ ನಾಗರಹಾವು ಕಲಬುರಗಿ: ದೇನಸ್ಥಾನದ ಗರ್ಭ ಗುಡಿಯಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಕಲಬುರಗಿ ತಾಲೂಕಿನ ಚಾರ್ ಕಮಾನ್ ತಾಂಡಾದಲ್ಲಿ ಘಟನೆ ನಡೆದಿದ್ದು, ತಾಂಡಾದ ಭವಾನಿ ದೇವಸ್ಥಾನದಲ್ಲಿ ನಾಗರಹಾವು ಭವಾನಿ ಮೂರ್ತಿ ಪಕ್ಕದಲ್ಲಿತ್ತು. ಅಪಾಯಕಾರಿ ಹಾವನ್ನು ಸ್ನೇಕ್ ಪ್ರಶಾಂತ್ ರಕ್ಷಣೆ ಮಾಡಿ, ಹಾವನ್ನು ಅರಣ್ಯಕ್ಕೆ ಬಿಟ್ಟುಬಂದಿದ್ದಾರೆ.

ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ಕೇಳಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ; ನೀರು, ಕೆಲಸ, ದಿನಸಿಯೂ ಕೊಡದಂತೆ ಸೂಚನೆ

ಇದನ್ನೂ ಓದಿ: ಮದರಸಾಗಳಲ್ಲಿ ಇವತ್ತಿನ ಕಾಲದ ಶಿಕ್ಷಣ ಕೊಡುತ್ತಿಲ್ಲ, ಏಕರೂಪದ ಶಿಕ್ಷಣ ನೀಡುವ ಆಸೆ ನಮಗಿದೆ: ಬಿ.ಸಿ ನಾಗೇಶ್

Published On - 2:01 pm, Mon, 21 March 22