ಮಳೆಗೆ ಕೈ ಬೀಸಿ ಕರೆಯುತ್ತಿರೋ ಪ್ರಕೃತಿ ಸೊಬಗು; ನೋಡುಗರ ಮನ ಸೆಳೆಯುತ್ತಿದೆ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆ

ಇತ್ತಿಚೆಗೆ ಮಳೆ ಎಲ್ಲೆಡೆ ದುಮ್ಮಿಕ್ಕಿ ಸುರಿಯುತ್ತಿದೆ. ಈ ಮಳೆಗೆ ಎಲ್ಲಾದರೂ ಪ್ರಯಾಣ ಬೆಳಸಬೇಕು ಅಂದುಕೊಂಡಿದ್ದೀರಾ?. ಹಾಗಾದರೆ ನೀವು ತುಮಕೂರು ತಾಲೂಕಿನ ಪ್ರಸಿದ್ಧ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆಗೆ ಭೇಟಿ ನೀಡಬೇಕು. ಈ ಕುರಿತು ಒಂದು ವರದಿ ಇಲ್ಲಿದೆ.

ಮಳೆಗೆ ಕೈ ಬೀಸಿ ಕರೆಯುತ್ತಿರೋ ಪ್ರಕೃತಿ ಸೊಬಗು; ನೋಡುಗರ ಮನ ಸೆಳೆಯುತ್ತಿದೆ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆ
ದೇವರಾಯನದುರ್ಗ ಬೆಟ್ಟ, ನಾಮದಚಿಲುಮೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 23, 2024 | 4:34 PM

ತುಮಕೂರು, ಜೂ.23: ಇತ್ತೀಚೆಗೆ ಕೆಲವೆಡೆ ಭರ್ಜರಿ ಮಳೆ ಆಗಿದ್ದು, ಹಚ್ಚ ಹಸಿರಿನಿಂದ ಪ್ರಕೃತಿ ಕಂಗೊಳಿಸುತ್ತಿದೆ. ಅದರಂತೆ  ತುಮಕೂರು(Tumakur) ತಾಲೂಕಿನ ಪ್ರಸಿದ್ಧ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆಯ ಪ್ರಕೃತಿ ಸೊಬಗು ಕೈ ಬೀಸಿ ಕರೆಯುತ್ತಿದೆ. ಮಳೆ ಸುರಿದಿದ್ದರಿಂದ ಪ್ರವಾಸಿ ತಾಣ(Tourist spot)ಗಳ ಅಂದ ಮತ್ತಷ್ಟು ಹೆಚ್ಚಾಗಿದ್ದು, ನೋಡುಗರ ಮನಸೆಳೆಯುತ್ತಿವೆ. ಇನ್ನು ಬೆಂಗಳೂರುನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ತುಮಕೂರಿನ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯಂತೂ ಮಳೆಗೆ ಹಸಿರುನಿಂದ‌ ಕಂಗೋಳಿಸುತ್ತಿದ್ದು, ಪ್ರವಾಸಿಗರ ಮನ ಸೆಳೆಯುತ್ತಿದೆ.

ಇನ್ನು ನಾಮದಚಿಲುಮೆಯಲ್ಲಿ ಜಿಂಕೆವನ ಇದ್ದು, ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಇಲ್ಲಿಗೆ ಬಂದು ಆರಾಮವಾಗಿ ವಿಹಾರ ಮಾಡಬಹುದು. ಬೆಳ್ಳಂಬೆಳಿಗ್ಗೆ ಅಂತೂ ಬಂದರೆ ಕಣ್ ಮುಂದೆಯೆ ಮೋಡಗಳು ಪಾಸ್ ಆಗುತ್ತವೆ. ಕಾಡು ಪ್ರಾಣಿಗಳ ದರ್ಶನ, ಚಿಕ್ಕ ಮಕ್ಕಳಿಗೆ ಹೊರಸಂಚಾರ ಆಟವಾಡಲು ಕೂಡ ಯೋಗ್ಯವಾದ ಸ್ಥಳವಿದ್ದು, ವಿಕೇಂಡ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲಾಯಾದ್ಯಂತ ಭಾರಿ ಮಳೆ; ಜಲಪಾತಗಳಿಗೆ ಜೀವ ಕಳೆ, ಜನರ ಸೆಳೆಯುತ್ತಿರುವ ಪ್ರವಾಸಿ ತಾಣಗಳು

ಬೆಂಗಳೂರು, ತುಮಕೂರು ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು, ಜೋಡಿಗಳು ಒಮ್ಮೆ ಕಣ್ ಹಾಯಿಸುತ್ತಿದ್ದಾರೆ. ಇನ್ನು ದೇವರಾಯನದುರ್ಗ ಬೆಟ್ಟ ಕೂಡ ಚಿಕ್ಕಮಗಳೂರು,‌ ಮಲೆನಾಡಿನಂತೆ ಭಾಸವಾಗುತ್ತಿದ್ದು, ಆಯಾಸ ಕಳೆಯಲು ಉತ್ತಮ ಸ್ಥಳವಾಗಿದೆ. ಒಟ್ಟಾರೆ ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರವಿದ್ದು, ವಿಕೇಂಡ್ ನಲ್ಲಿ ಬರುವವರಿಗೆ ತೀರಾ ಹತ್ತಿರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ