ಮಗಳ ಮದುವೆ ಮಾಡಿದ 15 ದಿನಕ್ಕೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಾಲೆಯ ಎಂಜಿನಿಯರ್ ಕುಟುಂಬ

ಮದುವೆಯಾಗಿದ್ದ ಮಗಳ ಜೊತೆ ಏಕಾಏಕಿ ಆಗಮಿಸಿ ನೀರಿಗೆ ಹಾರಿ ಪ್ರಾಣ ಬಿಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಇಇ ರಮೇಶ್ ಗುರುವಾರ‌ ಕೂಡ ಕೆಲಸಕ್ಕೆ ಹಾಜರಾಗಿ ಅರ್ಧ ದಿನ ಕೆಲಸ ಕೂಡ ಮಾಡಿದ್ದರು. ತುಮಕೂರಿನಿಂದ ಕಿಬ್ಬನಹಳ್ಳಿ ಕ್ರಾಸ್ ಗೆ ಪತ್ನಿ ಮತ್ತು ಮಗಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಮಗಳ ಮದುವೆ ಮಾಡಿದ 15 ದಿನಕ್ಕೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಾಲೆಯ ಎಂಜಿನಿಯರ್ ಕುಟುಂಬ
ಮಗಳ ಮದುವೆ ಮಾಡಿದ 15 ದಿನಕ್ಕೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಾಲೆಯ ಎಂಜಿನಿಯರ್ ಕುಟುಂಬ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 17, 2021 | 8:30 AM

ತುಮಕೂರು: ಹೇಮಾವತಿ ನಾಲಾ ವಿಭಾಗದ ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇಇ) ಹಾಗೂ ಪತ್ನಿ ಮಮತಾ, ಮಗಳು ಶುಭಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುರುವಾರ‌ ಸಂಜೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಮಕೂರು ಜಿಲ್ಲೆಯ ಹೇಮಾವತಿ ನಾಲಾ ವಿಭಾಗದ ಎಇಇ ರಮೇಶ್ ಹಾಗೂ ಕುಟುಂಬ ಆತ್ಮಹತ್ಯೆ ಶರಣಾಗಿದ್ದಾರೆ. ತಡರಾತ್ರಿ ಓಮಿನಿಯಲ್ಲಿ ಆಗಮಿಸಿದ ರಮೇಶ್, ಪತ್ನಿ ಮಮತ ಹಾಗೂ ಮಗಳು ಶುಭಾ ಅವರುಗಳು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓಮಿನಿ ಕಾರಿನಲ್ಲಿ ಬಂದಿದ್ದ ಮೂವರೂ ಕೂಡ ಹರಿಯುವ ನೀರಿಗೆ ಹಾರಿ ಆತ್ಮಹತ್ಯೆ ಗೆ ಶರಣಾಗಿದ್ದು ಹಲವು ಅನುಮಾನಗಳು ಹುಟ್ಟು ಹಾಕಿವೆ.

ಇನ್ನು ರಮೇಶ್ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತುಮಕೂರು ನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹೋಟೆಲ್ ಉದ್ಯಮಿಗೆ ಮಗಳು ಶುಭಾಳನ್ನ 15 ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

ಆದರೆ ಮದುವೆಯಾಗಿದ್ದ ಮಗಳ ಜೊತೆ ಏಕಾಏಕಿ ಆಗಮಿಸಿ ನೀರಿಗೆ ಹಾರಿ ಪ್ರಾಣ ಬಿಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಇಇ ರಮೇಶ್ ಗುರುವಾರ‌ ಕೂಡ ಕೆಲಸಕ್ಕೆ ಹಾಜರಾಗಿ ಅರ್ಧ ದಿನ ಕೆಲಸ ಕೂಡ ಮಾಡಿದ್ದರು. ತುಮಕೂರಿನಿಂದ ಕಿಬ್ಬನಹಳ್ಳಿ ಕ್ರಾಸ್ ಗೆ ಪತ್ನಿ ಮತ್ತು ಮಗಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇನ್ನು ಮಗಳ ಮದುವೆ ಬಳಿಕ ಏನಾದರೂ ಕುಟುಂಬದಲ್ಲಿ ಸಮಸ್ಯೆ ಎದುರಾಯಿತಾ ಅಥವಾ ಮಗಳ ಪತಿಯ ಕಡೆಯಿಂದ ಸಮಸ್ಯೆ ಉಂಟಾಗಿದೆಯಾ ಅಂತಾ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಸದ್ಯ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಇನ್ನು ಸರ್ಕಾರಿ ಅಧಿಕಾರಿ ಕುಟುಂಬ ಹೀಗೆ ತಾವೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶರಣಾಗಿರುವ ಬಗ್ಗೆ ಬಲವಾದ ಅನುಮಾನಗಳು ಕೇಳಿಬರುತ್ತಿವೆ. ಪ್ರಮುಖವಾಗಿ ಮಗಳ ಮದುವೆ ಬಳಿಕ ಹೀಗೆ ಆಗಿದ್ದು ಅಳಿಯನಿಂದ ಏನಾದರೂ ಸಮಸ್ಯೆ ಯಾಗಿದೆಯಾ ಅಂತಾ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಗುಬ್ಬಿ ಪೊಲೀಸ್​ ಇನ್ಸ್​​ಪೆಕ್ಟರ್​ ನಧಾಪ್ ನೇತೃತ್ವದಲ್ಲಿ ತನಿಖೆ ಎಇಇ ರಮೇಶ್ ಒಂದು ತಿಂಗಳಿನಿಂದ ಮಗಳ ಮದುವೆಗಾಗಿ ರಜೆಯಲ್ಲಿದ್ದರು. ಹೇಮಾವತಿ ನಾಲಾ ವಿಭಾಗದ ರಮೇಶ್ ಕುಟುಂಬದವರ ಆತ್ಮಹತ್ಯೆಗಳು ಹಲವು ಅನುಮಾಗಳನ್ನು ಹುಟ್ಟಿಹಾಕಿರುವ ಪ್ರಕರಣವಾಗಿದೆ. ಸರ್ಕಾರಿ ಅಧಿಕಾರಿಯಾಗಿರುವ ರಮೇಶ್ ಕುಟುಂಬ ಸಮೇತ ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಎಂಬದು ಗಾಢವಾಗಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಗುಬ್ಬಿ ಪೊಲೀಸ್​ ಇನ್ಸ್​​ಪೆಕ್ಟರ್​ (ಸಿಪಿಐ) ನಧಾಪ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಈ ಮಧ್ಯೆ, ‘ನಮ್ಮ ಸಾವಿಗೆ ನಾವೇ ಕಾರಣರು, ಯಾರೂ ಹೊಣೆಗಾರರಲ್ಲ’ ಎಂದು ಡೇತ್ ನೋಟ್ ಬರೆದಿಟ್ಟು ರಮೇಶ್ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಅವರ ಪರ್ಸ್​​ನಲ್ಲಿ ಈ ಡೇತ್ ನೋಟ್ ಪತ್ತೆಯಾಗಿದೆ.

-ಮಹೇಶ್, ಟಿವಿ 9, ತುಮಕೂರು

Published On - 8:13 am, Fri, 17 December 21