ಹೈ ಟೆನ್ಸನ್ ! ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಪಿಡಿಒ ತಡೆ: ವಿದ್ಯುತ್​ ಕಂಬ ಏರಿ ಪ್ರತಿಭಟನೆಗೆ ಇಳಿದ ರೈತ

ಹೈ ಟೆನ್ಸನ್ ! ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಪಿಡಿಒ ತಡೆ: ವಿದ್ಯುತ್​ ಕಂಬ ಏರಿ ಪ್ರತಿಭಟನೆಗೆ ಇಳಿದ ರೈತ
ಹೈ ಟೆನ್ಸನ್ ! ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಪಿಡಿಒ ತಡೆ: ವಿದ್ಯುತ್​ ಕಂಬ ಏರಿ ಪ್ರತಿಭಟನೆಗೆ ಇಳಿದ ರೈತ

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದಕ್ಕೆ PDO ಶ್ರೀನಿವಾಸ್ ತಡೆಯೊಡ್ಡಿದ್ದಾರೆ. ಪಿಡಿಒ ಬೆದರಿಕೆ ಹಾಕಿದ್ದಾಗಿ ರೈತ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಸ್ಥಳದಲ್ಲಿದ್ದ ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ವಿದ್ಯುತ್ ಕಂಬ ಏರಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

TV9kannada Web Team

| Edited By: sadhu srinath

Jan 22, 2022 | 1:41 PM

ತುಮಕೂರು: ಸ್ವಂತಕ್ಕೊಂದು ಮನೆ ಕಟ್ಟಲು ಪಿಡಿಒ ತಡೆ ಹಿನ್ನೆಲೆ ನೀಡಿದ್ದಿಕ್ಕೆ ಹೈ ಟೆನ್ಸನ್ ವಿದ್ಯುತ್​ ಕಂಬ ಏರಿದ ರೈತ ಪ್ರತಿಭಟನೆಯಲ್ಲಿ ತೊಡಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳೆ ಗುಬ್ಬಿ ಗ್ರಾಮದಲ್ಲಿ ವಿದ್ಯುತ್​ ಕಂಬ ಏರಿ ರೈತನ ಧರಣಿ ನಡೆಸಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದಕ್ಕೆ PDO ಶ್ರೀನಿವಾಸ್ ತಡೆಯೊಡ್ಡಿದ್ದಾರೆ. ಪಿಡಿಒ ಬೆದರಿಕೆ ಹಾಕಿದ್ದಾಗಿ ರೈತ ಶ್ರೀನಿವಾಸ್ ಆರೋಪ ಮಾಡಿದ್ದಾರೆ.

ಆ ರೈತ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದ! ಜೊತೆಗೆ ಅನೇಕ ರೈತರು ಆ ಜಾಗದಲ್ಲಿ ಈಗಾಗಲೇ ಮನೆಗಳನ್ನ ನಿರ್ಮಿಸಿಕೊಂಡಿದ್ದಾರೆ ಎಂಬುದು ಆತನ ಸಬೂಬು. ಆದರೆ ಈ ರೈತನಿಗೆ ಮನೆ ಕಟ್ಟಿಕೊಳ್ಳಲು ಪಿಡಿಓ ನಿರಾಕರಿಸಿದ್ದಾರೆ ಎನ್ನಲಾಗಿದೆ. ಪಿಡಿಓ‌ ನಿರಾಕರಣೆ ಹಿನ್ನೆಲೆಯಲ್ಲಿ ರೈತ ಹೈಟೆನ್ಸನ್ ವಿದ್ಯುತ್ ಕಂಬವೇರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಹೈ ಟೆನ್ಸನ್ ವಿದ್ಯುತ್​ ಕಂಬವೇರಿ ಪ್ರತಿಭಟನೆ ನಡೆಸುತ್ತಿದ ರೈತ, ತುಮಕೂರು ಗುಬ್ಬಿ ತಾಲೂಕಿನ ಹಳೆಗುಬ್ಬಿ ಗ್ರಾಮದ ನಿವಾಸಿ ಶ್ರೀನಿವಾಸ್. ಈತ ಗ್ರಾಮದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದಾನೆ. ಈ ವೇಳೆ ಅಡಗೂರು ಗ್ರಾಮ ಪಂಚಾಮಯತ್​ ಪಿಡಿಓ ಶಿವಾನಂದ್ ಅದಕ್ಕೆ ತಡೆಯೊಡ್ಡಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟುತ್ತಿದ್ದೀಯಾ ಅಂತಾ ಪಿಡಿಓ ವಿರೋಧಿಸಿ ತಡೆಹಿಡಿದಿದ್ದಾರೆ.

ಇದರಿಂದ ಮನನೊಂದ ರೈತ ಶ್ರೀನಿವಾಸ್ ಹತ್ತಿರದಲ್ಲೇ ಇದ್ದ ಹೈಟೆನ್ಸನ್ ವಿದ್ಯುತ್ ಕಂಬವೇರಿ ಪ್ರತಿಭಟನೆ ನಡೆಸಿದ್ದಾನೆ. ಸುಮಾರು ಮೂರು ಗಂಟೆ ಕಾಲ ಕಂಬದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾನೆ‌. ವಿಚಾರ ತಿಳಿದ ಗುಬ್ಬಿ ತಹಶಿಲ್ದಾರ್ ಆರತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಕಂಬವೇರಿದ್ದ ಶ್ರೀನಿವಾಸ್ ರನ್ನ ಮನವೊಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಕಂಬದಿಂದ ಇಳಿಸಿದ್ದಾರೆ.

ಇನ್ನು ಪಿಡಿಓ ಮನೆ ಕಟ್ಟಲು ತಂದಿದ್ದ ಇಟ್ಟಿಗೆ ಸಿಮೆಂಟ್ ಸೇರಿದಂತೆ ಹಲವು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಶ್ರೀನಿವಾಸ್ ಜೊತೆಗೆ ಈಗಾಗಲೇ ಸಾಕಷ್ಟು ಜನ ಮನೆಗಳನ್ನ ನಿರ್ಮಿಸಿಕೊಂಡಿದ್ದಾರೆ. ಅವರಿಗೆಲ್ಲಾ ಅನುಮತಿ ನೀಡಿರುವ ಪಿಡಿಓ ಶಿವಾನಂದ್ ಅವರು ಶ್ರೀನಿವಾಸ್ ರಿಗೆ ಮಾತ್ರ ವಿರೋಧ ವ್ಯಕ್ತಪಡಿಸಿ ದಬ್ಬಾಳಿಕೆ‌‌ ಮಾಡಿದ್ದಾರೆ ಅಂತಾ ರೈತ ಆರೋಪಿಸಿದ್ದಾರೆ. ಒಟ್ಟಾರೆ ರೈತನ ಕಂಬಕ್ಕೆ ಏರಿದ್ದ ಪ್ರಕರಣ ತಹಶಿಲ್ದಾರ್ ಭೇಟಿ‌ ನೀಡಿ ಸದ್ಯಕ್ಕೆ ಪರಿಹರಿಸಿದ್ದಾರೆ. -ಮಹೇಶ್, ಟಿವಿ9, ತುಮಕೂರು

ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ರಾ ಮಹಿಳಾ ಪಿಎಸ್ಐ? ವಿಜಯಪುರ: ಕಳೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ರಾ ಮಹಿಳಾ ಪಿಎಸ್ಐ ಎಂಬುದಕ್ಕೆ ಆಡಿಯೋ ಪುರಾವೆ ಸಿಕ್ಕಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ರೇಣುಕಾ ಜಕನೂರ ಮೇಲೆ ಈ ಆರೋಪ ಕೇಳಿಬಂದಿದೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯ ಪುತ್ರನೊಂದಿಗೆ ಪಿಎಸ್ಐ ರೇಣುಕಾ ಜಕನೂರ ಮಾತನಾಡಿರೋ ಆಡಿಯೋ ಇದಾಗಿದೆ. ಪಿಎಸ್ಐ ರೇಣುಕಾ ಮಾತನಾಡಿದ ಆಡಿಯೋ ಇದೀಗ ವೈರಲ್ ಆಗಿದೆ. ನಾಲತವಾಡ ಪಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ತಂತ್ರ ಹೆಣೆದಿದ್ದರ ಕುರಿತ ಈ ಆಡಿಯೋದಲ್ಲಿ ಮಾತುಗಳು ತೇಲಿಬಂದಿವೆ.

ನಾಲತವಾಡ ಪಟ್ಟಣ ಪಂಚಾಯಿತಿ ವಾರ್ಡ್ ನಂ. 6 ಬಿಜೆಪಿ ಅಭ್ಯರ್ಥಿ ಕಸ್ತೂರಿ ಎಂಬ ಅಭ್ಯರ್ಥಿಯ ಪುತ್ರ ಪರಶುರಾಮ ಜೊತೆಗೆ ಲೇಡಿ ಪಿಎಸ್ಐ ಮಾತನಾಡಿರುವ ಆಡಿಯೋ ವೈರಲ್ ಆಗಿರುವುದು. ವಿಜಯಪುರ ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳಿಗೆ ಕಳೆದ ಡಿಸೆಂಬರ್ 27 ರಂದು ಮತದಾನ ನಡೆದಿತ್ತು. ಬಳಿಕ ಕಳೆದ ಡಿಸಂಬರ್ 30 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಿತ್ತು. ಚುನಾವಣಾ ಮತದಾನಕ್ಕೂ ಮುನ್ನ ನಾಲತವಾಡ ಪಟ್ಟಣ ಪಂಚಾಯತ್​ಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪರವಾಗಿ ಪಿಎಸ್ಐ ರೇಣುಕಾ ಜಕನೂರ  ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಹೋಗುತ್ತಿದ್ದ ಭೂಪ; ವೈರಲ್ ವಿಡಿಯೋದಿಂದ ಬಯಲಾಯ್ತು ನಿಜ ಬಣ್ಣ

ಸಿಎಂ ನಿವಾಸದ ಬಳಿ ಗಾಂಜಾ ಮಾರಾಟ ಕೇಸ್: ಈ ಹಿಂದೆಯೂ ಇಬ್ಬರೂ ಕಾನ್ಸ್​ಟೇಬಲ್​ ಪಾರ್ಟ್​ನರ್ಸ್​ ಇನ್​ ಕ್ರೈಂ!

Follow us on

Related Stories

Most Read Stories

Click on your DTH Provider to Add TV9 Kannada