ತುಮಕೂರು: ಕಳೆದ ಕೆಲ ದಿನಗಳ ಹಿಂದೆ ತುಮಕೂರಿನ ಕುಣಿಗಲ್ ಪಟ್ಟಣದ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದ್ದವು. ಈಗ ಅದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ. ಕುಣಿಗಲ್ ತಾಲೂಕಿನ ಕೆಬ್ಬಳ್ಳಿ ಗ್ರಾಮದ ಬಳಿ ಎತ್ತಿನಗಾಡಿ ಓಡಿಸುತ್ತಿದ್ದ ರೈತನ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ರೈತ ಅಸ್ವಸ್ಥರಾಗಿದ್ದಾರೆ. ಹಾಗೂ ಎತ್ತುಗಳ ಮೇಲೂ ಹೆಜ್ಜೇನು ದಾಳಿ ನಡೆದಿದ್ದು ಸ್ಥಿತಿ ಗಂಭೀರವಾಗಿದೆ.
ಎತ್ತಿನ ಗಾಡಿಯಲ್ಲಿ ಹುರುಳಿ ಕಾಯಿ ತುಂಬಿಸಿಕೊಂಡು ಹೋಗುತಿದ್ದ ರೈತ ರಮೇಶ್ ಮೇಲೆ ಹೆಜ್ಜೇನು ದಾಳಿ ಮಾಡಿದೆ. ದಾಳಿಯಿಂದಾಗಿ ರೈತ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಎತ್ತುಗಳ ಮೇಲೆ ಕೂಡು ಹೆಜ್ಜೇನು ದಾಳಿ ನಡೆದಿದ್ದು ಎತ್ತುಗಳ ಸ್ಥಿತಿ ಗಂಭೀರವಾಗಿದೆ. ಪಶು ಆಸ್ಪತ್ರೆಯಲ್ಲಿ ಎತ್ತುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರಿನಲ್ಲಿ ಕೆಲವೇ ದಿನಗಳ ಅಂತರದಲ್ಲಿ ಈ ರೀತಿಯ ಎರಡು ಘಟನೆಗಳು ನಡೆದಿದ್ದು ಜನ ಚಿಂತಿಸುವಂತಾಗಿದೆ. ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್, ಬೆಂಗಳೂರು ಟು ಮೈಸೂರ್ ಕಹಾನಿ ಇಲ್ಲಿದೆ
ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದ ಸ್ಟಡ್ ಫಾರಂ ನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಎಂಬ ಹೆಸರಿನ ಕುದುರೆಗಳು ಸಾವನ್ನಪ್ಪಿದೆ.
ತಮ್ಮ ದೇಶಗಳಲ್ಲಿ ರೇಸ್ನಲ್ಲಿ ತೋರಿದ ಸಾಧನೆ ಪರಿಗಣಿಸಿ ವಂಶಾಭಿವೃದ್ಧಿಗೆ ಬಳಕೆ ಮಾಡಲು ಇದನ್ನು ತರಲಾಗಿದ್ದು, ಇದೀಗ ಹೆಜ್ಜೆನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ಒಂದು ಕೋಟಿಗೂ ಅಧಿಕ ಬೆಲೆ ಬಾಳುತ್ತಿದ್ದ ಎರಡು ಕುದುರೆಗಳು ಮೃತಪಟ್ಟಿದ್ದು, ಫಾರಂ ನಲ್ಲಿ ಶೋಕ ಮಡುಗಟ್ಟಿದೆ. ಕುದುರೆಗಳ ಸಾವಿನಿಂದ ಸ್ಟಡ್ ಫಾರಂನಲ್ಲಿ ಆತಂಕ ವ್ಯಕ್ತವಾಗಿದೆ. ಫಾರಂ ನಲ್ಲಿ ಮೇಯುವಾಗ ಹೆಜ್ಜೆನು ದಾಳಿ ಮಾಡಿದ್ದಾವೆ. ಈ ವೇಳೆ ಎರಡು ಕುದುರೆಗಳು ತೀವ್ರ ಅಸ್ವಸ್ಥಗೊಂಡಿದ್ದವು ಎನ್ನಲಾಗಿದೆ.
ಕುದುರೆಗಳಿಗೆ ಸ್ಟಡ್ ಫಾರಂನ ವೈದ್ಯರು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಹೆಸರಿನ ಈ ಕುದುರೆಗಳ ಅಂತ್ಯಕ್ರಿಯೆ ಸ್ಟಡ್ ಫಾರಂ ನಲ್ಲಿ ನಡೆದಿದೆ. ಏರ್ ಸಪೋರ್ಟ್ 2008 ರಲ್ಲಿ ಜನಿಸಿದ್ದು, ಸನಸ್ ಪರ್ ಅಕ್ಷಮ್ 2013 ರಲ್ಲಿ ಜನಿಸಿತ್ತು ಎನ್ನಲಾಗಿದೆ. ಈ ಎರಡು ಕುದುರೆಗಳು ತಮ್ಮ ತಮ್ಮ ದೇಶಗಳಲ್ಲಿ ಐದು ವರ್ಷಗಳ ಕಾಲ ರೇಸ್ನಲ್ಲಿ ತೋರಿದ ಸಾಧನೆ ಪರಿಗಣಿಸಿ ಕುಣಿಗಲ್ ಸ್ಟಡ್ ಫಾರಂ ಗೆ ವಂಶಾಭಿವೃದ್ಧಿಗಾಗಿ ಬಳಕೆ ಮಾಡಲು ತರಲಾಗಿತ್ತು. ಸದ್ಯ ಕುದುರೆಗಳ ಸಾವಿನಿಂದ ಸ್ಟಡ್ ಫಾರಂ ನ ನೌಕರರಲ್ಲಿ ಶೋಕ ಮನೆ ಮಾಡಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:07 am, Mon, 9 January 23