ಅಧಿಕಾರಕ್ಕೆ ಬಂದ್ರೆ ಪಂಚರತ್ನ ಯೋಜನೆ ಜಾರಿ, ಇಲ್ಲದಿದ್ರೆ ಜೆಡಿಎಸ್ ವಿಸರ್ಜನೆ ಮಾಡ್ತಿವಿ: ಹೆಚ್ ಡಿ ಕುಮಾರಸ್ವಾಮಿ
ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಒಂದು ವೇಳೆ ಪಂಚರತ್ನ ಯೋಜನೆ ಜಾರಿ ಮಾಡದಿದರೆ JDS ವಿಸರ್ಜನೆ ಮಾತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ತುಮಕೂರು: ಮುಂದಿನ ಬಾರಿ ರಾಜ್ಯದಲ್ಲಿ ಜೆಡಿಎಸ್ (JDS) ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಒಂದು ವೇಳೆ ಪಂಚರತ್ನ ಯೋಜನೆ (pancharatna scheme) ಜಾರಿ ಮಾಡದಿದರೆ JDS ವಿಸರ್ಜನೆ ಮಾತ್ತೇವೆ ಎಂದು ಜಿಲ್ಲೆಯ ಶಿರಾ ತಾಲೂಕಿನ ಜಾನಕಲ್ಲು ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಶಿಕ್ಷಣ, ಉದ್ಯೋಗ, ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನು ಜಾರಿ ಮಾಡಲಾಗುವುದು. ಇವತ್ತಿನ ದಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಸಾಕಷ್ಟು ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಶ್ರೀಮಂತ, ಬಡವ ಎಂಬ ತಾರತಮ್ಯ ಇಲ್ಲದೆ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಕೃಷಿಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತೆ
ತುಮಕೂನಲ್ಲಿ ಹಾಸನ, ಚಾಮರಾಜನಗರಕ್ಕಿಂತ ಹೆಚ್ಚಿನ ತೆಂಗು ಬೆಳೆಗಾರರು ಇದ್ದಾರೆ. ನಾನು ಸಿಎಂ ಆಗಿದ್ದಾಗ ತೆಂಗು ಬೆಳೆಗಾರರ ಸಹಾಯಕ್ಕೆ ನಿಂತಿದ್ದೆ. ಆದರೆ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ಕೊಡಲಿಲ್ಲ. ರೈತರಿಗೆ ಹಲವು ಯೋಜನೆ ಜಾರಿಗೆ ತರಲು ಸಿದ್ಧತೆ ಮಾಡಿದ್ದೇವೆ. ಕೃಷಿಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತೆ. ಪ್ರತಿ ಕುಟುಂಬದ ಹೆಣ್ಣು ಮಗುವಿಗೆ ಉದ್ಯೋಗ, ಸರ್ಕಾರದ ಸವಲತ್ತುಗಳನ್ನ ಕೊಡಲು ಸಿದ್ದತೆ ಮಾಡಿದ್ದೇವೆ. ಸರ್ಕಾರದಲ್ಲಿರೋದು ನಿಮ್ಮ ಹಣ, ತೆರಿಗೆ ಹಣವನ್ನ ಇವತ್ತು ಲೂಟಿ ಮಾಡುತ್ತಿದ್ದಾರೆ. ಹಳ್ಳಿಗಳ ಕಡೆ ಬಂದರೆ ಇನ್ನು ಕೆಲವೆಡೆ ಮನೆಗಳಿಲ್ಲ. ಪ್ರತಿ ಕುಟುಂಬಕ್ಕೆ ಮನೆ, ಉದ್ಯೋಗ ಕೊಡಲು ನಮ್ಮ ಪಕ್ಷ ಐದು ಪಂಚ ರತ್ನಗಳನ್ನ ಜಾರಿಗೆ ತರ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ನನ್ನ ಬಿಟ್ಟು ಬೇರೆ ಯಾರ ಕೈಯಲ್ಲೂ ಆಗಲ್ಲ
ಇನ್ನು ಅಧಿಕಾರಕ್ಕೆ ಬಂದಾಗ ಕುಂಚಿಟಿಗ ಒಕ್ಕಲಿಗರ ಬೇಡಿಕೆ ಈಡೇರಿಸುವೆ. ಕುಂಚಿಟಿಗ ಒಕ್ಕಲಿಗ ಸಮುದಾಯದವರ ಬೇಡಿಕೆಯಿದ್ದು, 2023ಕ್ಕೆ ಅಧಿಕಾರಕ್ಕೆ ಬಂದಾಗ ನಿಮ್ಮ ಬೇಡಿಕೆ ಈಡೇರಿಸುತ್ತೇನೆ. ಇದು ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರ ಕೈಯಲ್ಲೂ ಆಗಲ್ಲ. ನಮ್ಮ ಮೇಲೆ ವಿಶ್ವಾಸವಿಟ್ಟು ಸುರೇಶ್ ಬಾಬುಗೆ ಸಹಕಾರ ಕೊಡಿ. ಸುರೇಶ್ ಬಾಬು ಕೇವಲ ಶಾಸಕನಾಗಿ ಇರಲ್ಲ, ಮಂತ್ರಿ ಮಾಡುವೆ ಎಂದು ಹೇಳಿದರು.
ಉಚಿತ ಚಿಕಿತ್ಸೆ
ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಶಿಶುಗಳ ಸಾವು ಕೇಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಕೊಡದೇ ಸಾವಿಗೆ ಕಾರಣರಾಗಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಆ ಹೆಣ್ಣು ಮಗಳು ನರಳಿ ಮೃತಪಟ್ಟಿದ್ದಾಳೆ. ನಾವು ಅಧಿಕಾರಕ್ಕೆ ಬಂದಾಗ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ. ವೈದ್ಯರು, ಸಿಬ್ಬಂದಿ ನೇಮಿಸಿ ಬಡವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ನೀವು ಕೇಳಬಹುದು ಇದಕ್ಕೆಲ್ಲ ಕುಮಾರಣ್ಣ ದುಡ್ಡು ಎಲ್ಲಿ ತರ್ತಾನೆ ಅಂತ. ರೈತರ ಸಾಲ ಮನ್ನಾ ಮಾಡಿದಾಗ ಇದೇ ರೀತಿ ಉಡಾಫೆ ಮಾತುಗಳನ್ನ ಆಡಿದ್ದರು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Sun, 6 November 22