ಎರಡು ಮಕ್ಕಳ ತಾಯಿಯನ್ನೇ ನವವಧು ಎಂದು ಮದುವೆ ಮಾಡಿಸಿ ಹಣ ದೋಚಿದ ಗ್ಯಾಂಗ್​; ಒಂದು ವರ್ಷದ ಬಳಿಕ ವಂಚಕರು ಅರೆಸ್ಟ್​

ಹೆಣ್ಣು ಸಿಗದೇ ಮದುವೆ ವಯಸ್ಸು ಮೀರಿದ ಯುವಕರೇ ಇವರ ಟಾರ್ಗೆಟ್. ಎರಡು ಮಕ್ಕಳ ತಾಯಿಯನ್ನೇ ನವವಧು ಎಂದು ಮದುವೆ ಮಾಡಿಸಿ ಕಾಸು-ಕರಿಮಣಿ ಒಡವೇ ದೋಚೋದೇ ಈ ಗ್ಯಾಂಗ್​ನ ಕೆಲಸ. ಇಂಥಹ ನಯವಂಚಕ ಮದುವೆ ಕ್ಯಾಂಪಸ್​ನ ಗ್ಯಾಂಗ್​ವೊಂದು ತುಮಕೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. 

ಎರಡು ಮಕ್ಕಳ ತಾಯಿಯನ್ನೇ ನವವಧು ಎಂದು ಮದುವೆ ಮಾಡಿಸಿ ಹಣ ದೋಚಿದ ಗ್ಯಾಂಗ್​; ಒಂದು ವರ್ಷದ ಬಳಿಕ ವಂಚಕರು ಅರೆಸ್ಟ್​
2 ಮಕ್ಕಳ ತಾಯಿಯನ್ನ ನವವಧು ಎಂದು ಮದುವೆ ಮಾಡಿಸಿ ಹಣ ದೋಚಿದ ಗ್ಯಾಂಗ್​ ಅಂದರ್​
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 13, 2024 | 9:29 PM

ತುಮಕೂರು, ಆ.13: ಇತ್ತೀಚೆಗೆ ಬಡ ಕೃಷಿಕ ಯುವಕರಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ.  ಮದುವೆ ವಯಸ್ಸು ಮೀರಿದರೂ ಕನ್ಯೆ ಸಿಗದೇ ಅದೆಷ್ಟೋ ಮಂದಿ ಮದುವೆಯಾಗದೇ ಸಿಂಗಲ್ಲಾಗಿಯೇ ಉಳಿದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ತಂಡವೊಂದು ಹುಟ್ಟಿಕೊಂಡಿದ್ದು, ವಂಚನೆ ಮಾಡುತ್ತಿರುವುದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷಯ್ಯಗೆ 37 ವರ್ಷದ ಮಗನಿದ್ದಾನೆ. ಇಡೀ ಕರ್ನಾಟಕ ಸುತ್ತಾಡಿದರೂ ಮಗ ದಯಾನಂದಮೂರ್ತಿಗೆ ಹೆಣ್ಣು ಸಿಕ್ಕಿರಲಿಲ್ಲ. ಇದರಿಂದಾಗಿ ಪಾಲಾಕ್ಷಯ್ಯ ಕುಟುಂಬ ಚಿಂತಾಕ್ರಾಂತವಾಗಿತ್ತು. ಈ ನಡುವೆ ಪಾಲಾಕ್ಷಯ್ಯಗೆ ಕುಷ್ಟಗಿ ಮೂಲದ ಬಸವರಾಜು ಪರಿಚಯವಾಗಿದ್ದು, ಆತನ ಬಳಿ ಅಳಲು ತೋಡಿಕೊಂಡಾಗ ಬಸವರಾಜು ಹುಬ್ಬಳ್ಳಿ ಮೂಲದ ಬ್ರೋಕರ್ ಲಕ್ಷ್ಮೀಯನ್ನ ಪರಿಚಯ ಮಾಡಿಸುತ್ತಾನೆ. ಈ ಕಿಲಾಡಿ ಬ್ರೋಕರ್ ಲಕ್ಷ್ಮೀ ಪಾಲಾಕ್ಷಯ್ಯ ಕುಟುಂಬಕ್ಕೆ ನಯವಾಗಿ ವಂಚಿಸಲು ಪ್ಲಾನ್ ಮಾಡುತ್ತಾಳೆ.

ಕಿಲಾಡಿ ಬ್ರೋಕರ್ ಲಕ್ಷ್ಮೀ ನಮ್ಮ ಬಳಿ ಒಂದು ಹೆಣ್ಣಿದೆ, ಅವಳಿಗೆ ತಂದೆ ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕು ಎಂದು ಸುಳ್ಳಿನ ಕಥೆ ಹೆಣೆಯುತ್ತಾಳೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದ ಲಕ್ಷ್ಮೀ ಬಾಳಾಸಾಬ್ ಎಂಬ ಆಂಟಿಯನ್ನು ಕೋಮಲಾ ಎಂಬ ಹೆಸರಿನಲ್ಲಿ ಪರಿಚಯಿಸಿ, ಕೋಮಲಾಳ ಜೊತೆಗೆ ಐವರು ನಕಲಿ ಸಂಬಂಧಿಕರನ್ನು ಕರೆದುಕೊಂಡು ಪಾಲಾಕ್ಷಯ್ಯರ ಮನೆಗೆ ಬರುತ್ತಾಳೆ. ಪಾಲಾಕ್ಷಯ್ಯರ ಮನೆಗೆ ಬಂದ ಮೂರನೇ ದಿನಕ್ಕೆ ಅಂದರೆ ಕಳೆದ ನವೆಂಬರ್ 11 ರಂದು ಅತ್ತಿಗಟ್ಟದ ದೇವಸ್ಥಾನ ಒಂದರಲ್ಲಿ ಮದುವೆಯನ್ನೂ ನಿಶ್ಚಯ ಮಾಡಿಬಿಡುತ್ತಾರೆ. ಕೋಮಲಾ ಅಲಿಯಾಸ್ ಲಕ್ಷ್ಮೀ ಆಂಟಿ ಯುವಕ ದಯಾನಂದ ಮೂರ್ತಿ ಜೊತೆ ಹಸೆಮಣೆ ಏರುತ್ತಾಳೆ.

ಇದನ್ನೂ ಓದಿ:ಶಿವಮೊಗ್ಗ: ಮದುವೆಯಾಗಿ ಐದೇ ತಿಂಗಳಿಗೆ ನವವಧು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ವಧು-ವರರ ಕಡೆಯವರು ಮದುವೆಯ ಭೂರಿಭೋಜನ ಸವಿದು ಹೋಗುತ್ತಾರೆ. ಮದುವೆಯಾದ ನಾಲ್ಕೇ ದಿನಕ್ಕೆ ಬ್ರೋಕರ್ ಲಕ್ಷ್ಮೀ ಶಾಸ್ತ್ರದ ನೆಪವೊಡ್ಡಿ ಮದುಮಗಳನ್ನು ಒಂಟಿಯಾಗಿ ತವರು ಮನೆಗೆ ಕಳುಹಿಸಬೇಕು ಎಂದು ತಾಕೀತು ಮಾಡುತ್ತಾಳೆ. ಇದನ್ನು ನಂಬಿದ ಪಾಲಾಕ್ಷಯ್ಯ ಕುಟುಂಬ ಮದುಮಗಳು ಕೋಮಲಾಳನ್ನು ಹುಬ್ಬಳ್ಳಿಗೆ ಕಳುಹಿಸುತ್ತಾರೆ. ಈ ವೇಳೆ ಬ್ರೋಕರ್ ಲಕ್ಷ್ಮೀಗೆ 1.5 ಲಕ್ಷ ರೂ ನಗದು ಕೊಟ್ಟಿರುತ್ತಾರೆ. ಜೊತೆಗೆ ಮಧುಮಗಳಿಗೆ ಮಾಂಗಲ್ಯ ಸರ, ಚೈನ್, ಕಿವಿಯೋಲೆ ಸೇರಿ ಸುಮಾರು 50 ಗ್ರಾಂ ತೂಕದ ಒಡವೆ ಹಾಕಿರುತ್ತಾರೆ. ಈ ನಗದು ಮತ್ತು ಒಡವೆಯೊಂದಿಗೆ ತವರು ಮನೆಗೆ ತೆರಳುತ್ತಾಳೆ ಕೋಮಲ. ಒಂದು ವಾರ ಆದರೂ ವಾಪಸ್ ಬಾರದೇ ಇದ್ದಾಗ ಪಾಲಾಕ್ಷಯ್ಯ ಕುಟುಂಬಕ್ಕೆ ಅನುಮಾನ ಬರುತ್ತದೆ.

ಈ ಕಿಲಾಡಿ ಬ್ರೋಕರ್ ಲಕ್ಷ್ಮೀ ಫೋನ್​ ಸ್ವಿಚ್ ಆಪ್ ಮಾಡಿಕೊಳ್ಳುತ್ತಾಳೆ. ಬಳಿಕ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಇಡೀ ದೋಖಾ ಬಯಲಾಗುತ್ತದೆ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಒಂದು ವರ್ಷದ ಬಳಿಕ ವಂಚಕರ ಗ್ಯಾಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮದುಮಗಳು ಕೋಮಲಾ ಅಲಿಯಾಸ್​ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮಮ್ಮ ಬ್ರೋಕರ್ ಲಕ್ಷ್ಮಿಯನ್ನು ಕಂಬಿ ಹಿಂದೆ ಕಳುಹಿಸಲಾಗಿದೆ‌. ಮದುವೆಯಾಗದವರನ್ನೂ ಟಾರ್ಗೆಟ್ ಮಾಡಿಕೊಂಡು ವಂಚಿಸೋ ಇಂತಹ ಗ್ಯಾಂಗ್ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕಾಗಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ