ಅಕ್ರಮಗಳ ಸಮ್ಮುಖದಲ್ಲಿ ಸೀಗೆಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಹೊಡೆದಾಟ – ಎಫ್ ಐಆರ್ ಕೂಡ ದಾಖಲು

| Updated By: ಸಾಧು ಶ್ರೀನಾಥ್​

Updated on: Feb 01, 2024 | 1:59 PM

ತುಮಕೂರು‌ ಜಿಲ್ಲೆಯ ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿಯನ್ನೇ ನಡೆಸದೆ ಹಣ ಬಿಡುಗಡೆ ಮಾಡಿಕೊಂಡಿರುವುದು ಹಾಗೂ ನೆಡುತೋಪು ಕಾವಲುಗಾರರಿಗೆ ನೀಡಬೇಕಿರುವ ಕೂಲಿ ನೀಡದೆ ವಂಚಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಹಲ್ಲೆಯನ್ನು ಖಂಡಿಸಿರುವ ಅರಣ್ಯ ಇಲಾಖಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಸೇವೆಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಅಕ್ರಮಗಳ ಸಮ್ಮುಖದಲ್ಲಿ ಸೀಗೆಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಹೊಡೆದಾಟ - ಎಫ್ ಐಆರ್ ಕೂಡ ದಾಖಲು
ಅಕ್ರಮಗಳ ಸಮ್ಮುಖದಲ್ಲಿ ಸೀಗೆಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಸ್ಪರ ಹೊಡೆದಾಟ
Follow us on

ತುಮಕೂರು‌ ಜಿಲ್ಲೆಯಲ್ಲಿನ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.. ಚಿಕ್ಕನಾಯಕನಹಳ್ಳಿ ತಾಲೂಕು ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿಯನ್ನೇ ನಡೆಸದೆ ಬಿಲ್ ಮಾಡಿಕೊಳ್ಳಲಾಗಿರುವ ಆರೋಪ ಅರಣ್ಯ ಇಲಾಖೆ ಮೇಲೆ ಕೇಳಿಬಂದಿದ್ದು ಅಧಿಕಾರಿ, ಸಿಬ್ಬಂದಿ ಪರಸ್ಪರ ಬಡಿದಾಡಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೌದು ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಗಸ್ತು ಸಿಬ್ಬಂದಿಯ ಮಧ್ಯೆ ಇಲಾಖೆಯಲ್ಲಿನ ಅಕ್ರಮದ ಬಗ್ಗೆ ಮಾತಿಗೆ ಮಾತು ಬೆಳೆದು ಸಿಬ್ಬಂದಿ ಮೇಲೆ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಹಾಗೂ ಕಿಬ್ಬನಹಳ್ಳಿ ಉಪ ವಲಯ ಅರಣ್ಯಾಧಿಕಾರಿ ಎಚ್‌.ಮಂಜುನಾಥ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.. ಇದರ ಬೆನ್ನಲ್ಲೇ ಗಸ್ತು ಅರಣ್ಯ ಪಾಲಕ ನಂದೀಶ್ ಎಂಬುವವರು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ಇನ್ನೋರ್ವ ವಲಯ ಅರಣ್ಯಾಧಿಕಾರಿ ಅರುಣ್ ವಿರುದ್ಧ ಎಫ್ ಐಆರ್ ಕೂಡ ಆಗಿದೆ. ಬೆಂಗಳೂರಿಗೆ ಆರೋಗ್ಯ ತಪಾಸಣೆಗಾಗಿ ಜನವರಿ 25ರಂದು ಒಂದೇ ವಾಹನದಲ್ಲಿ ತೆರಳಿದ್ದ ಅಧಿಕಾರಿ, ಸಿಬ್ಬಂದಿ ಗುಬ್ಬಿ ರಿಂಗ್‌ರಸ್ತೆ ಚನ್ನಶೆಟ್ಟಿಹಳ್ಳಿ ಸಮೀಪ ಪರಸ್ಪರ ಹೊಡೆದಾಡಿಕೊಂಡಿದ್ದು ಗಾಯಗೊಂಡಿರುವ ನಂದೀಶ್ ಮಂಜುನಾಥ್ ಮತ್ತು ಅರುಣ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.

ಸೀಗೆಹಳ್ಳಿ ಅರಣ್ಯ ವಲಯದಲ್ಲಿ ಕಾಮಗಾರಿಯನ್ನೇ ನಡೆಸದೆ ಹಣ ಬಿಡುಗಡೆ ಮಾಡಿಕೊಂಡಿರುವುದು ಹಾಗೂ ನೆಡುತೋಪು ಕಾವಲುಗಾರರಿಗೆ ನೀಡಬೇಕಿರುವ ಕೂಲಿ ನೀಡದೆ ವಂಚಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿದೆ ಎನ್ನಲಾಗಿದ್ದು, ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ತನಿಖೆಗೆ ಮುಂದಾಗಿದೆ. ಹಲ್ಲೆಯನ್ನು ಖಂಡಿಸಿರುವ ಅರಣ್ಯ ಇಲಾಖಾ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಸೇವೆಗೆ ಗೈರಾಗಿದ್ದಾರೆ ಎನ್ನಲಾಗಿದ್ದು ಹಿರಿಯ ಅಧಿಕಾರಿಗಳಿಗೆ ಹೊಸ ತಲೆನೋವು ತಂದಿದೆ.

Also Read: ವಿದ್ಯಾಕಾಶಿ ಧಾರವಾಡ- ವಾಣಿಜ್ಯ ನಗರಿ ಹುಬ್ಬಳ್ಳಿ ಅವಳಿ ನಗರದಲ್ಲಿ ಮಹಿಳೆಯರದ್ದೇ ದರ್ಬಾರ್!

ಇನ್ನು ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಂದಿಶ್ ಮಾತಿಗೆ ಮಾತು ಬೆಳೆಸಿಕೊಂಡು ಪರಸ್ಪರ ಕಿತ್ತಾಡಿಕೊಂಡು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಇಲಾಖೆ ವಿಚಾರಣೆ ನಡೆಸಿ ವರದಿ ನೀಡಬೇಕು ಅಲ್ಲದೆ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳೋಕೆ ಹಾಸನ್ ವಿಶಿಲೆನ್ಸ್ ನಿಂದ ತನಿಖೆ ಮಾಡಿಸುತ್ತಿದ್ದೇವೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ ತಿಳಿಸಿದ್ದಾರೆ.

ಸಧ್ಯ ಪ್ರಕರಣ ಗುಬ್ಬಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಜೊತೆಗೆ ಪೊಲೀಸರ ಮೇಲೂ ಸಂತ್ರಸ್ತ ನಂದೀಶ್ ಆರೋಪ ಮಾಡಿದ್ದು ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ ನಾನೊಂದು ರೀತಿ ದೂರು ನೀಡಿದ್ರೆ ಅವರೆ ಒಂದು ರೀತಿ ದೂರನ್ನ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ ಅಂತ ನಂದೀಶ್ ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ