ಸಚಿವ ಜೆಸಿ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ನೀಡಿ; ಕರ್ನಾಟಕ ಸರ್ಕಾರಕ್ಕೆ ಬೆಂಬಲಿಗರಿಂದ ಒತ್ತಾಯ

ಸಚಿವ ಜೆಸಿ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ನೀಡಿ; ಕರ್ನಾಟಕ ಸರ್ಕಾರಕ್ಕೆ ಬೆಂಬಲಿಗರಿಂದ ಒತ್ತಾಯ
ಕಾನೂನು ಸಚಿವ ಜೆಸಿ ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿಯಲ್ಲಿ ಧ್ವಜಾರೋಹಣ ಮಾಡದ ವಿಚಾರಕ್ಕೆ ಸಂಬಂಧಿಸಿ ಟಿವಿ9 ಜೊತೆ ಮಾತನಾಡಿದ ಅವರು, ಧ್ವಜಾರೋಹಣ ಕುರಿತು ಡಿಸಿ ಮೂಲಕ ಸ್ಪಷ್ಟನೆ ಕೇಳಲಾಗಿತ್ತು. ಚಿಕ್ಕನಾಯಕನಹಳ್ಳಿಯಲ್ಲಿ ಧ್ವಜಾರೋಹಣ ಮಾಡುವ ಕುರಿತು ಮೌಖಿಕವಾಗಿ ಕೇಳಲಾಗಿತ್ತು.

TV9kannada Web Team

| Edited By: sandhya thejappa

Jan 27, 2022 | 10:29 AM

ತುಮಕೂರು: ಸಚಿವ ಜೆಸಿ ಮಾಧುಸ್ವಾಮಿಗೆ (JC Madhuswamy) ಜಿಲ್ಲಾ ಉಸ್ತುವಾರಿ ನೀಡಿ ಅಂತ ರಾಜ್ಯ ಸರ್ಕಾರಕ್ಕೆ ಮಾಧುಸ್ವಾಮಿ ಬೆಂಬಲಿಗರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಜಾತ್ಯತೀತವಾಗಿ ಕೆಲಸ ಮಾಡುತ್ತಿದ್ದಾರೆ. ನಿಷ್ಠಾವಂತ, ಸಮರ್ಥ ನಾಯಕ ಸಚಿವ ಮಾಧುಸ್ವಾಮಿ. ಅಂತಹವರಿಗೆ ಉಸ್ತುವಾರಿ ನೀಡದಿರುವುದು ನೋವಾಗಿದೆ. ತುಮಕೂರು (Tumkur) ಜಿಲ್ಲೆ ಬಗ್ಗೆ ಸಮಗ್ರ ಮಾಹಿತಿ ಗೊತ್ತಿದೆ. ಮಾಹಿತಿ ತಿಳಿದ ಮಾಧುಸ್ವಾಮಿಗೆ ಉಸ್ತುವಾರಿ ನೀಡಬೇಕಿತ್ತು. ಅದು ಬಿಟ್ಟು ಹೊರ ಜಿಲ್ಲೆಯವರಿಗೆ ನೀಡಿದ್ದು ಸರಿಯಲ್ಲ. ಕೂಡಲೇ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ನೀಡಿ. ಉಸ್ತುವಾರಿ ನೀಡದಿದ್ದರೆ ಹೋರಾಟ ಮಾಡುತ್ತೇವೆ ಅಂತ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಾಧುಸ್ವಾಮಿ, ತುಮಕೂರು ಜಿಲ್ಲೆ ಉಸ್ತುವಾರಿ ನೀಡದ್ದಕ್ಕೆ ನೋವು ಸಹಜ. ಬೇರೆ ಜಿಲ್ಲೆ ಮಾಹಿತಿ ಇರಲ್ಲ, ಹೀಗಾಗಿ ಹೋಗಲು ಇಷ್ಟಪಡಲ್ಲ. ಬೇರೆ ಜಿಲ್ಲೆಗೆ ಹೋಗಿ ಅಂದಿದ್ದರು ನಾನೇ ಹೋಗಿಲ್ಲ. ಉಸ್ತುವಾರಿ ನೀಡದೇ ಇದ್ದಿದ್ದಕ್ಕೆ ಯಾವುದೇ ಅಸಮಾಧಾನವಿಲ್ಲ. ಸಂಪುಟ ಸಭೆ ಇರುವ ಹಿನ್ನೆಲೆ ಬೆಂಗಳೂರಿಗೆ ಹೋಗುತ್ತೇನೆ ಅಂತ ತಿಳಿಸಿದರು.

ಧ್ವಜಾರೋಹಣ ಮಾಡದಕ್ಕೆ ಮಾಧುಸ್ವಾಮಿ ಸ್ಪಷ್ಟತೆ: ಚಿಕ್ಕನಾಯಕನಹಳ್ಳಿಯಲ್ಲಿ ಧ್ವಜಾರೋಹಣ ಮಾಡದ ವಿಚಾರಕ್ಕೆ ಸಂಬಂಧಿಸಿ ಟಿವಿ9 ಜೊತೆ ಮಾತನಾಡಿದ ಅವರು, ಧ್ವಜಾರೋಹಣ ಕುರಿತು ಡಿಸಿ ಮೂಲಕ ಸ್ಪಷ್ಟನೆ ಕೇಳಲಾಗಿತ್ತು. ಚಿಕ್ಕನಾಯಕನಹಳ್ಳಿಯಲ್ಲಿ ಧ್ವಜಾರೋಹಣ ಮಾಡುವ ಕುರಿತು ಮೌಖಿಕವಾಗಿ ಕೇಳಲಾಗಿತ್ತು. ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲಿ ಧ್ವಜಾರೋಹಣ ಮಾಡುವ ಬಗ್ಗೆ ನಿರ್ದೇಶನ ನೀಡಲು ಪತ್ರ ಬರೆದಿದ್ದರು. ಆದರೆ ಡಿಸಿ ಬರೆದಿರುವ ಪತ್ರಕ್ಕೆ ಉತ್ತರ ನೀಡಿಲ್ಲ. ಸರ್ಕಾರದಿಂದ ನಿರ್ದೇಶನ ಬಾರದೇ ಹೇಗೆ ಧ್ವಜಾರೋಹಣ ಮಾಡಲಿ. ನಿರ್ದೇಶನ ಬಂದಿಲ್ಲ ಹೀಗಾಗಿ ಚಿಕ್ಕನಾಯಕನಹಳ್ಳಿಗೆ ಹೋಗಿಲ್ಲ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ತೆರಳಲಿರುವ ಮಾಧುಸ್ವಾಮಿ: ಕಾನೂನು ಹಾಗೂ ಸಂಸದೀಯ ಸಚಿವ ಮಾಧುಸ್ವಾಮಿ ಇಂದು ಬೆಂಗಳೂರಿಗೆ ತೆರಳಲಿದ್ದಾರೆ. ಇಂದು ಕ್ಯಾಬಿನೆಟ್ ಸಭೆ ಇರುವ ಹಿನ್ನೆಲೆ ಸಭೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ತೆರಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮದ ಮನೆಯಲ್ಲಿದ್ದರು.

ಇದನ್ನೂ ಓದಿ

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಲ್ಲ; ವಸ್ತ್ರಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ

Follow us on

Related Stories

Most Read Stories

Click on your DTH Provider to Add TV9 Kannada