ಖರೀದಿಸಿದ 6 ತಿಂಗಳಲ್ಲಿ ಮೂಲೆ ಸೇರಿದ ಜೆಸಿಬಿಗಳು; ತುಮಕೂರಿನಲ್ಲಿ ಕಂಪನಿ ವಿರುದ್ಧ ದೂರು ದಾಖಲು
ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ.
ತುಮಕೂರು: ಬೆಂಗಳೂರಿನ ಮಾಕಳಿ ಬಳಿಯಿರುವ ಜೆಸಿಬಿ ಕಂಪನಿಯೊಂದು (JCB Company) ಕಳಪೆ ಗುಣಮಟ್ಟದ ಜೆಸಿಬಿ ನೀಡಿದೆ ಎಂದು ಆರೋಪಿಸಿ ರೈತರು (Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿರುವ ಬಗ್ಗೆ ಆರೋಪಿಸಿರುವ ರೈತರು, ಜೆಸಿಬಿ ಮೇಲೆ ಸಗಣಿ ಎರಚಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ತುಮಕೂರು ತಾಲೂಕಿನ ಹೆಬ್ಬೂರು ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಜಮೀನುಗಳ ಮೇಲೆ ಸಾಲ ಪಡೆದು ರೈತರು 35 ಲಕ್ಷದ 20 ಕ್ಕೂ ಹೆಚ್ಚು ಜೆಸಿಬಿಗಳನ್ನ ಖರೀದಿ ಮಾಡಿದ್ದರು. ಆದರೆ ಖರೀದಿಸಿದ ಆರು ತಿಂಗಳಲ್ಲಿ ಜೆಸಿಬಿಗಳು ಮೂಲೆ ಸೇರಿವೆ.
ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ. ಈ ಬಗ್ಗೆ ಜೆಸಿಬಿ ಕಂಪನಿಗೆ ದೂರು ನೀಡಿದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ರೈತರು ತಿಳಿಸಿದ್ದಾರೆ. ಎರಡು ಮೂರು ಬಾರಿ ಜೆಸಿಬಿ ಕಂಪನಿ ಸಿಬ್ಬಂದಿ ಸರ್ವಿಸ್ ಮಾಡಿಕೊಡುವುದಾಗಿ ಬಂದಿದ್ದರಂತೆ. ಈ ವೇಳೆ ಒಮ್ಮೆ ಜೆಸಿಬಿ ರೆಡಿ ಮಾಡುವುದಕ್ಕೆ 70 ರಿಂದ 80 ಸಾವಿರ ಬಿಲ್ ಹಾಕಿದ್ದರಂತೆ.
ಇದನ್ನೂ ಓದಿ: Bengaluru News: ಶಾಸಕರ ಕಚೇರಿ ಬಳಿ ವೃದ್ಧನ ಹತ್ಯೆ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಹಂತಕ!
ಸರ್ವಿಸ್ ಮಾಡಿಸಿದರೂ ಜೆಸಿಬಿ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಈ ರೀತಿ ಸುಮಾರು 20 ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿವೆ. ಹೀಗಾಗಿ ರೈತರು ಜೆಸಿಬಿ ನಂಬಿ ನಮ್ಮ ಬದುಕು ಬೀದಿಗೆ ಬಂತು ಅಂತ ಅಳು ತೋಡಿಕೊಂಡಿದ್ದಾರೆ. ನಿಮ್ಮ ಜೆಸಿಬಿ ಪಡೆದು ನಮ್ಮ ಹಣ ವಾಪಸ್ ಕೊಡಿ ಅಂತ ಪಟ್ಟು ಹಿಡಿದಿರುವ ರೈತರು, ಜೆಸಿಬಿ ಮೇಲೆ ಸಗಣಿ ಎರಚಿ ಜೆಸಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Wed, 25 May 22