AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕಾಂಗ್ರೆಸ್​​ ಸರ್ಕಾರದ ವಿಭಿನ್ನ ಪ್ಲಾನ್: ಸರ್ಕಾರಿ ಕಚೇರಿಗಳಿಗೇ ಶಾಕ್​! 15 ದಿನದಲ್ಲಿ 760 ಕೋಟಿ ರೂ ಬಾಕಿ ವಸೂಲಿ ಗುರಿ!

ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ನಾನಾ ಇಲಾಖೆಗಳ ನಾನಾ ಕಚೇರಿಗಳಿಂದಲೇ ಭಾರೀ ಬಾಕಿ ಮೊತ್ತ ಬರಬೇಕಿದೆ. ಬರೋಬ್ಬರಿ 760 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಇದುವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಸರ್ಕಾರಿ ಇಲಾಖೆಗಳ ಈ ಕಚೇರಿಗಳಿಗೆ ಬೆಸ್ಕಾಂ ವತಿಯಿಂದ ಎಚ್ಚರಿಕೆ ರವಾನೆಯಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕಾಂಗ್ರೆಸ್​​ ಸರ್ಕಾರದ ವಿಭಿನ್ನ ಪ್ಲಾನ್: ಸರ್ಕಾರಿ ಕಚೇರಿಗಳಿಗೇ ಶಾಕ್​! 15 ದಿನದಲ್ಲಿ 760 ಕೋಟಿ ರೂ ಬಾಕಿ ವಸೂಲಿ ಗುರಿ!
ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕಾಂಗ್ರೆಸ್​​ ಸರ್ಕಾರದ ವಿಭಿನ್ನ ಪ್ಲಾನ್
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​|

Updated on: Sep 28, 2023 | 1:56 PM

Share

ತುಮಕೂರು, ಸೆಪ್ಟೆಂಬರ್​ 28: ರಾಜ್ಯ ಕಾಂಗ್ರೆಸ್​ ಸರ್ಕಾರ (Karnataka Congress government) ತನ್ನ ವಿನೂತನ ಗ್ಯಾರಂಟಿ ಯೋಜನೆಗಳಿಗೆ (guarantee schemes) ಹಣ ಒದಗಿಸಲು ಹೊಸ ಪ್ಲಾನ್ ಹಾಕಿಕೊಂಡಿದೆ. ತತ್ಸಂಬಂಧ ವಿದ್ಯುತ್​​ ಇಲಾಖೆಗೆ (ಬೆಸ್ಕಾಂ -Bangalore Electricity Supply Company Limited -BESCOM) ಇಂತಿಷ್ಟು ಹಣ ಸಂಗ್ರಹಿಸಿಕೊಡಬೇಕು ಎಂದು ಟಾರ್ಗೆಟ್ ಕೊಟ್ಟಿದೆ. ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲು ಮುಂದಾಗಿರುವ ಬೆಸ್ಕಾಂ, ವಿದ್ಯುತ್ ಬಿಲ್ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಸರ್ಕಾರದ ನಾನಾ ಇಲಾಖೆಗಳ ಕಚೇರಿಗಳಿಗೆ ಬಿಲ್​ ಶಾಕ್ ಕೊಟ್ಟಿದೆ. ಅಂದ್ರೆ ಕಳೆದ 15, 20 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಬಾಕಿ ಹಣ ವಸೂಲಿಗೆ ಬೆಸ್ಕಾಂ ಮುಂದಾಗಿದೆ. ಗಮನಾರ್ಹವೆಂದರೆ ಬಾಕಿ ಹಣ ವಸೂಲಿಗೆ ಕೇವಲ 15 ದಿನಗಳ ಕಾಲ ಮಾತ್ರ ಗಡುವು ಕೊಟ್ಟಿದೆ ಬೆಸ್ಕಾಂ.

ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ನಾನಾ ಇಲಾಖೆಗಳ ನಾನಾ ಕಚೇರಿಗಳಿಂದಲೇ ಭಾರೀ ಬಾಕಿ ಮೊತ್ತ ಬರಬೇಕಿದೆ. ಬರೋಬ್ಬರಿ 760 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಇದುವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಸರ್ಕಾರಿ ಇಲಾಖೆಗಳ ಈ ಕಚೇರಿಗಳಿಗೆ ಬೆಸ್ಕಾಂ ವತಿಯಿಂದ ಎಚ್ಚರಿಕೆ ರವಾನೆಯಾಗಿದೆ.

ಈಗಾಗಲೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಸರ್ಕಾರಿ ಇಲಾಖೆ ಕಚೇರಿಗಳಿಗೆ ಹಲವು ಬಾರಿ ನೋಟಿಸ್ ಕೊಟ್ಟಿದೆ ಬೆಸ್ಕಾಂ. ಅಲ್ಲದೇ ಆಯಾ ಇಲಾಖೆಯ ಅಧಿಕಾರಿಗಳನ್ನ ಭೇಟಿಯಾಗಿ ಕೂಡಲೇ ಬಾಕಿ ಬಿಲ್ ಪಾವತಿ ಮಾಡುವಂತೆಯೂ ಮನವಿ ಮಾಡಿದೆ. ಆದರೂ ಸಹ ವಿದ್ಯುತ್ ಬಿಲ್ ಬಾಕಿ ಹಣ ಪಾವತಿ ಮಾಡದ ಸರ್ಕಾರಿ ಇಲಾಖೆಗಳು.

ಇದನ್ನೂ ಓದಿ: ಕರ್ನಾಟಕ ಬಂದ್ ಮಾಡಿದರೆ ಕಾನೂನು ಕ್ರಮ: ಸಂಘಟನೆಗಳಿಗೆ ಗೃಹ ಸಚಿವರ ಎಚ್ಚರಿಕೆ

ಈ ಹಿನ್ನೆಲೆಯಲ್ಲಿ ಇನ್ನು ಕೇವಲ 15 ದಿನಗಳಲ್ಲಿ ಬಾಕಿ ಬಿಲ್ ಮೊತ್ತ ಪಾವತಿ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡೋದಾಗಿ ಎಚ್ಚರಿಕೆ ನೀಡಿದೆ. ಒಳಡಾಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಕಂದಾಯ, ಶಿಕ್ಷಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು, ನಗರಾಭಿವೃದ್ಧಿ, ಲೋಕೋಪಯೋಗಿ, ಸಣ್ಣ ನೀರಾವರಿ, ಕಾನೂನು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಇಲಾಖೆ ಕಚೇರಿಗಳಿಂದ ಸುಮಾರು 760 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಕೂಡಲೇ ಬಾಕಿ ಬಿಲ್ ಮೊತ್ತವನ್ನ ಪಾವತಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಇದೀಗ ಖಡಕ್​ ಎಚ್ಚರಿಕೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.