3 ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ತಾಯಿ ಪತ್ತೆ: ಗೃಹಿಣಿ ಮನೆ ತೊರೆಯಲು ಕಾರಣವೇನು, ಇಲ್ಲಿದೆ ಓದಿ

| Updated By: ವಿವೇಕ ಬಿರಾದಾರ

Updated on: Feb 03, 2024 | 1:21 PM

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದ ಸಿರಿವಂತ ಕುಟುಂಬದ ಗೃಹಿಣಿ ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರಿಗಾಗಿ ಶೋಧಕಾರ್ಯ ನಡೆಸಿದ್ದರು. ಪೊಲೀಸರು ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಿದೂರು ನಾಲ್ವರು ಪತ್ತೆಯಾಗಿರಲಿಲ್ಲ. ಕಾರ್ಯಾಚರಣೆ ಬಿಡದೆ ಶೋಧ ಕಾರ್ಯ ಮುಂದುವರೆಸಿದ್ದ ಪೊಲೀಸರಿಗೆ ತಾಯಿ ಮತ್ತು ಮಕ್ಕಳು ಸಿಕ್ಕಿದ್ದು ಎಲ್ಲಿ? ಅಷ್ಟಕ್ಕೂ ಗೃಹಿಣಿ ಮನೆ ಬಿಟ್ಟು ಹೋಗಲು ಕಾರಣವೇನು? ಇಲ್ಲಿದೆ ಓದಿ..

3 ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ತಾಯಿ ಪತ್ತೆ: ಗೃಹಿಣಿ ಮನೆ ತೊರೆಯಲು ಕಾರಣವೇನು, ಇಲ್ಲಿದೆ ಓದಿ
ಕುಣಿಗಲ್​ ಪೊಲೀಸ್​ ಠಾಣೆ
Follow us on

ತುಮಕೂರು, ಫೆಬ್ರವರಿ 03: ಕುಣಿಗಲ್ (Kunigal) ತಾಲೂಕಿನ ಹೊಸೂರು ಗ್ರಾಮದ ಮುದ್ದಾದ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಕೋಲಾರ (Kolar) ಜಿಲ್ಲೆಯ, ಶ್ರೀನಿವಾಸಪುರದಲ್ಲಿ ಪತ್ತೆಯಾಗಿದ್ದಾರೆ. ವಸಂತಕುಮಾರಿ ವೈ.ಎಸ್ (25), ತನುಶ್ರೀ (8) ಎರಡನೇ ಮಗಳು ಭೂಮಿಕಾ (6) ಮೂರನೇ ಮಗಳು ಯೋಗಿತಾ (4) ಜನವರಿ 18 ರಂದು ಕುಣಿಗಲ್ ತಾಲೂಕಿನ, ಹೊಸೂರಿನಿಂದ ನಾಪತ್ತೆಯಾಗಿದ್ದರು. ಸೊಸೆ ವಸಂತಕುಮಾರಿ ವೈ.ಎಸ್ ನಾಪತ್ತೆಯಾಗುತ್ತಿದ್ದಂತೆ ಅತ್ತೆ ಕುಣಿಗಲ್ ಪೊಲೀಸ್​​ (Police) ಠಾಣೆಯಲ್ಲಿ ದೂರು ದಾಖಲಿಸಿಕೊಂಡರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರಿಗಾಗಿ ಶೋಧಕಾರ್ಯ ನಡೆಸಿದ್ದರು. ಪೊಲೀಸರು ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಿದೂರು ನಾಲ್ವರು ಪತ್ತೆಯಾಗಿರಲಿಲ್ಲ. ಕಾರ್ಯಾಚರಣೆ ಬಿಡದೆ ಶೋಧ ಕಾರ್ಯ ಮುಂದುವರೆಸಿದ್ದ ಪೊಲೀಸರಿಗೆ ತಾಯಿ ಮತ್ತು ಮಕ್ಕಳು ಶ್ರೀನಿವಾಸಪುರದಲ್ಲಿರುವುದು ತಿಳಿದುಬಂದಿದೆ. ಕೂಡಲೆ ಶ್ರೀನಿವಾಸಪುರಕ್ಕೆ ತೆರಳಿದ ಪೊಲೀಸರು ತಾಯಿ ಮತ್ತು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.

ಮೊದಲಿಗೆ ವಸಂತಕುಮಾರಿ ವೈ.ಎಸ್ ಮಾನಸಿಕ ಗೊಂದಲಗಳಿಂದ ಮೂವರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು ಎನ್ನಲಾಗಿತ್ತು. ಆದರೆ ಪೊಲೀಸರ ವಿಚಾರಣೆಯಲ್ಲಿ ಬೇರೆ ಕಥೆ ಹೊರಗೆ ಬಂದಿದೆ.

ಇದನ್ನೂ ಓದಿ: ಅಂಚೆ ಮೂಲಕ ಗಿಫ್ಟ್​​ ಬಾಕ್ಸ್​​ನಲ್ಲಿ ನಗರಕ್ಕೆ ಡ್ರಗ್ಸ್​ ಆಮದು, ಆರೋಪಿಯನ್ನ ಬಂಧಿಸಿದ ಸಿಸಿಬಿ

ಗಾರೆ ಕೆಲಸಕ್ಕೆ ಬಂದವನ ಜೊತೆ‌ ಎಸ್ಕೇಪ್

ವಸಂತಕುಮಾರಿ ವೈ.ಎಸ್ ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದಲ್ಲಿ ಗಂಡನ ಮನೆಯಲ್ಲಿ ವಾಸವಾಗಿದ್ದರು. ವಸಂತಕುಮಾರಿ ಅವರ ಪತಿ ಮೃತಪಟ್ಟು ಕೆಲ ವರ್ಷಗಳಾಗಿವೆ. ವಸಂತಕುಮಾರಿಯ ಗಂಡನ ಮನೆಯವರದ್ದು 8 ಎಕರೆ ಜಮೀನು ಇದ್ದು, ಸ್ಥಿತಿವಂತರಾಗಿದ್ದಾರೆ. ವಸಂತಕುಮಾರಿ ಹೊಸೂರಿನಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದರು. ಮನೆಯ ಗಾರೆ ಕೆಲಸಕ್ಕೆ ಬಳ್ಳಾರಿ ಮೂಲದ ಸಿದ್ದೇಶ್ ಆಗಮಿಸಿದ್ದರು.

ಗಾರೆ ಕೆಲಸಕ್ಕೆ ಬಂದ ಸಿದ್ದೇಶ್​ಗೆ ವಸಂತಕುಮಾರಿ ಮೇಲೆ ಲವ್​​​ ಆಗಿದೆ. ವಸಂತಕುಮಾರಿಗೂ ಸಿದ್ದೇಶ್​ ಮೇಲೆ ಪ್ರೇಮಾಂಕುರವಾಗಿದೆ. ಇಬ್ಬರ ನಡುವೆ ಪ್ರೀತಿ ಕೇವಲ ಮೂರು ದಿನಗಳಲ್ಲಿ ಅರಳಿದೆ.​ ಬಳಿಕ ಜನವರಿ 18 ಪ್ರಿಯಕರ‌ ಸಿದ್ದೇಶ್ ಜೊತೆ ವಸಂತಕುಮಾರಿ ಪರಾರಿಯಾಗಿದ್ದರು.

ಐವರನ್ನು ಪತ್ತೆ ಹಚ್ಚಿ ಪೊಲೀಸರು ಕುಣಿಗಲ್​ಗೆ ಕರೆತಂದಿದ್ದಾರೆ. ವಸಂತಕುಮಾರಿ ಅವರಿಗೆ ಕುಟುಂಸ್ಥರು ಎಷ್ಟೇ ಮನವರಿಕೆ ಮಾಡಿದರು ಮತ್ತೆ ಪ್ರಿಯಕರನ ಜೊತೆ ತೆರಳಿದ್ದಾರೆ. ಇಬ್ಬರು ಮಕ್ಕಳನ್ನು ಗಂಡನ ಮನೆಯಲ್ಲಿ ಬಿಟ್ಟು, ಮತ್ತೊಂದು‌ ಮಗುವನ್ನ ಕರೆದೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ