TB Jayachandra: ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದ ಶಾಸಕ ಟಿಬಿ ಜಯಚಂದ್ರ
ಕಳೆದ 2 ದಿನಗಳ ಹಿಂದೆ ರಾಮನಗರಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ಬಿ ಜಯಚಂದ್ರ ರೈತರ ಹಗರಣದ ವಿಚಾರವಾಗಿ ರೈತರ ಜೊತೆ ಚರ್ಚೆ ಮಾಡಿದ್ದಾರೆ. ಆದರೆ ಇದೀಗ ಶಾಸಕ ಜಯಚಂದ್ರಗೆ ಬೆದರಿಕೆ ಕರೆಗಳು ಹೆಚ್ಚಾಗಿದ್ದು, ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದಿದ್ದಾರೆ.
ತುಮಕೂರು, ಜುಲೈ 28: ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನಲ್ಲೇ ರೈತರಂತೆ ಕರೆ ಮಾಡಿ ಜಿಲ್ಲೆಯ ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ (TB Jayachandra) ಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ರೈತರ ಹಗರಣದ ವಿಚಾರವಾಗಿ ಕಳೆದ 2 ದಿನಗಳ ಹಿಂದೆ ರಾಮನಗರಕ್ಕೆ ಭೇಟಿ ನೀಡಿದ್ದ ಜಯಚಂದ್ರ, ಈ ವೇಳೆ ರೈತರ ಜೊತೆ ಚರ್ಚೆ ಮಾಡಿದ್ದರು. ಭೇಟಿ ಬಳಿಕ ಇದೀಗ ಶಾಸಕ ಜಯಚಂದ್ರಗೆ ಬೆದರಿಕೆ ಕರೆಗಳು ಹೆಚ್ಚಾಗಿವೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಶಾಸಕ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿದ್ದು, ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದಿದ್ದಾರೆ. ನೈಸ್ ಸಂಸ್ಥೆಯ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ಸಾವಿರಾರು ಎಕರೆ ಸರ್ಕಾರಿ, ಖಾಸಗಿ ರೈತರ ಜಮೀನು ಕಬಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಶಾಸಕರ ಅಸಮಾಧಾನದ ಪತ್ರ ಹರಿದು ಹಾಕಿದ ಸಿದ್ದರಾಮಯ್ಯ, ಕಿಚಾಯಿಸಿದ ಬಿಜೆಪಿ
ರೈತರು ಆಹ್ವಾನಿಸಿದ್ದರಿಂದ ಬಿಡದಿಗೆ ಹೋಗಿದ್ದೆ. ಅವರನ್ನು ಭೇಟಿ ಮಾಡಿ ಬಂದ ಬಳಿಕ ಬೆದರಿಕೆ ಕರೆ ಶುರುವಾಗಿದೆ. ನೀವು ಈ ಕ್ಷೇತ್ರದಲ್ಲಿ ಎಲೆಕ್ಷನ್ಗೆ ನಿಲ್ಲಬೇಕಾ. ನಿಮಗೂ ಇದಕ್ಕೂ ಏನು ಸಂಬಂಧ. ಯಾಕೆ ಬರ್ತಿರಾ ಅಂತ ಕೇಳುತ್ತಿದ್ದರು.
ಇದನ್ನೂ ಓದಿ: Siddaramaiah: ಚುನಾವಣಾ ತಕರಾರು ಅರ್ಜಿ; ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್
ನಾನು ಸಾರ್ವಜನಿಕ ಜೀವನದಲ್ಲಿ 45 ವರ್ಷಗಳಿಂದ ಇದ್ದೇನೆ. ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದ್ದೇನೆ ಎಂದರು. ಕೂಡಲೇ ಸರ್ಕಾರ ರೈತರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಈ ರಿಪೋರ್ಟ್ ಅಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Fri, 28 July 23