ಹಿಜಾಬ್ ಸಂಘರ್ಷ ನಡುವೆ ಹಿಂದೂ ದೇವತೆಗಳ ಚಿತ್ರ ಬಿಡಿಸಿ ಸಾಮರಸ್ಯದ ಸಂದೇಶ ಸಾರಿದ ಮುಸ್ಲಿಂ ಕಲಾವಿದ

| Updated By: sandhya thejappa

Updated on: Feb 27, 2022 | 12:54 PM

ತುಮಕೂರಿನ ಸಿದ್ದಗಂಗಾ ಮಠ, ಆದಿ ಚುಂಚನಗಿರಿ, ಚಿಕ್ಕತೋಟ್ಲುಕೆರೆಯ ಅಟವಿ ಮಠ, ತುಮಕೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಿಕ್ಕಪೇಟೆ ಮಾರಮ್ಮ ದೇವತೆಯ ದೇವಸ್ಥಾನ, ಗಂಗಾಧರೇಶ್ವರ ದೇವಸ್ಥಾನದ ಗೋಡೆಗಳ ಮೇಲೆ ದೇವತೆಗಳ ಚಿತ್ರ ಬಿಡಿಸುತ್ತಿದ್ದಾರೆ.

ಹಿಜಾಬ್ ಸಂಘರ್ಷ ನಡುವೆ ಹಿಂದೂ ದೇವತೆಗಳ ಚಿತ್ರ ಬಿಡಿಸಿ ಸಾಮರಸ್ಯದ ಸಂದೇಶ ಸಾರಿದ ಮುಸ್ಲಿಂ ಕಲಾವಿದ
ದೇವತೆಗಳ ಚಿತ್ರ ಬಿಡಿಸುತ್ತಿರುವ ಕಲಾವಿದ ಶಾಹೀದ್
Follow us on

ತುಮಕೂರು: ಹಿಜಾಬ್ (Hijab) ಸಂಘರ್ಷದಿಂದ ಇಡೀ ರಾಜ್ಯದಲ್ಲಿ ಶಾಂತಿ ವಾತವರಣ ಮರೆಯಾಗಿದೆ. ಹಿಂದೂ- ಮುಸ್ಲಿಂ ಸಮುದಾಯ ಜನರ ನಡುವೆ ಘರ್ಷಣೆಗಳು ನಡೆಯುತ್ತಿವೆ. ಈ ನಡುವೆ ತುಮಕೂರಿನ ಮುಸ್ಲಿಂ ಕಲಾವಿದನೊಬ್ಬ ಸದ್ದಿಲ್ಲದೆ ಹಿಂದೂ (Hindu) ದೇವಸ್ಥಾನಗಳ ಗೋಡೆಗಳ ಮೇಲೆ ಹಿಂದೂ ದೇವತೆಗಳ ಚಿತ್ರ ಬಿಡಿಸುತ್ತಾ ಸಾಮರಸ್ಯದ ಸಂದೇಶ ಸಾರಿದ್ದಾರೆ. ತುಮಕೂರಿನ ಅಮಲಾಪುರ ಗ್ರಾಮದ ನಿವಾಸಿ, 58 ವರ್ಷದ ಶಾಹೀದ್ ಹಿಂದೂ ದೇವಾಲಯಗಳ ಗೋಡೆ ಮೇಲೆ ದೇವತೆಗಳ ಚಿತ್ರ ಬಿಡುಸುತ್ತಿರುವ ಕಲಾವಿದ.

ತುಮಕೂರಿನ ಸಿದ್ದಗಂಗಾ ಮಠ, ಆದಿ ಚುಂಚನಗಿರಿ, ಚಿಕ್ಕತೋಟ್ಲುಕೆರೆಯ ಅಟವಿ ಮಠ, ತುಮಕೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಿಕ್ಕಪೇಟೆ ಮಾರಮ್ಮ ದೇವತೆಯ ದೇವಸ್ಥಾನ, ಗಂಗಾಧರೇಶ್ವರ ದೇವಸ್ಥಾನದ ಗೋಡೆಗಳ ಮೇಲೆ ದೇವತೆಗಳ ಚಿತ್ರ ಬಿಡಿಸುತ್ತಿದ್ದಾರೆ. ಶಿವ, ಈಶ್ವರ, ಲಿಂಗ, ಸರಸ್ವತಿ, ಗಣೇಶ, ಅಯ್ಯಪ್ಪ, ಹೀಗೆ ಹಿಂದೂ ದೇವರಗಳ ಚಿತ್ರವನ್ನು ಬಹಳ ಅಂದವಾಗಿ ಬರೆಯುತ್ತಾರೆ.

ಕೇವಲ ಹಿಂದೂ ಧರ್ಮವಷ್ಟೇ ಅಲ್ಲ, ಎಲ್ಲಾ ಧರ್ಮದ ದೇವರುಗಳ ಚಿತ್ರವನ್ನು ಬರೆಯುತ್ತಾರೆ. 5 ವರ್ಷದಿಂದಲೇ ಚಿತ್ರ ಬರೆಯುವ ಹವ್ಯಾಸ ಮೈಗೂಡಿಸಿಕೊಂಡ ಶಾಹೀದ್, ನವಾಸ್ ಆಟ್ಸ್ ಅಂತ ಪ್ರಸಿದ್ಧಿ ಪಡೆದಿದ್ದಾರೆ. 40 ವರ್ಷದಿಂದ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ಕೇವಲ ತುಮಕೂರು ಮಾತ್ರವಲ್ಲ, ಬೆಳಗಾವಿ, ಹುಬ್ಬಳ್ಳಿ, ಮೈಸೂರು ಹೀಗೆ ರಾಜ್ಯಾದ್ಯಂತ ದೇವರ ಚಿತ್ರಗಳನ್ನು ಬಿಡಿಸಿದ್ದಾರೆ.

ಎಸ್ಎಸ್ಎಲ್ಸಿ ಓದಿರುವ ಶಾಹೀದ್ ಹಿಜಾಬ್ ಗಲಾಟೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು, ಎಲ್ಲಾ ಸಮುದಾಯ ಜಾತಿ-ಧರ್ಮಗಳೊಂದಿಗೆ ಪರಸ್ಪರ ಸಹಕಾರದಿಂದ ಇದ್ದಾಗ ಮಾತ್ರ ಜೀವನ ಚೆಂದ ಅಂತ ಹೇಳಿದರು.

ಇದನ್ನೂ ಓದಿ

ಟೊಮೆಟೊ ಬೆಲೆ ಕುಸಿತ; ಕೆಜಿಗೆ 2 ರೂಪಾಯಿಯಂತೆ ಮಾರಾಟ, ಕಂಗಾಲಾದ ರೈತರು

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ರಷ್ಯಾ, ಉಕ್ರೇನ್​​ಗಾಗಿ ಕ್ರಿಪ್ಟೋಕರೆನ್ಸಿಯಲ್ಲಿ ದೇಣಿಗೆಗೆ ಆಗ್ರಹಿಸಿ ಟ್ವೀಟ್