ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ರಷ್ಯಾ, ಉಕ್ರೇನ್​​ಗಾಗಿ ಕ್ರಿಪ್ಟೋಕರೆನ್ಸಿಯಲ್ಲಿ ದೇಣಿಗೆಗೆ ಆಗ್ರಹಿಸಿ ಟ್ವೀಟ್

ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಹ್ಯಾಕರ್​ಗಳು ರಷ್ಯಾ ಮತ್ತು ಉಕ್ರೇನ್‌ಗೆ ಸಹಾಯ ಮಾಡಲು ಕ್ರಿಪ್ಟೋಕರೆನ್ಸಿಯಲ್ಲಿ(cryptocurrency )ದೇಣಿಗೆಯನ್ನು ಕೇಳುವ ಹಲವಾರು ಟ್ವೀಟ್‌ಗಳನ್ನು ಮಾಡಿದ್ದರು.

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ರಷ್ಯಾ, ಉಕ್ರೇನ್​​ಗಾಗಿ ಕ್ರಿಪ್ಟೋಕರೆನ್ಸಿಯಲ್ಲಿ ದೇಣಿಗೆಗೆ ಆಗ್ರಹಿಸಿ ಟ್ವೀಟ್
ಜೆ.ಪಿ. ನಡ್ಡಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Feb 27, 2022 | 12:12 PM

ದೆಹಲಿ: ಭಾನುವಾರ ಬೆಳಗ್ಗೆ ಬಿಜೆಪಿ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ(JP Nadda) ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ರಷ್ಯಾ ಮತ್ತು ಉಕ್ರೇನ್‌ಗೆ ಸಹಾಯ ಮಾಡಲು ಕ್ರಿಪ್ಟೋಕರೆನ್ಸಿಯಲ್ಲಿ(cryptocurrency )ದೇಣಿಗೆಯನ್ನು ಕೇಳುವ ಹಲವಾರು ಟ್ವೀಟ್‌ಗಳನ್ನು ಮಾಡಲಾಗಿದ್ದು, ಅವು ಈಗ ಡಿಲೀಟ್ ಆಗಿದೆ. ಯುಕ್ರೇನ್ ಜನರ ಪರವಾಗಿ ನಿಲ್ಲಿ.  ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ನೀಡಿ ಎಂದು ಟ್ವೀಟ್  ಮಾಡಲಾಗಿತ್ತು. ಇನ್ನೊಂದು ಟ್ವೀಟ್​​ನಲ್ಲಿ  ನನ್ನ  ಖಾತೆ  ಹ್ಯಾಕ್ ಆಗಿಲ್ಲ.  ಎಲ್ಲ ದೇಣಿಗೆಯನ್ನು ಉಕ್ರೇನ್  ಸರ್ಕಾರಕ್ಕೆ ನೀಡಲಾಗುವುದು ಎಂದಿದೆ. ಇದೀಗ  ನಡ್ಡಾ  ಅವರ ಟ್ವಿಟರ್ ಖಾತೆಯನ್ನು ಪುನಸ್ಥಾಪಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ  ಟ್ವೀಟ್ ಮಾಡಿದೆ. ಟ್ವೀಟ್‌ನಲ್ಲಿ ಹಿಂದಿಯಲ್ಲಿ ಸಂದೇಶವಿದೆ ಮತ್ತು ಬಿಟ್‌ಕಾಯಿನ್ ಮತ್ತು ಎಥೆರಿಯಮ್ ವ್ಯಾಲೆಟ್‌ಗಳಿಗೆ ವಿಳಾಸಗಳಿವೆ. ಟ್ವೀಟ್ ಅನ್ನು ಬೆಳಗ್ಗೆ  9:52 ಕ್ಕೆ ಪೋಸ್ಟ್ ಮಾಡಲಾಗಿದೆ. 10 ನಿಮಿಷಗಳಲ್ಲಿ, ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸೂಚಿಸುವ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದ್ದು ಜನರು ರಷ್ಯಾವನ್ನು ಬೆಂಬಲಿಸಬೇಕು ಎಂದು ಹೇಳಿತ್ತು. ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್  ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ  ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್  ಹ್ಯಾಕ್ ಆಗಿರುವ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಮತ್ತು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT) ಇದನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ .

ಈ ಹಿಂದೆಯೂ ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು ಭಾರತೀಯ ನಾಯಕರು ಅಥವಾ ಏಜೆನ್ಸಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಫೆಬ್ರವರಿ 15 ರಂದು ಸಂಸದ್ ಟಿವಿಯ ಯುಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

ಈ ವರ್ಷದ ಜನವರಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಕೆಲವೇ ಗಳಿಗೆಯಲ್ಲಿ ಖಾತೆಯನ್ನು ಮರುಸ್ಥಾಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಹ್ಯಾಕರ್‌ಗಳು ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನು ಟೆಂಡರ್ ಆಗಿ ಅಳವಡಿಸಿಕೊಂಡಿದೆ ಎಂದು ಆರೋಪಿಸಿ ಟ್ವೀಟ್ ಪ್ರಕಟಿಸಿದ್ದರು.

ಇದನ್ನೂ ಓದಿ: ರಷ್ಯಾ ಸೇನೆಗೆ ದಾರಿ ತಪ್ಪಿಸುತ್ತಿರುವ ಉಕ್ರೇನ್​ ಸರ್ಕಾರಿ ಕಂಪನಿ; ನರಕಕ್ಕೆ ಹೋಗಲು ಸಹಾಯ ಮಾಡುತ್ತಿರುವುದಾಗಿ ಫೇಸ್​​ಬುಕ್​ ಪೋಸ್ಟ್​​, ಅಶ್ಲೀಲ ಬೈಗುಳ

Published On - 10:56 am, Sun, 27 February 22