ಬಂಗಾಳದಲ್ಲಿ ಹೊಸ ಕಥೆ ಬರೆಯುತ್ತೇವೆ : ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಜೆಪಿ ನಡ್ಡಾ

JP Nadda ಪೂರ್ವ ರಾಜ್ಯದಲ್ಲಿ ಬಿಜೆಪಿಯ ಉತ್ತುಂಗವು ಇನ್ನೂ ಬರಬೇಕಿದೆ ಎಂದು ಹೇಳಿದ ನಡ್ಡಾ, "ಪಶ್ಚಿ ಮ ಬಂಗಾಳದಲ್ಲಿ ಪಕ್ಷವು ಹೊಸ ಕಥೆಯನ್ನು ರಚಿಸುತ್ತದೆ" ಎಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಭರವಸೆ ನೀಡಿದರು.

ಬಂಗಾಳದಲ್ಲಿ ಹೊಸ ಕಥೆ ಬರೆಯುತ್ತೇವೆ : ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಜೆಪಿ ನಡ್ಡಾ
ಜೆಪಿ ನಡ್ಡಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 07, 2021 | 2:53 PM

ದೆಹಲಿ: ಭಾನುವಾರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ (national executive meeting) ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda)ಅವರು ಪಶ್ಚಿಮ ಬಂಗಾಳದಲ್ಲಿ ಪಕ್ಷವು ಬೆಳೆಯುತ್ತಿರುವ ವೇಗಕ್ಕೆ ಭಾರತದ ರಾಜಕೀಯದಲ್ಲಿ ಕೆಲವೇ ಕೆಲವು ಸಮಾನಾಂತರಗಳಿವೆ ಎಂದು ಹೇಳಿದರು. ಪೂರ್ವ ರಾಜ್ಯದಲ್ಲಿ ಬಿಜೆಪಿಯ ಉತ್ತುಂಗವು ಇನ್ನೂ ಬರಬೇಕಿದೆ ಎಂದು ಹೇಳಿದ ನಡ್ಡಾ, “ಪಶ್ಚಿ ಮ ಬಂಗಾಳದಲ್ಲಿ ಪಕ್ಷವು ಹೊಸ ಕಥೆಯನ್ನು ರಚಿಸುತ್ತದೆ” ಎಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಭರವಸೆ ನೀಡಿದರು. ಹಿಂದಿನ ದಿನ, ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಥಿಕ ವಿಷಯಗಳ ಜೊತೆಗೆ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಭೆಯನ್ನು ಪ್ರಾರಂಭಿಸಿದರು. ಕೊವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಮೊದಲ ಬಾರಿಗೆ ಸಭೆ ನಡೆಸಲಾಗುತ್ತಿದ್ದು, ಕೆಲವರು ಆನ್ ಲೈನ್ ಮೂಲಕ ಇನ್ನು ಕೆಲವರುವ ಖುದ್ದಾಗಿ ಹಾಜರಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಅವರು ಸಮಾರೋಪ ಭಾಷಣ ಮಾಡಲಿದ್ದು, ದಿನದ ಕಾರ್ಯಸೂಚಿಯನ್ನು ರೂಪಿಸಿ ವಿವಿಧ ವಿಷಯಗಳ ಕುರಿತು ಪಕ್ಷದ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಬಿಜೆಪಿಯ ಯೋಜನೆಗಳಲ್ಲಿ ಬಂಗಾಳವು ಒಂದು ಪ್ರಮುಖ ರಾಜ್ಯವಾಗಿದೆ ಮತ್ತು ಕೆಲವು ವರ್ಷಗಳ ಹಿಂದೆ ಕನಿಷ್ಠ ಅಸ್ತಿತ್ವವನ್ನು ಹೊಂದಿದ್ದ ಪಕ್ಷವು ಈಗ ರಾಜ್ಯದಿಂದ 70 ಶಾಸಕರು ಮತ್ತು 18 ಸಂಸದರನ್ನು ಹೊಂದಿದೆ. ಸ್ವಪನ್ ದಾಸ್ ಗುಪ್ತಾ, ಅನುಪಮ್ ಹಜ್ರಾ ಮತ್ತು ಕೈಲಾಶ್ ವಿಜಯವರ್ಗಿಯಾ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅನೇಕ ನಾಯಕರು ಸಭಿಕರಲ್ಲಿ ಹಾಜರಿದ್ದರು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಭರ್ಜರಿ ಗೆಲುವಿನ ನಂತರ ಹೆಚ್ಚಿನ ಸಂಖ್ಯೆಯ ಬಿಜೆಪಿ ನಾಯಕರು ರಾಜ್ಯದಲ್ಲಿ ಪಕ್ಷವನ್ನು ತೊರೆದು ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದಾರೆ ಅಥವಾ ಮರಳಿದ್ದಾರೆ. ಹೊಸದಾಗಿ ನಾಮನಿರ್ದೇಶನಗೊಂಡ ಅದರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ರಾಜೀಬ್ ಬ್ಯಾನರ್ಜಿ ಅವರು ಬಿಜೆಪಿಗೆ ಸೇರಿದ ತಿಂಗಳ ನಂತರ ಟಿಎಂಸಿಗೆ ಸೇರ್ಪಡೆ ಆಗಿದ್ದರು.

ಹೊಸ ಗುರಿಗಳನ್ನು ನಿಗದಿಪಡಿಸಿರುವ ನಡ್ಡಾ, ರಾಜ್ಯದಲ್ಲಿ ಡಿಸೆಂಬರ್ 25 ರೊಳಗೆ ಬೂತ್ ಮಟ್ಟದ ಸಮಿತಿ ರಚನೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.ಬೂತ್ ಮಟ್ಟದಲ್ಲಿ ಮನ್ ಕಿ ಬಾತ್ ಆಲಿಸಲು ಪ್ರತಿ ಬೂತ್ ಗಳನ್ನು ಸಜ್ಜು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ; ಎಂಎಲ್​ಸಿ ಎನ್​ ರವಿಕುಮಾರ್ ಮಾಹಿತಿ