ಪಾಕಿಸ್ತಾನ ನೌಕಾಪಡೆಯಿಂದ ಗುಂಡಿನ ದಾಳಿ: ಗುಜರಾತ್ ಕರಾವಳಿಯಲ್ಲಿ ಓರ್ವ ಭಾರತೀಯ ಮೀನುಗಾರನ ಹತ್ಯೆ
ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ 'ಜಲ್‌ಪರಿ' ಎಂಬ ಹೆಸರಿನ ಬೋಟ್ ಮೇಲೆ ಪಾಕಿಸ್ತಾನದ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು.ಈ ಗುಂಡಿನ ದಾಳಿಯಲ್ಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.
ಅಹಮದಾಬಾದ್: ಪಾಕಿಸ್ತಾನ ನೌಕಾಪಡೆ ಗುಜರಾತ್ ಕರಾವಳಿಯಲ್ಲಿ ಒಬ್ಬ ಭಾರತೀಯ ಮೀನುಗಾರನನ್ನು ಹತ್ಯೆ ಮಾಡಿದೆ. ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ ‘ಜಲ್‌ಪರಿ’ ಎಂಬ ಹೆಸರಿನ ಬೋಟ್ ಮೇಲೆ ಪಾಕಿಸ್ತಾನದ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು.ಈ ಗುಂಡಿನ ದಾಳಿಯಲ್ಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನಿ ನೌಕಾ ಅಧಿಕಾರಿಗೆ ಗುಂಡು ಹಾರಿಸಿರುವುದಾಗಿ ಹೇಳಿದ್ದು. ಗುಜರಾತ್‌ನ ಸ್ಥಳೀಯ ಮಾಧ್ಯಮಗಳು ಚಿತ್ರಗಳನ್ನು ವರದಿ ಮಾಡಿವೆ. ಆದರೆ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ಗುಜರಾತ್ ನ ದ್ವಾರಕಾದಲ್ಲಿ ಈ ಘಟನೆ ನಡೆದಿದೆ. ಜಲ್‌ಪರಿ ಎಂಬ ದೋಣಿಯಲ್ಲಿದ್ದ ಮೀನುಗಾರರ ಗುಂಪಿನ ಮೇಲೆ ಪಾಕಿಸ್ತಾನಿ ನೌಕಾಪಡೆ ಗುಂಡಿನ ದಾಳಿ ನಡೆಸಿತು. ದೋಣಿಯಲ್ಲಿ ಏಳು ಜನರಿದ್ದರು.ರ ಆರು ಜನರನ್ನು ಪಾಕಿಸ್ತಾನಿ ಪಡೆಗಳು ಬಂಧಿಸಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಕೊವಿಡ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗ ಟ್ವಿಟರ್ನಲ್ಲಿ ಬ್ಯುಸಿಯಾಗಿದ್ದ ವಿಪಕ್ಷ ನಾಯಕರು ಮನೆಯಲ್ಲೇ ಇರಲಿ: ಯೋಗಿ ಆದಿತ್ಯನಾಥ
Published On - 4:12 pm, Sun, 7 November 21