ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ 1,800 ಪುಡ್ ಕಿಟ್​ಗಳು, ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಇಲಾಖೆಯು ಲಾಕ್ ಡೌನ್ ವೇಳೆ ಸುಮಾರು 1,800 ಪುಡ್ ಕಿಟ್ ಗಳನ್ನ ತರಿಸಲಾಗಿತ್ತು. ಆದರೆ ಇದನ್ನು ಯಾರಿಗೂ ವಿತರಿಸದೇ ಗೋಡೌನ್ ನಲ್ಲಿ ಉಳಿಸಿಕೊಳ್ಳಲಾಗಿತ್ತು. ಸದ್ಯ ಪುಡ್ ಕಿಟ್ಗಳಿಗೆ ಹುಳುಗಳು ಬಿದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ 1,800 ಪುಡ್ ಕಿಟ್​ಗಳು, ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ 1,800 ಪುಡ್ ಕಿಟ್ಗಳು, ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
TV9kannada Web Team

| Edited By: Ayesha Banu

Sep 24, 2021 | 1:45 PM

ತುಮಕೂರು: ಮಹಾಮಾರಿ ಕೊರೊನಾ ಲಾಕ್ ಡೌನ್ ವೇಳೆ ಕಾರ್ಮಿಕರಿಗೆ ನೀಡಲೆಂದು ತಂದಿದ್ದ ಪುಡ್ ಕಿಟ್ಗಲನ್ನು ವಿತರಣೆ ಮಾಡದೆ ಹಾಗೇ ಉಳಿಸಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇದರ ಪರಿಣಾಮ ಸುಮಾರು 1,800 ಪುಡ್ ಕಿಟ್ಗಳು ಹುಳುಗಳ ಪಾಲಾಗಿದೆ. ಬಡವರ ಹೊಟ್ಟೆ ಸೇರ ಬೇಕಿದ್ದ ಆಹಾರದಲ್ಲಿ ಹುಳುಗಳು ನರ್ತಿಸುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಇಲಾಖೆಯು ಲಾಕ್ ಡೌನ್ ವೇಳೆ ಸುಮಾರು 1,800 ಪುಡ್ ಕಿಟ್ ಗಳನ್ನ ತರಿಸಲಾಗಿತ್ತು. ಆದರೆ ಇದನ್ನು ಯಾರಿಗೂ ವಿತರಿಸದೇ ಗೋಡೌನ್ ನಲ್ಲಿ ಉಳಿಸಿಕೊಳ್ಳಲಾಗಿತ್ತು. ಸದ್ಯ ಪುಡ್ ಕಿಟ್ಗಳಿಗೆ ಹುಳುಗಳು ಬಿದ್ದಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಅಧಿಕಾರಿಗಳು ಕಿಟ್ ಗಳನ್ನ ನೀಡಿದ್ದರೇ ಈ ಗತಿ ಬರುತ್ತಿರಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಸದ್ಯ ಹುಳು ಬಿದ್ದ 1800 ಕಿಟ್ ಗಳು ಭೂಮಿ ಪಾಲಾಗಿವೆ. ಲಾಕ್ ಡೌನ್ ನಲ್ಲಿ ಸರ್ಕಾರ ಲಕ್ಷಾಂತರ ಹಣ ವ್ಯಯಿಸಿ ಕಾರ್ಮಿಕರಿಗೆ ಕಿಟ್ಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಿದರೇ ಅಧಿಕಾರಿಗಳು ಮಾತ್ರ ಕಿಟ್ಗಳನ್ನು ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tumkur food kit

ಹುಳುಗಳ ಪಾಲಾದ 1,800 ಪುಡ್ ಕಿಟ್ಗಳು

ಇದನ್ನೂ ಓದಿ: ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada