ಮದುವೆಯಾಗಿ ವಂಚನೆ, ಮಗು ಬೇಡವೆಂದು ಗಲಾಟೆ: ಪಿಡಿಓ ವಿರುದ್ಧ ದೂರು

| Updated By: ಸಾಧು ಶ್ರೀನಾಥ್​

Updated on: Feb 19, 2022 | 10:33 AM

ಸುದರ್ಶನ್ ರನ್ನ ಹುಡುಕಿಕೊಂಡು ಗ್ರಾಮ ಪಂಚಾಯತ್ ಗೆ ಜನವರಿ 27 ರಂದು ಭೇಟಿ ನೀಡಿದ್ದು ಅವರು ಅಲ್ಲಿ ಇರಲಿಲ್ಲ. ಇದರಿಂದ ಬೇಸತ್ತು ಕುಣಿಗಲ್ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದೆ. ಜೊತೆಯಲ್ಲಿ ಇದ್ದ‌ ಮಗು ಕೂಗಿಕೊಂಡ ಕಾರಣ ದಾರಿಯಲ್ಲಿ ಹೋಗುತ್ತಿದ್ದವರು ನನ್ನ ಪಾರು ಮಾಡಿದ್ದರು.

ಮದುವೆಯಾಗಿ ವಂಚನೆ, ಮಗು ಬೇಡವೆಂದು ಗಲಾಟೆ:  ಪಿಡಿಓ ವಿರುದ್ಧ ದೂರು
ಮದುವೆಯಾಗಿ ವಂಚನೆ, ಮಗು ಬೇಡವೆಂದು ಗಲಾಟೆ: ಪಿಡಿಓ ವಿರುದ್ಧ ದೂರು
Follow us on

ತುಮಕೂರು: ಮದುವೆಯಾಗಿ ಗರ್ಭಿಣಿಯಾದ ನಂತರ ನನ್ನ ಪತಿ ವಂಚಿಸಿದ್ದಾರೆ ಎಂದು ಆರೋಪಿಸಿ ಟಿ. ನರಸೀಪುರ ತಾಲೂಕಿನ ಮಹಿಳೆಯೊಬ್ಬರು ಕುಣಿಗಲ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ತೆರೆದಕುಪ್ಪೆ ಗ್ರಾಮ ಪಂಚಾಯತ್​ನ ಪಿಡಿಓ (PDO) ಸುದರ್ಶನ್ ವಿರುದ್ಧ ದೂರು ನೀಡಿದ್ದು, 2011 ರಲ್ಲಿ ದೇವರಾಯನದುರ್ಗ ಬೆಟ್ಟದಲ್ಲಿ ನನ್ನ ವಿವಾಹವಾಗಿತ್ತು. 2016 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹದ ನೊಂದಣಿಯಾಗಿದೆ. 2021 ರಲ್ಲಿ ಮದುವೆಯಾಗಿರುವ ವಿಚಾರ ನನ್ನ ಪತಿಯ ತಾಯಿ ಮತ್ತು ಸಹೋದರರಿಗೆ ತಿಳಿದಾಗ ಅವರು ಆಕ್ಷೇಪಿಸಿದ್ದಾರೆ. ಬಳಿಕ ಸುದರ್ಶನ್ ಮನೆಗೆ ಬರುವುದನ್ನ ನಿಲ್ಲಿಸಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಸುದರ್ಶನ್ ರನ್ನ ಹುಡುಕಿಕೊಂಡು ಗ್ರಾಮ ಪಂಚಾಯತ್ ಗೆ ಜನವರಿ 27 ರಂದು ಭೇಟಿ ನೀಡಿದ್ದು ಅವರು ಅಲ್ಲಿ ಇರಲಿಲ್ಲ. ಇದರಿಂದ ಬೇಸತ್ತು ಕುಣಿಗಲ್ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದೆ. ಜೊತೆಯಲ್ಲಿ ಇದ್ದ‌ ಮಗು ಕೂಗಿಕೊಂಡ ಕಾರಣ ದಾರಿಯಲ್ಲಿ ಹೋಗುತ್ತಿದ್ದವರು ನನ್ನ ಪಾರು ಮಾಡಿದ್ದರು. ಬಳಿಕ ಚಿಕಿತ್ಸೆ ಪಡೆದು ತಂದೆ ಮನೆಗೆ ಹೋಗಿ ಆರೋಗ್ಯ ಸುಧಾರಣೆ ಬಳಿಕ ಪೊಲೀಸ್​​ ಠಾಣೆಗೆ ಬಂದು ದೂರು ನೀಡಿದ್ದೇನೆ ಅಂತಾ ತಿಳಿಸಿದ್ದಾರೆ.

ಇನ್ನು, ಗರ್ಭಿಣಿಯಾದಗಿಂದಲೂ ಮಗು ಬೇಡವೆಂದು ಗಲಾಟೆ ಮಾಡಿ ಸುದರ್ಶನ್ ಬೈದು ಹೊಡೆಯುತ್ತಿದ್ದರು ಅಂತಾ ಮಹಿಳೆ ಆರೋಪಿಸಿದ್ದಾರೆ. ಹತ್ತು ದಿನಗಳಿಂದ ಮನೆಗೆ ಬಾರದೆ ಮಾನಸಿಕ ಹಿಂಸೆ ನೀಡಿರುವ ಪತಿ ಸುದರ್ಶನ್, ಅತ್ತೆ ಹಾಗೂ ನಾದಿನಿ ವಿರುದ್ಧ ಕ್ರಮ ವಹಿಸುವಂತೆ ಮಹಿಳೆ ದೂರು ನೀಡಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ಯಲ್ಲಿ ದೂರು ನೀಡಲಾಗಿದೆ. (ವರದಿ -ಮಹೇಶ್)

ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ
ಬಳ್ಳಾರಿ: ಸಾರಿಗೆ ಖಾತೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ (bellary) ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು (B Sriramulu) ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಹರಿಶ್ಚಂದ್ರ ಘಾಟ್ ಗೆ (graveyard) ಶನಿವಾರ ನಸುಕಿನ ಜಾವವೇ ಭೇಟಿ ನೀಡಿ ಸ್ವತಃ ಜೆಸಿಬಿ ಮೂಲಕ ಸ್ವಚ್ಚತಾ ಕಾರ್ಯ (Swachhta) ನಡೆಸಿದರು.

ಪ್ರತಿದಿನದ ಮುಂಜಾನೆ ವಾಕಿಂಗ್ ನಂತೆ ಇಂದು ಸಹ ನಸುಕಿನ ಜಾವವೇ ವಾಕಿಂಗ್ ಮಾಡುತ್ತಾ ಶಾಸಕ ಸೋಮಶೇಖರ್ ರೆಡ್ಡಿ ಜೊತೆ ಸಶ್ಮಾನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಕೈಗೊಳ್ಳಬೇಕಾದ ಸ್ವಚ್ಛತಾ ಕಾರ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ ನಗರದಲ್ಲಿರುವ 30 ಸ್ಮಶಾನಗಳಲ್ಲಿ ಈಗಾಗಲೇ 13 ಶವಸಂಸ್ಕಾರ ಸ್ಥಳಗಳಲ್ಲಿ ವಿದ್ಯುತ್ ದೀಪಗಳು, ರಸ್ತೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೇ ರೀತಿ ಉಳಿದ ಸ್ಮಶಾನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದು ತಿಳಿಸಿದರು. ಈ ಹಿಂದೆ ಸಮಾಜ ಕಲ್ಯಾಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಒತ್ತು ನೀಡಿದನ್ನು ಇದೇ ಸಂದರ್ಭದಲ್ಲಿ ಸಚಿವರು ಸ್ಮರಿಸಿಕೊಂಡರು.

ಸ್ವಚ್ಛತೆ ಪರಿಶೀಲನೆ ನಡೆಸುವುದರ ಜೊತೆಗೆ ಸ್ವತಃ ಜೆಸಿಬಿ ಚಲಾಯಿಸಿ ಸ್ವಚ್ಛತೆ: ಸ್ವಚ್ಛತೆ ಪರಿಶೀಲನೆ ನಡೆಸುವುದರ ಜೊತೆಗೆ ಸ್ವತಃ ಜೆಸಿಬಿ ಚಲಾಯಿಸಿ ಸ್ವಚ್ಛತೆ ಮಾಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಇದ್ದರು.

Also Read:
B Sriramulu: ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ

Also Read:
RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?

Published On - 10:02 am, Sat, 19 February 22