ಹುಚ್ಚು ನಾಯಿ ಹಾವಳಿಗೆ ಕಂಗೆಟ್ಟ ತುಮಕೂರು ಜನ; ಐವರ ಮೇಲೆ ದಾಳಿ, ಓರ್ವ ಬಾಲಕಿ ಸ್ಥಿತಿ ಗಂಭೀರ
ತುಮಕೂರು ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಾವಳಿಯಿಂದ ತುಮಕೂರು ಜನತೆ ಕಂಗಟ್ಟಿದೆ. ಈ ನಡುವೆ ಹೊರಗಿನಿಂದ ಶ್ವಾನಗಳನ್ನು ರಾತ್ರೋ ರಾತ್ರೊ ಬಿಟ್ಟು ಹೋಗುತ್ತಿರುವ ಆರೋಪ ಕೇಳಿ ಬಂದಿದೆ. ಕಥೆ ಇಷ್ಟೇ ಆಗಿದ್ರೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ಬರೋಬ್ಬರಿ ಐವರ ಮೇಲೆ ಎರಗಿದೆ. ಅದರಲ್ಲಿ ಓರ್ವ ಬಾಲಕಿ ಗಂಭೀರವಾಗಿದ್ದಾಳೆ. ಇದರಿಂದ ಪಾಲಿಕೆ ಅಲ್ಲದೆ ನಿವಾಸಿಗಳಿಗೂ ಆತಂಕ ಎದುರಾಗಿದೆ.
ತುಮಕೂರು, ಜೂ.19: ನಾಯಿಗಳ ಹಾವಳಿಯಿಂದ ಕಲ್ಪತರು ನಾಡು ತುಮಕೂರು(Tumakuru) ಜನತೆ ಕಂಗಟ್ಟಿದ್ದಾರೆ. ಹೌದು, ತುಮಕೂರು ನಗರದ ಗೋಕುಲ ಬಡಾವಣೆಯ 8ನೇ ಕ್ರಾಸ್ನಲ್ಲಿ ಶಾಲೆಯಿಂದ ಬಂದು ಮನೆ ಮುಂದೆ ಆಟ ಆಡುತ್ತಿದ್ದ ಪುಟ್ಟ ಬಾಲಕಿ ಮೇಲೆ ಹುಚ್ಚುನಾಯಿ(DOG) ಎರಗಿ, ಮನ ಬಂದಂತೆ ಕಚ್ಚಿ ಗಾಯಗೊಳಿಸಿದೆ. ಹುಚ್ಚು ನಾಯಿ ದಾಳಿಯಿಂದ ಕಿರುಚಾಡುತಿದ್ದ ಮಗಳ ಕಿರುಚಾಟ ಕೇಳಿ ಮನೆಯಿಂದ ಓಡಿ ಬಂದ ಪೋಷಕರು, ನಾಯಿಯನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಬಿಡದ ನಾಯಿ, ಗಂಭೀರವಾಗಿ ಗಾಯಗೊಳಿಸಿದೆ. ತಕ್ಷಣ ಮಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಹುಚ್ಚು ನಾಯಿಯ ಅವಾಂತರ ಇಷ್ಟಕ್ಕೆ ನಿಂತಿಲ್ಲ. ಪಕ್ಕದ ಮನೆಯ ಮುಂದೆ ಕಟ್ಟಿದ್ದ ಎರಡು ಸಾಕು ನಾಯಿಗಳ ಮೇಲೆಯೂ ದಾಳಿ ನಡೆಸಿದೆ. ಅವುಗಳ ಮೇಲೂ ಮನ ಬಂದಂತೆ ಕಚ್ಚಿ ಗಾಯಗೊಳಿಸಿ ಪರಾರಿಯಾಗಿದೆ. ಈ ವಿಷಯ ತಿಳಿದ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಗಾಯಗೊಂಡ ಬಾಲಕಿಯ ಮನೆಗೆ ಭೇಟಿ ನೀಡಿದರು. ಬಾಲಕಿ ಹಾಗೂ ಪೊಷಕರ ಜೊತೆ ಮಾತನಾಡಿ ಘಟನೆಯ ವಿವರ ತೆಗೆದುಕೊಂಡರು. ಪಾಲಿಕೆಯಿಂದ ಬರುವ ಪರಿಹಾರ ಹಣನ್ನು ಕೊಡಿಸುವ ಭರವಸೆ ನೀಡಿದರು. ಅಲ್ಲದೆ ನಗರದಲ್ಲಿ ನಾಯಿಗಳ ಹಾವಳಿ ಹೆಚ್ವಾಗಿರೋದಕ್ಕೆ ಆತಂಕ ವ್ಯಕ್ತಪಡಿಸಿದ ಆಯುಕ್ತೆ, ‘ಎಬಿಸಿ ಚಿಕಿತ್ಸೆಗೆ ಸದ್ಯದಲ್ಲೇ ಟೆಂಡರ್ ಕರೆದು ಶ್ವಾನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳೋದಾಗಿ ಹೇಳಿದರು.
ಇದನ್ನೂ ಓದಿ:ಮಂಡ್ಯ: ಬೃಂದಾವನದಲ್ಲಿ ಐವರು ಪ್ರವಾಸಿಗರನ್ನು ಕಚ್ಚಿದ ಹುಚ್ಚುನಾಯಿ, ಬೇಜವಾಬ್ದಾರಿತನ ಪ್ರದರ್ಶಶಿಸಿದ ಅಧಿಕಾರಿಗಳು
ಹುಚ್ಚು ನಾಯಿಯನ್ನ ಜನ ಅಟ್ಟಾಡಿಸಿ ಕೊಂದ ಬಡಾವಣೆಯ ಜನ
ಬಡಾವಣೆಯ ಜನರಲ್ಲಿ ಆತಂಕ ಸೃಷ್ಟಿಸಿದ ಹುಚ್ಚು ನಾಯಿಯನ್ನ ಜನ ಅಟ್ಟಾಡಿಸಿ ಕೊಂದು ಹಾಕಿದ್ದಾರೆ. ಜನರಿಂದ ಹಲ್ಲೆಯಾಗಿ ಮೃತಪಟ್ಟ ನಾಯಿ ಶವವನ್ನು ವೆಟರ್ನರಿ ವೈದ್ಯರು ಪ್ರಯೋಗಾಲಯಕ್ಕೆ ಕೊಂಡೋಯ್ದಿದ್ದಾರೆ. ನಾಯಿಗಳ ಹಾವಳಿ ನಗರದಲ್ಲಿ ಹೆಚ್ಚಾಗಲು ಬೇರೆ ಕಡೆಯಿಂದ ರಿಂಗ್ ರಸ್ತೆ ಬಳಿ ನಾಯಿಗಳನ್ನ ತಂದು ಬಿಟ್ಟು ಹೋಗುತ್ತಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಇಂತವರ ಮೇಲೆ ನಗರದ ಹೊರಗೆ ಹಾಕಲಾಗಿರುವ ಸಿಸಿ ಕ್ಯಾಮರಾಗಳ ತಪಾಸಣೆಗೆ ಮುಂದಾಗಿರುವ ಪಾಲಿಕೆ. ಅಂತಹ ಪ್ರಕರಣ ಕಂಡು ಬಂದರೆ ಕಾನೂನು ಕ್ರಮಕ್ಕೆ ಸಿದ್ಧವಾಗಿದೆ. ಇನ್ನಾದರೂ ನಾಯಿಗಳ ನಿಯಂತ್ರಣ ಆಗುತ್ತಾ ಇಲ್ಲವಾ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ