AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಕರಿಗೆ ವಿನಾಯ್ತಿ ಬೆನ್ನಲ್ಲೇ ಗ್ರಾಮ ಪಂಚಾಯ್ತಿ ವಾಟರ್ ಮ್ಯಾನ್​​ಗಳ ಹೆಗಲಿಗೆ ಜಾತಿ ಸಮೀಕ್ಷೆ

ತುಮಕೂರು ಜಿಲ್ಲೆಯ ಜಾತಿ ಗಣತಿ ಶೇ.96ರಷ್ಟು ಪೂರ್ಣಗೊಂಡಿದೆ. ಬಾಕಿ ಉಳಿದ ಶೇ.4ರಷ್ಟು ಸಮೀಕ್ಷೆಯನ್ನು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ವಾಟರ್‌ಮ್ಯಾನ್‌ಗಳಿಗೆ ವಹಿಸಲಾಗಿದೆ. ತರಬೇತಿ ನೀಡಿದ್ದರೂ, ಶಿಕ್ಷಕರಿಗೇ ಕಷ್ಟವಾಗಿದ್ದ ಸಮೀಕ್ಷೆ ಕಾರ್ಯವನ್ನು ಕನಿಷ್ಠ ವಿದ್ಯಾರ್ಹತೆ ಇಲ್ಲದ ವಾಟರ್‌ಮ್ಯಾನ್‌ಗಳು ನಡೆಸುವುದು ಅದರ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಿಕ್ಷಕರಿಗೆ ವಿನಾಯ್ತಿ ಬೆನ್ನಲ್ಲೇ ಗ್ರಾಮ ಪಂಚಾಯ್ತಿ ವಾಟರ್ ಮ್ಯಾನ್​​ಗಳ ಹೆಗಲಿಗೆ ಜಾತಿ ಸಮೀಕ್ಷೆ
ಜಾತಿ ಸಮೀಕ್ಷೆ
Jagadisha B
| Edited By: |

Updated on: Oct 24, 2025 | 3:23 PM

Share

ತುಮಕೂರು, ಅಕ್ಟೋಬರ್​ 24: ತುಮಕೂರು (Tumakuru) ಜಿಲ್ಲೆಯಲ್ಲಿ ಸುಮಾರು ‌ಶೇ96 ರಷ್ಟು ಜಾತಿ ಗಣತಿ (Caste Census) ಮುಗಿದಿದೆ. ಶಿಕ್ಷಕರು ಸಮೀಕ್ಷೆ ಎಂಬ ಸಂಕಷ್ಟದಿಂದ ಬಚಾವ್ ಆಗಿದ್ದಾರೆ. ಆದರೆ ಇದೀಗ ಬಾಕಿ ಉಳಿದ ಮನೆಗಳ ಸಮೀಕ್ಷೆ ಗ್ರಾಮ ಪಂಚಾಯತಿ ಹೆಗಲಿಗೆ ಹಾಕಲಾಗಿದೆ. ವಾಟರ್ ಮ್ಯಾನ್​​ಗಳಿಗೂ ಸಹ ಸರ್ವೆ ಮಾಡಲು ತರಬೇತಿ ನೀಡಲಾಗಿದ್ದು, ಇದು ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗಿದೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು ಶೇ.96ರಷ್ಟು ಜಾತಿ ಗಣತಿ ಸರ್ವೆ ಮುಗಿದಿದೆ. ಇನ್ನು ಸುಮಾರು ಶೇ4 ರಷ್ಟು ಸರ್ವೆ ಕಾರ್ಯ ಬಾಕಿ ಉಳಿದಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಉಳಿದ ಮನೆಗಳನ್ನು ಪತ್ತೆ ಹಚ್ಚುವ ಕೆಲಸ ಗ್ರಾಮ ಪಂಚಾಯತಿಗೆ ವಹಿಸಲಾಗಿದೆ.

ಇದನ್ನೂ ಓದಿ: ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ: ಸಮೀಕ್ಷೆ ಕಾರ್ಯದಿಂದ ಶಿಕ್ಷಕರ ಕೈಬಿಟ್ಟ ಸರ್ಕಾರ

ಕೇವಲ ಮನೆಗಳನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ಅಲ್ಲದೇ, ಆ ಮನೆಗಳ ಸಮೀಕ್ಷೆಯನ್ನು ಪಂಚಾಯತಿಯವರೇ ಮಾಡಬೇಕಿದೆ. ಪಿಡಿಒ, ಸೆಕ್ರೆಟರಿ, ಕಂಪ್ಯೂಟರ್ ಆಪರೇಟರ್, ವ್ಯಾಟರ್ ಮ್ಯಾನ್ ಗಳಿಗೂ ಸರ್ವೆ ಮಾಡುವ‌ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಒಗಳು ವಾಟರ್ ಮ್ಯಾನ್‌ ಸೇರಿದಂತೆ ಇತರ ಸಿಬ್ಬಂದಿಗಳ ಮೊಬೈಲ್​ನಲ್ಲಿ ಆ್ಯಪ್ ಹಾಕಿ ಕೊಟ್ಟು ತರಬೇತಿ ನೀಡಲಾಗಿದೆ.

ವಾಟರ್ ಮ್ಯಾನ್​​ಗಳ ಹೆಗಲಿಗೆ ಜಾತಿ ಸಮಿಕ್ಷೆ

ಸರ್ವೆ ಕೆಲಸದ ಹಲವು ಎಡರು ತೊಡರುಗಳಿಂದ ಶಿಕ್ಷಕ ವರ್ಗ ಈಗ ಬಚಾವ್ ಆಗಿದ್ದಾರೆ. ವಿದ್ಯಾವಂತರಾದ ಶಿಕ್ಷಕರಿಗೂ ಈ ಸರ್ವೆ ಆ್ಯಪ್ ಸರಿಯಾಗಿ ಅರ್ಥ ಆಗಿಲ್ಲ. ಹಾಗಾಗಿ ಹಲವು ಸಮಸ್ಯೆಗಳು ಎದುರಿಸಬೇಕಾಯಿತು. ಈ ನಡುವೆ ಕನಿಷ್ಠ ಎಸ್​​ಎಸ್​ಎಲ್​​ಸಿ ಅನ್ನು ಪಾಸ್ ಆಗದ ವಾಟರ್ ಮ್ಯಾನ್​​ಗಳಿಗೆ ಸಮೀಕ್ಷೆ ಮಾಡಲು ಹೇಳಿದೆರೆ ಹೇಗೆ ಎಂಬ ಜಿಜ್ಞಾಸೆ ಹುಟ್ಟಿದೆ. ವಾಟರ್ ಮ್ಯಾನ್​ಗಳು ಮಾಡುವ ಸರ್ವೆ ಎಷ್ಟರ ಮಟ್ಟಿಗೆ‌ ವಿಶ್ವಾಸಾರ್ಹವಾಗಿರುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಜಾತಿ ಗಣತಿ ಡೆಡ್​ಲೈನ್ ಅ.7ಕ್ಕೆ ಅಂತ್ಯ: ಅವಧಿ ಮುಂದೂಡುತ್ತಾ ಸರ್ಕಾರ? ಎಲ್ಲೆಲ್ಲಿ ಎಷ್ಟಾಯ್ತು ಸಮೀಕ್ಷೆ? ಮಾಹಿತಿ ಇಲ್ಲಿದೆ

ಜಿಲ್ಲೆಯಲ್ಲಿ ಸುಮಾರು 332 ಗ್ರಾಮ ಪಂಚಾಯತಿಗಳಿವೆ. ಸಾವಿರಕ್ಕೂ ಹೆಚ್ಚು ವಾಟರ್ ಮ್ಯಾನ್​​ಗಳಿದ್ದಾರೆ. ಅವರೆಲ್ಲರಿಗೂ ಸರ್ವೆ ಜವಾಬ್ದಾರಿ ಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್