Tumakuru News: ಸರ್ಕಾರಿ ವೈದ್ಯ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ: ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ತರಾಟೆ
ಡ್ಯೂಟಿ ಟೈಂನಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಕೂಡಲೇ ಅಮಾನತು ಮಾಡಲು ಆಗ್ರಹಿಸಲಾಗಿದೆ.
ತುಮಕೂರು: ಡ್ಯೂಟಿ ಟೈಂನಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ (doctor) ನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಕೂಡಲೇ ಅಮಾನತು ಮಾಡಲು ಆಗ್ರಹಿಸಲಾಗಿದೆ. ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಘಟನೆ ಕಂಡುಬಂದಿದ್ದು, ಡಾ.ಮುರಳಿ ತುರುವೇಕೆರೆ ತಾಲೂಕು ಸರ್ಕಾರಿ ಆಸ್ಪತ್ರೆ ಸ್ತ್ರೀರೋಗ, ಪ್ರಸೂತಿ ತಜ್ಞರಾಗಿದ್ದಾರೆ. ಡ್ಯೂಟಿ ಟೈಂನಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವೈದ್ಯನ ಖಾಸಗಿ ಆಸ್ಪತ್ರೆಗೆ ಬಂದ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಮ್ಮಿಂದ ಎಷ್ಟು ಜನ ಸಾಯಬೇಕು: ಸಾರ್ವಜನಿಕರ ಪ್ರಶ್ನೆ
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 30 ಹೆರಿಗೆ ಮಾತ್ರ ಮಾಡಿಸಿದ್ದೀರಿ. ಆದರೆ ನಿಮ್ಮ ಖಾಸಗಿ ಕ್ಲಿನಿಕ್‌ನಲ್ಲಿ 90 ಹೆರಿಗೆ ಮಾಡುತ್ತಿದ್ದೀರಿ. ನಿಮಗೆ ಏಕೆ ಬೇಕು ಇಂಥ ಸಂಪಾದನೆ, ನಿಮ್ಮಿಂದ ಎಷ್ಟು ಜನ ಸಾಯಬೇಕು. ನಿಮಗೆ ಮನುಷ್ಯತ್ವ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Chikmagluru: ಚಲಿಸುವ ಬಸ್ನಲ್ಲಿ ಹೆರಿಗೆ ನೋವು; ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ಮಹಿಳಾ ಕಂಡಕ್ಟರ್.. ಪ್ರಶಂಸೆಯ ಮಹಾಪೂರ!
ಅಮಾನತು ಮಾಡುವಂತೆ ಒತ್ತಾಯ
ಸರ್ಕಾರಿ ವೈದ್ಯ ಡಾ.ಮುರಳಿಯನ್ನು ಕೂಡಲೇ ಅಮಾನತು ಮಾಡುವಂತೆ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯಿಂದ ಒತ್ತಾಯಿಸಲಾಗಿದೆ. ಬಾಣಂತಿ, ಹಾಗೂ ಮಗು ಸಾವಿಗೆ ಕಾರಣವಾಗಿದ್ದ ಆರೋಪದಡಿ ಸರ್ಕಾರಿ ವೈದ್ಯ ಮುರಳಿ ವಿರುದ್ಧ ಆರೋಗ್ಯ ಇಲಾಖೆಯ ಆಯುಕ್ತರಿಗೆ ತುಮಕೂರು ಡಿಹೆಚ್‌ಒರಿಂದ ದೂರು ನೀಡಲಾಗಿದೆ. ಸದ್ಯ 2 ಪ್ರಕೆಣಗಳು ತನಿಖಾ ಹಂತದಲ್ಲಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Sat, 10 June 23