AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಬಾವಿಗೆ ಬಿದ್ದಿದ್ದ ತಂಗಿಯ ಜೀವ ಉಳಿಸಿದ 8 ವರ್ಷದ ಶಾಲೂಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ತುಮಕೂರಿನ 8 ವರ್ಷದ ಶಾಲೂ ಎಂಬ ಬಾಲಕಿ ಎಲ್ಲರೂ ಕಣ್ಣು ಉಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಬಾವಿಗೆ ಬಿದ್ದಿದ್ದ ತಂಗಿಯನ್ನ ಕಾಪಾಡಿ ಶೌರ್ಯ ಪ್ರದರ್ಶಿಸಿದ ಕಾರಣ ಶಾಲೂಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ.

ತುಮಕೂರು: ಬಾವಿಗೆ ಬಿದ್ದಿದ್ದ ತಂಗಿಯ ಜೀವ ಉಳಿಸಿದ 8 ವರ್ಷದ ಶಾಲೂಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ
ಶಾಲೂ
ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು|

Updated on: Nov 22, 2023 | 12:45 PM

Share

ತುಮಕೂರು, ನ.22: ಆಕೆ ಇನ್ನೂ 8 ವರ್ಷದ ಬಾಲಕಿ, ಏನ್ನೂ ತಿಳಿಯದ ವಯಸ್ಸಿನಲ್ಲಿ ಆಕೆ ಮಾಡಿದ್ದು ಮಾತ್ರ ದೊಡ್ಡ ಸಾಧನೆ. ಜೀವನ್ಮರಣದ ಜೋತೆ ಹೋರಾಟ ಮಾಡ್ತಿದ್ದ ತನ್ನ ತಂಗಿಯನ್ನ ಬಾವಿಗೆ (well) ಹಾರಿ ರಕ್ಷಿಸಿಸಿದ್ದಾಳೆ. ತುಮಕೂರಿನ (Tumkur) 8 ವರ್ಷದ ಶಾಲೂ ಎಂಬ ಬಾಲಕಿ (Girl) ಎಲ್ಲರೂ ಕಣ್ಣು ಉಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಬಾವಿಗೆ ಬಿದ್ದಿದ್ದ ತಂಗಿಯನ್ನ ಕಾಪಾಡಿ ಶೌರ್ಯ ಪ್ರದರ್ಶಿಸಿದ ಕಾರಣ ಶಾಲೂಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು ಶಾಲುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಲಾಗಿದೆ‌. ನಾಳೆ ಬೆಂಗಳೂರು ಜವಾಹರ ಬಾಲ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ‌.

ತುಮಕೂರು ತಾಲೂಕಿನ ಕುಚ್ಚಂಗಿಪಾಳ್ಯ ಗ್ರಾಮದಲ್ಲಿ ಧನಂಜಯ ಎಂಬುವರ ತೋಟದ ಮನೆಯಲ್ಲಿ ಜೀತೆಂದ್ರ, ರಾಜಕುಮಾರಿ ದಂಪತಿ ಕೆಲಸ‌ ಮಾಡಿಕೊಂಡಿದ್ದಾರೆ. ಜಿತೇಂದ್ರ ಹಾಗೂ ರಾಜಕುಮಾರಿ ದಂಪತಿಗೆ ನಾಲ್ವರು ಮಕ್ಕಳಿದ್ದು, ಇದರಲ್ಲಿ ಮೊದಲನೇಯವಳೆ ಶಾಲು, ಮೊನ್ನೆ ರಾಶಿ ಜೊತೆಗೆ ಆಟವಾಡುವಾಗ 7 ವರ್ಷದ ಹಿಮಾಂಶು ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದಿದ್ದಾಳೆ. ಇದನ್ನ ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಬಾವಿಗೆ ಹಾರಿ ತನ್ನ ಸಹೋದರಿ ಹಿಮಾಂಶುನ್ನ ರಕ್ಷಿಸಿದ್ದಾಳೆ. ಇಬ್ಬರು ಬಾವಿಯಲ್ಲಿದ್ದನ್ನ ಕಂಡ ಸ್ಥಳೀಯರು, ಪೋಷಕರು ಮಕ್ಕಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Tumakuru News: ಜೀವದ ಹಂಗು ತೊರೆದು ಸಹೋದರನ ಜೀವ ರಕ್ಷಿಸಿದ 8 ವರ್ಷ ಸಹೋದರಿ

ಇನ್ನೂ ಉತ್ತರ ಪ್ರದೇಶದ ಈ ದಂಪತಿಗೆ 8 ವರ್ಷದ ಶಾಲೂ, 7 ವರ್ಷದ ಹಿಮಾಂಶು, 3 ವರ್ಷದ ರಾಶಿ ಹಾಗೂ 2 ವರ್ಷದ ಕಪೀಲ್ ಎಂಬ ಮಕ್ಕಳಿದ್ದಾರೆ. ಇವರು ಕುಚ್ಚಂಗಿ ಪಾಳ್ಯದಲ್ಲಿ ಶಾಲೆಗೆ ಹೋಗ್ತಿದ್ದು, ಮಾಲೀಕ ಧನಂಜಯ ಎಂಬುವರು ಕಳೆದ ಮೂರ್ನಾಲ್ಕು ದಿನಗಳಲ್ಲೇ ತನ್ನ ಮಗಳ ಜೊತೆ ಶಾಲೂಗೂ ಈಜು ಕಲಿಸಿದ್ದರಂತೆ. ಆ ವಿದ್ಯೆ ತನ್ನ ಸಹೋದರಿ ಬದುಕಿಸಲು ಸಹಾಯವಾಗಿದೆ. ಈ ಬಾಲಕಿಯ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಈ ಕೆಲಸ ಮಾಡಿದ್ದು ನಿಜಕ್ಕೂ ಗ್ರೇಟ್ ಎಂದು ಜನ ಶ್ಲಾಘಿಸಿದ್ದಾರೆ.

ಒಟ್ಟಾರೆ ಈ ಬಾಲಕಿಯ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು, ಯಾಕೆಂದರೆ ಇನ್ನೂ ಏನು ಅರಿಯದ ವಯಸ್ಸಿನಲ್ಲಿ ಬಾಲಕಿ ನೀರಿಗೆ ಹಾರಿ ಸಹೋದರಿಯನ್ನ ರಕ್ಷಣೆ ಮಾಡಿದ್ದು ಸಾಧನೆಯೇ ಸರಿ. ಅತ್ತ ತೋಟದ ಮಾಲೀಕ ತನ್ನ ಮಗಳ ಜೊತೆ ಈಜು ಕಲಿಸಿದ್ದು ಕೂಡ ದೊಡ್ಡತನ ಎನ್ನಬಹುದು. ಸದ್ಯ ಈಕೆ ತಂಗಿಯನ್ನ ಕಾಪಾಡಿದ್ದ ಕಾರಣ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುತ್ತಿದ್ದು, ಶಾಲುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಲಾಗಿದೆ‌. ನಾಳೆ ಬೆಂಗಳೂರು ಜವಾಹರ ಬಾಲ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ‌.

ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ