Tumakuru News: ಜೀವದ ಹಂಗು ತೊರೆದು ಸಹೋದರನ ಜೀವ ರಕ್ಷಿಸಿದ 8 ವರ್ಷ ಸಹೋದರಿ
ಜೀವದ ಹಂಗು ತೊರೆದು ಸಹೋದರಿ ಸಹೋದರನ ಜೀವ ರಕ್ಷಿಸಿರುವ ಘಟನೆ ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ನಡೆದಿದೆ.
ತುಮಕೂರು: ಜೀವದ ಹಂಗು ತೊರೆದು ಸಹೋದರಿ (Sister) ಸಹೋದರನ (Brother) ಜೀವ ರಕ್ಷಿಸಿರುವ ಘಟನೆ ತುಮಕೂರು (Tumakuru) ತಾಲೂಕಿನ ಕುಚ್ಚಂಗಿಯಲ್ಲಿ ನಡೆದಿದೆ. ಬಾವಿಗೆ (Well) ಬಿದ್ದಿದ್ದ ತಮ್ಮ ಹಿಮಾಂಶುನನ್ನು ಸಹೋದರಿ ಶಾಲೂ ರಕ್ಷಿಸಿದ್ದಾಳೆ. ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕುಚ್ಚಂಗಿಯಲ್ಲಿನ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದಾರೆ. ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ಶಾಲೂ(8), ಹಿಮಾಂಶು(7), ರಾಶಿ(3), ಹಾಗೂ ಕಪಿಲ್(2).
ನಿನ್ನೆ (ಜು.13) ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾವಿಗೆ ಬಿದ್ದ ಚೆಂಡು ತೆಗೆಯಲು ಹೋಗಿ ಹಿಮಾಂಶು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಇದನ್ನು ಕಂಡು ಶಾಲೂ ಲೈಫ್ ಜಾಕೀಟ್ ಧರಿಸಿ ಬಾವಿಗೆ ಜಿಗಿದಿದ್ದಾಳೆ. ಇದೇ ವೇಳೆ ಶಾಲೂ ಸಹಾಯಕ್ಕೆ ಅಕ್ಕಪಕ್ಕದ ಜನರು ಆಗಮಿಸಿದ್ದಾರೆ. ನಂತರ ಸ್ಥಳೀಯರು ಬಾವಿಯಿಂದ ಇಬ್ಬರನ್ನು ಮೇಲಕ್ಕೆ ಎತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿ
ಶಾಲೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮನೆ ಮಾಲೀಕ ಧನಂಜಯ್ಯ ಬಳಿ ಈಜು ಕಲಿಯುತ್ತಿದ್ದಳು. ಈಜು ಕಲಿಯುವ ವೇಳೆ ಲೈಫ್ ಜಾಕೀಟ್ ಧರಿಸುತ್ತಿದ್ದಳು. ಇದೀಗ 8 ವರ್ಷದ ಬಾಲಕಿ ಶಾಲೂ ಸಾಹಸವನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ