ತುಮಕೂರು: ಚೌಡೇಶ್ವರಿ ಜಾತ್ರೆಯಲ್ಲಿ 2 ಎತ್ತುಗಳನ್ನು ಬಲಿ ಕೊಟ್ಟ ಕಿಡಿಗೇಡಿಗಳು; ಗ್ರಾಮಸ್ಥರ ಆಕ್ರೋಶ
Tumakuru: ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಚೌಡೇಶ್ವರಿ ಜಾತ್ರೆಯಲ್ಲಿ 2 ಎತ್ತುಗಳನ್ನು ಬಲಿ ಕೊಟ್ಟ ಘಟನೆ ವರದಿಯಾಗಿದೆ. ದೇವಸ್ಥಾನದ ಉಸ್ತುವಾರಿಗಳಾದ ಬಸವಲಿಂಗಪ್ಪ, ಚಂದ್ರಪ್ಪ, ಹನುಮಂತರಾಯಪ್ಪರಿಂದ ಕೃತ್ಯ ಎಸಗಲಾಗಿದೆ.
ತುಮಕೂರು: ಪಾವಗಡ (Pavagada) ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಚೌಡೇಶ್ವರಿ ಜಾತ್ರೆಯಲ್ಲಿ 2 ಎತ್ತುಗಳನ್ನು ಬಲಿ ಕೊಟ್ಟ ಘಟನೆ ವರದಿಯಾಗಿದೆ. ದೇವಸ್ಥಾನದ ಉಸ್ತುವಾರಿಗಳಾದ ಬಸವಲಿಂಗಪ್ಪ, ಚಂದ್ರಪ್ಪ, ಹನುಮಂತರಾಯಪ್ಪರಿಂದ ಕೃತ್ಯ ಎಸಗಲಾಗಿದೆ. ಗೋಹತ್ಯೆ ತಡೆಯುವಂತೆ ಮೇ 9ರಂದು ಡಿಸಿ, ಎಸ್ಪಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಗ್ರಾಮಸ್ಥರ ಕಣ್ತಪ್ಪಿಸಿ ಆರೋಪಿಗಳು ಗೋಹತ್ಯೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಳ್ಳಾರಿಯಲ್ಲಿ ಮುಂದುವರೆದಿದೆ ಅಕ್ರಮ ಗೋವು ಸಾಗಾಟ:
ಬಳ್ಳಾರಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಕೂಡ ಬಳ್ಳಾರಿಯಲ್ಲಿ ಮಾತ್ರ ಇನ್ನೂ ಅಕ್ರಮ ಗೋವು ಸಾಗಾಟ ನಿಂತಿಲ್ಲ. ಬೀದಿಯಲ್ಲಿರುವ ಗೋವುಗಳನ್ನು ರಾತ್ರೋ ರಾತ್ರಿ ಖದೀಮರು ಹೊತ್ತೊಯ್ಯುತ್ತಿದ್ದಾರೆ. ಬಳ್ಳಾರಿಯಿಂದ ಆಂಧ್ರ, ತೆಲಂಗಾಣಕ್ಕೆ ಕದ್ದ ಗೋವುಗಳನ್ನು ಮಾರಾಟ ಮಾಡಲಾಗುತ್ತಿದೆ. ರಾತ್ರಿ ಊರಿನ ಜನರು ಮಲಗಿದ ಮೇಲೆ ದಾಳಿ ಮಾಡಿ, ಗೋವುಗಳನ್ನು ಹೊತ್ತೊಯ್ಯಲಾಗುತ್ತಿದೆ. ಮಿನಿ ಲಾರಿಯಲ್ಲಿ ರಾಶಿ ರಾಶಿ ಗೋವುಗಳನ್ನ ತುಂಬಿ ಚಿತ್ರ ಹಿಂಸೆ ನೀಡಲಾಗುತ್ತಿದ್ದು, ಗೋವುಗಳನ್ನ ಅಕ್ರಮವಾಗಿ ಕದ್ದು ಸಾಗಾಟ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬಲಿಯಿಂದ ತಪ್ಪಿಸಿಕೊಳ್ಳಲು ಮರವೇರಿದ ಹುಂಜ:
ಮಂಡ್ಯ: ನಗರದ ಬಿಸಿಲು ಮಾರಮ್ಮ ದೇಗುಲದ ಬಳಿ ನಡೆಯುತ್ತಿದ್ದ ಮಾರಮ್ಮನ ಉತ್ಸವದ ವೇಳೆ ದೇವಿಗೆ ಬಲಿ ನೀಡಲು ಭಕ್ತರೊಬ್ಬರು ತಂದಿದ್ದ ಹುಂಜ ತಪ್ಪಿಸಿಕೊಂಡು ಮರ ಏರಿ ಜೀವ ಉಳಿಸಿಕೊಳ್ಳಲು ಯತ್ನಿಸಿತು. ಕೋಳಿಯನ್ನು ಹಿಡಿಯಲು ಭಕ್ತರು ಮರ ಹತ್ತಿದರಾದರೂ ಅದು ರೆಂಬೆಯಿಂದ ರೆಂಬೆಗೆ ಹಾರಿ ತಪ್ಪಿಸಿಕೊಳ್ಳುತ್ತಿತ್ತು. ಮಳೆ ಬಂದಾಗ ಜನರು ಅನಿವಾರ್ಯವಾಗಿ ಮರದಿಂದ ಕೆಳಗೆ ಇಳಿಯಬೇಕಾಯಿತು. ಕೊನೆಗೂ ಹಾಗೂ ಹೀಗೂ ಕೋಳಿಯನ್ನು ಹಿಡಿದ ಭಕ್ತರು ದೇವಿ ಬಲಿಕೊಟ್ಟರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Wed, 11 May 22