AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ವಾರ್ಡನ್ ಪತಿ ಕಿರುಕುಳ; ಹುಡುಗಿಯರ ಮೈ ಕೈ ಮುಟ್ಟಿ ಅಸಭ್ಯ ವರ್ತನೆ

ಅಷ್ಟೆ ಅಲ್ಲದೆ ಪರಿಶೀಲನೆಗೆಂದು ಹಾಸ್ಟೆಲ್​ಗೆ ಬಂದ ಅಧಿಕಾರಿಗಳಿಗೂ ರಂಗನಾಥ್, ನಮ್ಮ ಸಮಾಜದ ಮೂಲಕ ನಿನಗೆ ಉತ್ತರ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ತುಮಕೂರು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ವಾರ್ಡನ್ ಪತಿ ಕಿರುಕುಳ; ಹುಡುಗಿಯರ ಮೈ ಕೈ ಮುಟ್ಟಿ ಅಸಭ್ಯ ವರ್ತನೆ
ವಾರ್ಡನ್ ಪತಿ ರಂಗನಾಥ್
TV9 Web
| Updated By: ಆಯೇಷಾ ಬಾನು|

Updated on:Jul 13, 2022 | 4:02 PM

Share

ತುಮಕೂರು: ಹಾಸ್ಟೆಲ್ (Hostel) ವಿದ್ಯಾರ್ಥಿನಿಯರ ಮೈ ಕೈ ಮುಟ್ಟಿ ವಾರ್ಡನ್ (Warden) ಪತಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಧುಗಿರಿ ಸರ್ಕಾರಿ ಬಾಲಕಿಯರ ಹಾಸ್ಟೆಲ್​ಗೆ ನಿವೇದಿತಾ ವಾರ್ಡನ್ ಆಗಿದ್ದಾರೆ. ವಾರ್ಡನ್ ಪತಿ ರಂಗನಾಥ್ ವಿದ್ಯಾರ್ಥಿನಿಯರ ಕೊಠಡಿಗೆ ಹೋಗಿ ಕಿರುಕುಳ ನೀಡುತ್ತಾನಂತೆ. ಪತಿಯ ಈ ವರ್ತನೆಗೆ ವಾರ್ಡನ್ ನಿವೇದಿತಾ ಕೂಡಾ ಬೆಂಬಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೆ ಅಲ್ಲದೆ ಪರಿಶೀಲನೆಗೆಂದು ಹಾಸ್ಟೆಲ್​ಗೆ ಬಂದ ಅಧಿಕಾರಿಗೂ ರಂಗನಾಥ್, ನಮ್ಮ ಸಮಾಜದ ಮೂಲಕ ನಿನಗೆ ಉತ್ತರ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಕ್ರಮಕ್ಕೆ ಮುಂದಾದ ಅಧಿಕಾರಿ ಹರೀಶ್​ಗೆ ರಂಗನಾಥ್​ ನೇರವಾಗಿ ಹಾಸ್ಟೆಲ್​​ಗೆ ಬಂದು ಎಚ್ಚರಿಕೆ ನೀಡಿದ್ದಾನೆ. ರಂಗನಾಥ್​ನ ಆಟಾಟೋಪಗಳ ವಿಡಿಯೋ ಇದ್ದರೂ ಸಮಾಜಕಲ್ಯಾಣಾಧಿಕಾರಿ ಪ್ರೇಮ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನೆಪಮಾತ್ರಕ್ಕೆ ಭೇಟಿ ನೀಡಿ ಪ್ರೇಮಾ ನೋಟಿಸ್​ ನೀಡಿದ್ದಾರೆ. ಮೂರು ತಿಂಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯರು ತಮಗಾಗುತ್ತಿರುವ ಕಷ್ಟಗಳನ್ನ ಹೇಳೋಕು ಭಯ ಪಡುತ್ತಿದ್ದಾರೆ. ಹಾಸ್ಟೆಲ್​ನಲ್ಲಿಸರಿಯಾದ ಊಟ,ತಿಂಡಿ ಇಲ್ಲ. ಕೇವಲ ಅರ್ಧ ಲೀಟರ್ ಹಾಲಿನಲ್ಲಿ 40 ವಿದ್ಯಾರ್ಥಿನಿಯರಿಗೆ ಟೀ ನೀಡುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆಗೆ ಹೋದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಶಾಕ್ ಆಗಿದೆ.

ಇದನ್ನೂ ಓದಿ
Image
Sexual Abuse: ಲೈಂಗಿಕ ದೌರ್ಜನ್ಯಕ್ಕೆ ಹುಡುಗಿಯರ ಫ್ಯಾಷನ್ ಕಾರಣ; ಇದು ಬೆಂಗಳೂರಿನ ಬಹುತೇಕ ಪೋಷಕರ ಅಭಿಪ್ರಾಯ
Image
ಸುಳ್ಳು ಹೇಳಿ ಮುಸ್ಲಿಮರ ಬಗ್ಗೆ ದ್ವೇಷ, ಭಯ ಹುಟ್ಟಿಸಬೇಡಿ; ಬಿಜೆಪಿ ಸರ್ಕಾರದ ವಿರುದ್ಧ ಓವೈಸಿ ಆಕ್ರೋಶ
Image
‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?
Image
ಸಿದ್ದರಾಮೋತ್ಸವಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಟಕ್ಕರ್: ಶಿವಕುಮಾರೋತ್ಸವ ಮಾಡುವಂತೆ ಸಿದ್ದರಾಮಯ್ಯಗೆ ಪತ್ರ

ಇನ್ನು ಈ ಘಟನೆ ಬಗ್ಗೆ ತುಮಕೂರಿನಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮಾ ಮಾತನಾಡಿದ್ದು, ನಿನ್ನೆ ಹಾಸ್ಟೆಲ್​ಗೆ ಖುದ್ದು ಭೇಟಿಯಾಗಿ ಪರಿಶೀಲನೆ ಮಾಡಿದ್ದೇನೆ. ಯಾವುದೇ ವ್ಯಕ್ತಿ ಹಾಸ್ಟೆಲ್​ ಒಳಗೆ ಬರದಂತೆ ಸೂಚನೆ ನೀಡಿರುವೆ. ನೋಟಿಸ್​ ನೀಡಿ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಸಿಇಒಗೆ ವರದಿ ನೀಡಲಾಗಿದೆ. ಹಾಸ್ಟೆಲ್​ಗೆ ಮಹಿಳಾ ವಾರ್ಡನ್​ ಪತಿ ಬರುವ ಆರೋಪ ಇದೆ. ಆದರೆ ವಿದ್ಯಾರ್ಥಿನಿಯರಿಂದ ಯಾವುದೇ ದೂರು ಬಂದಿಲ್ಲ. ಐದಾರು ವರ್ಷಗಳಿಂದ ನಿವೇದಿತಾ ಅಲ್ಲಿ ವಾರ್ಡನ್ ಆಗಿದ್ದಾರೆ. ಆರೋಪದ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: Rhea Chakraborty: ಸುಶಾಂತ್​ ಸಿಂಗ್​ ರಜಪೂತ್​ಗೆ ಡ್ರಗ್ಸ್​ ನೀಡಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಕಳ್ಳತನ ಮಾಡ್ತಿದ್ದ ಗ್ಯಾಂಗ್ ಸೆರೆ: ಆಟಿಕೆ ವಸ್ತು ಮಾರಾಟ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​ನ ತುಮಕೂರಿನ ಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ಮೂಲದ 8 ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತರಿಂದ 48 ಗ್ರಾಂ ಚಿನ್ನಾಭರಣ, 3.5 ಕೆಜಿ ಬೆಳ್ಳಿ ವಸ್ತು ಜಪ್ತಿ ಮಾಡಲಾಗಿದೆ. ಕಾಲು(19), ಶಂಕರ್(20), ಮುಖೇಶ್ (18), ನಂದನ್ ಲಾಲ್(19), ಜಗದೀಶ್(40), ರಾಮದಾಸ್(23), ಸೀತಾ(40), ಕಾಂತಾಬಾಯಿ(20) ಬಂಧಿತರು. ಆರೋಪಿಗಳು ಹಗಲು ಹೊತ್ತಲ್ಲಿ ಮನೆಗಳ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಕಳವು ಮಾಡುತ್ತಿದ್ದರು.

Published On - 11:57 am, Wed, 13 July 22

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?