AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಅರೆಸ್ಟ್, ಸಹೋದರ, ಪ್ರಿಯತಮನಿಗಾಗಿ ಹುಡುಕಾಟ

ಕುಟುಂಬದಲ್ಲೇ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತಾನು ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊಲೆ ಮಾಡಿಸಿ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದು ಕೊಲೆ ಎಂಬುವುದು ಬಯಲಾಗಿದೆ. ಸದ್ಯ ಹರ್ಷಿತಾಳನ್ನು ಬಂಧಿಸಲಾಗಿದ್ದು ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಅರೆಸ್ಟ್, ಸಹೋದರ, ಪ್ರಿಯತಮನಿಗಾಗಿ ಹುಡುಕಾಟ
ಸಾಂದರ್ಭಿಕ ಚಿತ್ರ
ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು|

Updated on: Jul 30, 2024 | 9:49 AM

Share

ತುಮಕೂರು, ಜುಲೈ.30: ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪತ್ನಿ ಕೊಲೆ (Murder) ಮಾಡಿಸಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ನಡೆದಿದೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಎದೆಗೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಮಾಡಿಸಿ ಬಳಿಕ ಅಪಘಾತವೆಂದು ನಾಟಕವಾಡಿದ್ದಾಳೆ. ಪ್ರಕಾಶ್ (30) ಮೃತ ದುರ್ದೈವಿ. ಹರ್ಷಿತಾ ಕೊಲೆ ಮಾಡಿಸಿದ ಮಹಿಳೆ. ಸದ್ಯ ಘಟನೆ ಸಂಬಂಧ ಹರ್ಷಿತಾಳನ್ನು ಬಂಧಿಸಲಾಗಿದ್ದು ಆಕೆಯ ಸಹೋದರ, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ನಿವಾಸಿಯಾಗಿರುವ ಹರ್ಷಿತಾ ಹಾಗೂ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿರುವ ಪ್ರಕಾಶ್ ಪರಸ್ಪರ ಪ್ರೀತಿಸಿ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ. ಪ್ರಕಾಶ್ ಪೋಸ್ಟ್ ಆಫೀಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ. ಮದುವೆಯಾಗಿ ಮಗು ಇದ್ದರೂ ಹರ್ಷಿತಾಗೆ ಅಕ್ರಮ ಸಂಬಂಧವಿತ್ತು. ತನ್ನ ಕುಟುಂಬದ ಓರ್ವನ ಜೊತೆ ಸಂಬಂಧ ಹೊಂದಿದ್ದಳು. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡ ಆಗಬಹುದು ಎಂಬ ಕಾರಣಕ್ಕೆ ಹರ್ಷಿತಾ ತನ್ನ ಸಹೋದರ ಹಾಗೂ ಪ್ರಿಯತಮನ ಜೊತೆ ಸೇರಿಕೊಂಡು ಪತಿಯ ಕೊಲೆ ಮಾಡಿಸಿದ್ದಾಳೆ. ಬಳಿಕ ಆಕ್ಸಿಡೆಂಟ್ ಎಂದು ಬಿಂಬಿಸಲು ಮುಂದಾಗಿದ್ದಾಳೆ.

ಪ್ರಕಾಶ್ ಎದೆ ಭಾಗಕ್ಕೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಇದರಿಂದಾಗಿ ಇದೊಂದು ಕೊಲೆ ಎಂದು ಸುಲಭವಾಗಿ ತಿಳಿದು ಬಂದಿದ್ದು ಸದ್ಯ ಕೊರಟಗೆರೆ ಪೊಲೀಸರು ಹರ್ಷಿತಾಳನ್ನು ಬಂಧಿಸಿದ್ದಾರೆ. ಹರ್ಷಿತಾ ಸಹೋದರ ಮತ್ತು ಪ್ರಿಯತಮನಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್, ಬಿಯರ್​ ಬೆಲೆ ಮತ್ತೊಮ್ಮೆ ಮತ್ತೆ ಏರಿಕೆ

ಕ್ಷುಲ್ಲಕ ಕಾರಣಕ್ಕೆ ಬಾರ್‌ನಲ್ಲಿ ಯುವಕರ ಅಟ್ಟಹಾಸ

ಕ್ಷುಲ್ಲಕ ಕಾರಣಕ್ಕೆ ಬಾರ್‌ನಲ್ಲಿ ಯುವಕರಿಬ್ಬರು ಡೆಡ್ಲಿ ಅಟ್ಯಾಕ್‌ ಮಾಡಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್‌ಗೇಟ್‌ ಬಳಿಯ SLN ಬಾರ್‌ನಲ್ಲಿ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಪುಂಡರು ಮಾರಕಾಸ್ತ್ರಗಳಿಂದ ಹಲ್ಲೆ‌ ಮಾಡಿದ್ದಾರೆ. ಬಾರ್‌ನಲ್ಲಿ ಜುಲೈ 26ರ ರಾತ್ರಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕರ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹಣ್ಣಿನ ಮಾರುಕಟ್ಟೆಯಲ್ಲಿ ಯುವಕ ಮಧು ಶವ ಪತ್ತೆ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ಯುವಕನ ಶವಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಶವವನ್ನು ಮಧು ಎಂದು ಗುರುತಿಸಲಾಗಿದೆ. ಕಳೆದ ವಾರ ಮಾರ್ಕೆಟ್​ನಲ್ಲಿ ಯುವಕನನ್ನು ಗ್ಯಾಂಗ್​​ವೊಂದು ಅಟ್ಟಾಡಿಸಿತ್ತು. ಮೊನ್ನೆ ಹಣ್ಣಿನ ಮಾರುಕಟ್ಟೆಗೆ ಹೋಗಿದ್ದ ಮಧು, ನಿನ್ನೆ ಶವವಾಗಿ ಪತ್ತೆಯಾಗಿದ್ದಾನೆ. ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ