AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪರನ್ನ ಕಣ್ಣೀರು ಹಾಕ್ಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು; ಬಿಜೆಪಿಗೆ ರಾಜಣ್ಣ ಟಾಂಗ್

ಎಲ್ಲಾ ವೈಮನಸ್ಸನ್ನ ಮರೆತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಪ್ರತಿಷ್ಟಾಪನೆ ಮಾಡಬೇಕಾಗಿದ್ದು, ನಾವೆಲ್ಲ ಒಂದಾಗಿ ಇಡೀ ಜಿಲ್ಲೆಯಲ್ಲಿನ 11 ಕ್ಷೇತ್ರವನ್ನ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ರಾಜಣ್ಣ ಹೇಳಿದರು.

ಯಡಿಯೂರಪ್ಪರನ್ನ ಕಣ್ಣೀರು ಹಾಕ್ಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು; ಬಿಜೆಪಿಗೆ ರಾಜಣ್ಣ ಟಾಂಗ್
ಮಾಜಿ ಶಾಸಕ ಕೆ.ಎನ್ ರಾಜಣ್ಣ
TV9 Web
| Edited By: |

Updated on: Jan 24, 2023 | 3:37 PM

Share

ತುಮಕೂರು: ತಿಪಟೂರಿನಲ್ಲಿ ಬಹಳಷ್ಟು ವೀರಶೈವ ಲಿಂಗಾಯತ ಮತಗಳಿವೆ‌. ಷಡಕ್ಷರಿಗೆ ವೋಟ್ ಹಾಕಿದ್ರೆ ಒಬ್ಬ ಲಿಂಗಾಯತ ಎಂಎಲ್ಎ ಆಗ್ತಾನೆ. ಅದೇ ಬಿ.ಸಿ ನಾಗೇಶ್​ಗೆ ವೋಟ್ ಹಾಕಿದ್ರೆ ನಮ್ಮ ಸಮುದಾಯದವ್ರು ಮುಖ್ಯಮಂತ್ರಿ ಆಗುತ್ತಾರೆ ಅದಕ್ಕೂಸ್ಕರ ಈ ಹುಡುಗನನ್ನ ಗೆಲ್ಲಿಸಬೇಕು ಎಂದು ಹೇಳಿ ಹೋಗಿದ್ದರು. ಅದರಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರೂ ಆದರೆ ಅವರನ್ನ ಬಿಜೆಪಿ ಕಣ್ಣೀರು ಹಾಕ್ಸಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು, ಹೀಗಾಗಿ ಇನ್ನುಮುಂದೆ ಬಿಜೆಪಿಯವ್ರು ಆ ಸಮುದಾಯದ ಬಳಿ ಹೇಗೆ ಮತ ಕೇಳ್ತಾರೆ ಗೊತ್ತಿಲ್ಲ ಎಂದು ಮಾಜಿ ಶಾಸಕ ರಾಜಣ್ಣ ಪ್ರಜಾಧ್ವನಿ ಸಮಾವೇಶದಲ್ಲಿ ಬಿಜೆಪಿಗೆ ಟಾಂಗ್​ ನೀಡಿದರು.

5 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ್ರು. ಮಣ್ಣಿನ ಮಕ್ಕಳ ಹೆಸರು ಹೇಳೋಕೆ ಎಲ್ಲರೂ ಹೆದರಿಕೊಳ್ತಾರೆ. ನಮ್ಮ ಜಯಚಂದ್ರ ಹೆದರೋರಲ್ಲ, ಆದ್ರೂ ಅವರು ಅವರ ಹೆಸರು ಎತ್ತಿಲ್ಲ. ಹೆಸರು ಹೇಳದೇ ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ರಾಜಣ್ಣ ಮಾತಾಡಿದರು. ಇಡೀ ರಾಜ್ಯದಲ್ಲಿ ಅನ್ನಕ್ಕೋಸ್ಕರ ಭಿಕ್ಷೆ ಬೇಡೋದಾಗ್ಲಿ, ಹಸಿವಿನ ಬಗ್ಗೆ ಯೋಚನೆ ಮಾಡೋ ಪ್ರಮೇಯವಾಗಲಿ ಇಲ್ಲದೇ ಇರೋದಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ ಕೊಡುಗೆಯೇ ಕಾರಣ. ನಾವೆಲ್ಲ ಒಂದಾಗಿ ಇಡೀ ಜಿಲ್ಲೆಯಲ್ಲಿ 11 ಕ್ಷೇತ್ರವನ್ನ ಗೆಲ್ಲಿಸುವ ಕೆಲಸ ಮಾಡ್ಬೇಕಿದೆ.

ಇದನ್ನೂ ಓದಿ:ಉಡುಪಿ: ಪ್ರಜಾಧ್ವನಿ ಯಾತ್ರೆಯಲ್ಲಿ ತಾಳ ಹಾಕುತ್ತಿದ್ದ ಸಿದ್ದುಗೆ ಡಿಕೆಶಿ ಕೈ ಹಿಡಿಯಿರಿ ಎಂದ ಸುರ್ಜೇವಾಲ

ಎಲ್ಲಾ ವೈಮನಸ್ಸನ್ನ ಮರೆತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಪ್ರತಿಷ್ಟಾಪನೆ ಮಾಡಬೇಕಾಗಿದೆ. ನಾವೆಲ್ಲರೂ ನಡ್ಡಾ ಅವರನ್ನ ಟೀಕೆ ಮಾಡ್ತೀವಿ. ಅವರದ್ದೇ ತವರಲ್ಲಿ ಗೆಲ್ಲೋಕಾಗಿಲ್ಲ ಅಂತಾ ಹೇಳ್ತಿವಿ. ಆದ್ರೆ ಈಗ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ನಮ್ಮವರೇ ಇದ್ದಾರೆ. ಹೀಗಾಗಿ ನಾವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವ ಮೂಲಕ ಅವರಿಗೆ ಗೌರವ ತರಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​