Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 26, 2021 | 6:12 PM

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿ ಎದುರು ಹೇಳಿಕೆ ಕೊಟ್ಟ ನರೇಶ್
Follow us on

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ರಮೇಶ್ ಜಾರಕಿಹೊಳಿ ವಿರುದ್ಧ ಎಫ್​ಐಆರ್​ ದಾಖಲು
ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲಾಗಿದೆ. ಯುವತಿ ನೀಡಿರುವ ದೂರು ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Link: ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು

2) ಇನ್ನೂ 10 CDಗಳು ಬಂದರೂ ಎದುರಿಸಲು ಸಿದ್ಧರಿದ್ದೇವೆ: ರಮೇಶ್ ಜಾರಕಿಹೊಳಿ
ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ. ಇನ್ನೂ 10 CDಗಳು ಬಂದರೂ ಎದುರಿಸಲು ಸಿದ್ಧರಿದ್ದೇವೆ. ಮಹಾನಾಯಕ ಯಾರೆಂದು ಗೊತ್ತಾಗಲಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
Link: ಸರ್ಕಾರವನ್ನೇ ತೆಗೆದಿದ್ದೇವೆ, ಇದ್ಯಾವ ಲೆಕ್ಕ? ರಮೇಶ್ ಜಾರಕಿಹೊಳಿ ಸವಾಲ್

3) ಭೇಟಿ ನೀಡಿದ ಸವಿ ನೆನಪಿಗಾಗಿ ಸಸಿ ನೆಟ್ಟ ಪ್ರಧಾನಿ ಮೋದಿ
ಬಾಂಗ್ಲಾದೇಶದ ಸವಾರ್​ನಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದ ಸವಿ ನೆನಪಿಗಾಗಿ ಸಸಿ ನೆಟ್ಟು ಭೇಟಿ ಇತ್ತವರ ಪಟ್ಟಿಯಲ್ಲಿ ಸಹಿ ಹಾಕಿದ್ದಾರೆ. 
Link: ಬಾಂಗ್ಲಾದೇಶದ ರಾಷ್ಟ್ರಿಯ ಹುತಾತ್ಮ ಸ್ಮಾರಕದಲ್ಲಿ ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ

4) ಯಶ್​​-ರಾಧಿಕ ಮಕ್ಕಳ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್
ಸ್ಯಾಂಡಲ್​ವುಡ್​ನ ಸ್ಟಾರ್​ ದಂಪತಿ ಯಶ್​ ಮತ್ತು ರಾಧಿಕಾ ಪಂಡಿತ್​ ಮಕ್ಕಳಂತೂ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್​. ರಾಧಿಕಾ ಅವರು ತಮ್ಮ ಮಕ್ಕಳ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
Link: ಬೇಸಿಗೆಯಲ್ಲೂ ಯಶ್​ ಪುತ್ರಿ ಎಷ್ಟೊಂದು ಕೂಲ್​!

5) ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್
ಸರಕುಗಳನ್ನು ಸಾಗಣೆ ಮಾಡುವ ಆ ಹಡಗಿನ ಹೆಸರು ಎವರ್ ಗಿವನ್. ಇನ್ನು ಇದು 1312 ಅಡಿ ಉದ್ದದ್ದು. ಪ್ರಬಲವಾಗಿ ಬೀಸಿದ ಗಾಳಿಗೆ ಅಷ್ಟುದ್ದ ಹಾಗೂ ಗಾತ್ರದ ಹಡಗು ಅಡ್ಡಡ್ಡ ತಿರುಗಿ ನಿಂತುಬಿಟ್ಟಿತು.
Link: ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್

6) 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುಮುಖ್ಯ ನೋಟಿಫಿಕೇಷನ್ ಬಿಡುಗಡೆ
10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಬಹುಮುಖ್ಯ ನೋಟಿಫಿಕೇಷನ್ ಒಂದನ್ನು ಬಿಡುಗಡೆಗೊಳಿಸಿದೆ. 10 ಅಥವಾ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಬಳಿಕ ಮತ್ತೊಂದು ಬೋರ್ಡ್​ಗೆ ವಿದ್ಯಾರ್ಥಿ ತೆರಳುವುದಿದ್ದರೆ ಅಂಥವರಿಗೆ ವಲಸೆ ಪ್ರಮಾಣ ಪತ್ರ (Migration Certificate) ಅಗತ್ಯವಾಗಿರುತ್ತದೆ.
Link: ಬೋರ್ಡ್ ಪರೀಕ್ಷೆ ಎದುರಿಸಲಿರುವ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಮಾಹಿತಿ ಗಮನಿಸಿ

7) ಟಾಟಾ ಸನ್ಸ್ ಕಂಪನಿಗೆ ಮಹತ್ವದ ಗೆಲುವು
ಟಾಟಾ ಕಂಪನಿ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಸನ್ಸ್ ಕಂಪನಿಗೆ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ಗೆಲುವು ದೊರೆತಿದೆ.
Link: ಸೈರಸ್ ಮಿಸ್ತ್ರಿ ವಜಾ ಪ್ರಕರಣ; ಟಾಟಾ ಸನ್ಸ್​ ಸಂಸ್ಥೆಗೆ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ಗೆಲುವು

8) ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್
ಕೊವಿಡ್-19 ಪಿಡುಗು ವಿಶ್ವದಾದ್ಯಂತ ಹಬ್ಬಿದ ನಂತರ ಕ್ರಿಕೆಟ್​ ಪಂದ್ಯಗಳಲ್ಲಿ ಚೆಂಡಿಗೆ ಆಟಗಾರರು ತಮ್ಮ ಬಾಯಿ ಎಂಜಲನ್ನು (saliva) ಹಚ್ಚಿ ಹೊಳಪು ತರುವ ಪ್ರಯತ್ನ ಮಾಡಬಾರದೆಂದು ಅಂತರರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ ಅಂತ ಎಲ್ಲಾ ಸದಸ್ಯರ ರಾಷ್ಟ್ರಗಳಿಗೆ ನಿರ್ದೇಶನ ಜಾರಿ ಮಾಡಿತು.
Link: India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್

9) ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ತಮಿಳುನಾಡಿಗೆ
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ (ಮಾರ್ಚ್ 26) ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಎಂಕೆ, ಕಾಂಗ್ರೆಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
Link:ತಮಿಳುನಾಡು ವಿಧಾನಸಭಾ ಚುನಾವಣೆ: ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.