Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯಾವ್ಯಾವ IPC ಸೆಕ್ಷನ್​ಗಳ ಅಡಿ ದೂರು ದಾಖಲಾಗಿದೆ? ಮುಂದೇನಾಗಬಹುದು?

ಸಿಡಿ ಲೇಡಿ ಠಾಣೆಗೆ ದೂರು ನೀಡಿರುವ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಐಪಿಸಿ ಸೆಕ್ಷನ್ 376C, 354A, 504, 506, 417 ಅಡಿಯಲ್ಲಿ FIR ದಾಖಲಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯಾವ್ಯಾವ IPC ಸೆಕ್ಷನ್​ಗಳ ಅಡಿ ದೂರು ದಾಖಲಾಗಿದೆ? ಮುಂದೇನಾಗಬಹುದು?
ರಮೇಶ್​ ಜಾರಕಿಹೊಳಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 26, 2021 | 4:58 PM

ಬೆಂಗಳೂರು: ಸಿಡಿ ಲೇಡಿ ಪರ ವಕೀಲ ಜಗದೀಶ್ ಮುಖಾಂತರ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿರುವ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376C, 354A, 504, 506, 417 ಅಡಿಯಲ್ಲಿ FIR ದಾಖಲಾಗಿದೆ.

FIRನಲ್ಲಿ ಉಲ್ಲೇಖಿಸಲಾಗಿರುವ ಸೆಕ್ಷನ್​ಗಳ ವಿವರ ಹೀಗಿದೆ: 1) 67A ಐಟಿ ಆ್ಯಕ್ಟ್‌ನಡಿ ಎಫ್‌ಐಆರ್ ದಾಖಲು 2) 376C-ಪ್ರಭಾವಿ ಹುದ್ದೆಯಲ್ಲಿದ್ದು ಲೈಂಗಿಕ ದೌರ್ಜನ್ಯ ಕೃತ್ಯ 3) 354A-ಲೈಂಗಿಕ ದೌರ್ಜನ್ಯ ಶಿಕ್ಷೆ ಪ್ರಮಾಣ 4) 504-ಶಾಂತಿ ಕದಡಲು ಉದ್ದೇಶಪೂರ್ವಕ ಅಪಮಾನ 5) 506-ಜೀವ ಬೆದರಿಕೆ, 417-ವಂಚನೆಗೆ ಶಿಕ್ಷೆ 6) 67A-ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ದೃಶ್ಯ ಪ್ರಸಾರಕ್ಕೆ ಶಿಕ್ಷೆ

​ಸಿಡಿಯಲ್ಲಿದ್ದ ಯುವತಿಯ ಲಿಖಿತ ದೂರು ಆಧರಿಸಿ ಇದೀಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ಮಾಡಲಾಗಿದೆ. ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಲಾಗಿದೆ. ರಮೇಶ್ ವಿಡಿಯೋ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿದ್ದಾರೆ. ನಗ್ನವಾಗಿ ಮಾತನಾಡಲು ಪುಸಲಾಯಿಸಿದ್ದಾರೆ ಎಂದು ಜಾರಕಿಹೊಳಿ ವಿರುದ್ಧ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಮೇಶ್ ಜಾರಕಿಹೊಳಿ ಪ್ರಭಾವಿ ಆಗಿದ್ದರಿಂದ ಹೇಳಿದಂತೆ ಕೇಳಿದ್ದೇನೆ. ಕೆಲಸದ ವಿಚಾರಕ್ಕೆ ಕರೆದಿದ್ದರಿಂದ ಮನೆಗೆ ಹೋಗಿದ್ದೆ. ಆ ವೇಳೆ, ಅವರ ಅಪಾರ್ಟ್‌ಮೆಂಟ್‌ನಲ್ಲೇ 2 ಬಾರಿ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸಿಡಿಯಲ್ಲಿದ್ದ ಯುವತಿ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಅತ್ಯಾಚಾರದ ಕೇಸ್ ದಾಖಲಿಸಿಕೊಂಡು ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ: ರಾಜ್ಯ ಕಾಂಗ್ರೆಸ್​ ಘಟಕ ಟ್ವೀಟ್