ವಿರಾಟ್ ಕೊಹ್ಲಿಯನ್ನು ಮಾತಾಡಿಸಲು ತವಕಿಸುತ್ತಿದ್ದ ಟಿವಿ9 ಕನ್ನಡ ವಾಹಿನಿ ವರದಿಗಾರನಿಗೆ ಸಿಕ್ಕಿದ್ದು ಜ್ಯೂನಿಯರ್ ಕೊಹ್ಲಿ!

Updated on: Jun 03, 2025 | 7:26 PM

ನಾನಿರೋದೇ ವಿರಾಟ್ ಕೊಹ್ಲಿ ಸರ್ ಥರ, ಅವರ ಹಾಗೆ ಕಾಣಲು ಯಾವುದೇ ಮೇಕಪ್ ಮಾಡಿಕೊಳ್ಳೋದಿಲ್ಲ, ಅವರಂತೆ ನಾನೂ ಫಿಟ್ನೆಸ್ ಫ್ರೀಕ್ ಎನ್ನುವ ಹ್ಯಾರಿ ಕೊಹ್ಲಿ ಒರಿಜಿನಲ್ ಕೊಹ್ಲಿಯಂತೆ ತೂಕ ನಿರ್ವಹಣೆ ಕಡೆ ಹೆಚ್ಚು ಗಮನ ನೀಡುತ್ತಾರಂತೆ. ವಿರಾಟ್ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾಗುವ ಅವಶ್ಯಕತೆ ಇರಲಿಲ್ಲ, ರಾಷ್ಟ್ರೀಯ ತಂಡವನ್ನು ಇನ್ನೂ ಮೂರು ವರ್ಷಗಳ ಕಾಲ ಪ್ರತಿನಿಧಿಸುವ ಕ್ಷಮತೆ, ಸಾಮರ್ಥ್ಯ ಅವರಲ್ಲಿದೆ ಎಂದು ಹ್ಯಾರಿ ಹೇಳುತ್ತಾರೆ.

ಅಹ್ಮದಾಬಾದ್ (ಗುಜರಾತ್): ಇವತ್ತು ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಟೀಮುಗಳ ನಡುವೆ ನಡೆಯುವ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಕವರ್ ಮಾಡಲು ಟಿವಿ9 ಕನ್ನಡ ವಾಹಿನಿ ತಂಡ ಅಹ್ಮದಾಬಾದ್ ತಲುಪಿದೆ. ನಮ್ಮ ನ್ರದಿಗಾರ ವಿರಾಟ್ ಕೊಹ್ಲಿಯನ್ನು ಮಾತಾಡಿಸುವ ಇಚ್ಛೆ ಹೊಂದಿದ್ದರೂ ಅವರಿಗೆ ಸಿಕ್ಕಿದ್ದು ಜ್ಯೂನಿಯರ್ ವಿರಾಟ್ ಕೊಹ್ಲಿ! ಆರ್​ಸಿಬಿ ಸ್ಟಾರ್ ಬ್ಯಾಟರ್​ನಂತೆ ಕಾಣುವ ಹ್ಯಾರಿ ಕೊಹ್ಲಿ ಮೂಲತಃ ಹಿಮಾಚಲ ಪ್ರದೇಶದವರು ಮತ್ತು ಕೊಹ್ಲಿಯ ಲುಕ್ ಅಲೈಕ್ ಆಗಿರೋದ್ರಿಂದ ಸೋಶಿಯಲ್ ಮೀಡಿಯದಲ್ಲಿ ಬಹಳ ಫೇಮಸ್ಸು. ಕೋಟ್ಯಾಂತರ ಕನ್ನಡಿಗರ ಹಾಗೆ ಹ್ಯಾರಿ ಸಹ ಐಪಿಎಲ್ 18 ನೇ ಸೀಸನ್ ಅನ್ನು 18ನೇ ನಂಬರಿನ ಜೆರ್ಸಿ ಧರಿಸುವ ವಿರಾಟ್ ಕೊಹ್ಲಿಯ ಆರ್​ಸಿಬಿ ತಂಡ ಗೆಲ್ಲಲಿ ಎಂದು ಬಯಸುತ್ತಾರೆ.

ಇದನ್ನೂ ಓದಿ:  IPL 2025 Final: ನಿಟ್ಟುಸಿರು ಬಿಟ್ಟ ಆರ್​ಸಿಬಿ ಫ್ಯಾನ್ಸ್; ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 03, 2025 05:41 PM