AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಪಟಾಕಿ, ಸ್ವೀಟ್ಸ್ ರೆಡಿ ಮಾಡಿಟ್ಟುಕೊಂಡಿರುವ ಯುವ ಕರ್ನಾಟಕ ವೇದಿಕೆ

ಆರ್​ಸಿಬಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಪಟಾಕಿ, ಸ್ವೀಟ್ಸ್ ರೆಡಿ ಮಾಡಿಟ್ಟುಕೊಂಡಿರುವ ಯುವ ಕರ್ನಾಟಕ ವೇದಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2025 | 4:04 PM

Share

ಫೈನಲ್ ಪಂದ್ಯವನ್ನು ಗೆದ್ದರೆ ಟೌನ್ ಹಾಲ್​ನಲ್ಲಿ ಕೇಕ್ ಕಟ್ ಮಾಡುವ, ಕೆಆರ್ ಪುರಂ ಭಾಗದಲ್ಲಿ ನಂದಿನಿ ಮೈಸೂರು ಪಾಕ್ ಹಂಚುವ ಯೋಜನೆಯನ್ನೂ ಯುವ ಕರ್ನಾಟಕ ವೇದಿಕೆಯ ಸದಸ್ಯರು ರೂಪಿಸಿದ್ದಾರೆ. ಹೊಸೂರಿಗೆ ಹೋಗಿ 10,000 ಮೌಲ್ಯದ ಪಟಾಕಿಗಳನ್ನೂ ತರಿಸಿಟ್ಟಿದ್ದಾರೆ. ಸೆಲಿಬ್ರೇಷನ್​ ಮತ್ತೇನು ಬೇಕು? ಒಂದು ಮಾತು ಮಾತ್ರ ನಿಜ, ಅರ್​​ಸಿಬಿ ಗೆದ್ದರೆ-ಗೆದ್ದೇ ಗೆಲ್ಲುತ್ತದೆ ಅಂತ ಇವರೆಲ್ಲ ಹೇಳ್ತಾರೆ, ಇವರಲ್ಲಿ ಯಾರೂ ನಿದ್ರೆ ಮಾಡಲ್ಲ, ರಾತ್ರಿಯೆಲ್ಲ ಸಂಭ್ರಮ ಆಚರಿಸುತ್ತಾರೆ!

ಬೆಂಗಳೂರು, ಜೂನ್ 3: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ (finals of Indian Premier League) ಶುರುವಾಗಲು ಇನ್ನು 4 ತಾಸು ಬಾಕಿಯಿದೆ. 4 ನೇ ಬಾರಿ ಫೈನಲ್ ಆಡುತ್ತಿರುವ ಆರ್​ಸಿಬಿ ತಂಡ ಇವತ್ತು ಚಾಂಪಿಯನ್​ಶಿಪ್ ಗೆದ್ದೇಗೆಲ್ಲುತ್ತೆ ಎಂದು ಯುವ ಕರ್ನಾಟಕ ವೇದಿಕೆಯ ಸದಸ್ಯರು ಹೇಳುತ್ತಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ಈಡುಗಾಯಿ ಹೊಡೆದಿರುವ ಸದಸ್ಯರು, ಆರ್​ಸಿಬಿ ಟ್ರೋಫಿ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ರಾತ್ರಿಯ ಸೆಲಿಬ್ರೇಷನ್​ಗೂ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ, ಆರ್​ಸಿಬಿ ಖಚಿತವಾಗಿ ಗೆಲ್ಲುತ್ತದೆ ಅಂತ ಗೊತ್ತಿದೆ, ಆದರೂ ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವ ಗಾಳಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: IPL 2025 Final: ‘ಈ ಸಲ ಕಪ್ ಆರ್‌ಸಿಬಿಗೆ’; ಫೈನಲ್​ಗೂ ಮುನ್ನ ಸಟ್ಟಾ ಬಜಾರ್ ಭವಿಷ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More