ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳ್ಳಾಟ: ಕೈದಿಯ ಗುದದ್ವಾರದಲ್ಲಿ 2 ಮೊಬೈಲ್ ಪತ್ತೆ!

| Updated By: ರಮೇಶ್ ಬಿ. ಜವಳಗೇರಾ

Updated on: Jul 03, 2024 | 9:20 PM

ಜೈಲುಗಳಲ್ಲಿ ಹಣ ಕೊಟ್ಟರೆ ಎಲ್ಲಾ ಸೌಕರ್ಯಗಳು ದೊರೆಯುತ್ತವೆ. ಸಿಗರೇಟ್, ಗುಟ್ಕಕದಿಂದ ಹಿಡಿದು ಮಾತನಾಡಲು ಮೊಬೈಲ್​ ಫೋನ್​ ಸೌಲಭ್ಯ ಇರಲಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇದರ ಮಧ್ಯ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ಬಳಿ ಮೊಬೈಲ್​ ಫೋನ್ ಪತ್ತೆಯಾಗಿದೆ. ಆರೋಪಿಯನ್ನು ಜೈಲಿನೊಳಗೆ ಕರೆದೊಯ್ಯವ ಸಂದರ್ಭದಲ್ಲಿ ಸ್ಕ್ಯಾನ್ ಮಾಡಿದಾಗ ಗುದದ್ವಾರದಲ್ಲಿ 2 ಮೊಬೈಲ್ ಪತ್ತೆಯಾಗಿವೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳ್ಳಾಟ: ಕೈದಿಯ ಗುದದ್ವಾರದಲ್ಲಿ 2 ಮೊಬೈಲ್ ಪತ್ತೆ!
ಪತ್ತೆಯಾದ ಮೊಬೈಲ್​ಗಳು
Follow us on

ಬೆಂಗಳೂರು, (ಜುಲೈ, 03): ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯ ಕಳ್ಳಾಟ ಬಯಲಾಗಿದೆ. ವಿಚಾರಣಾಧೀನ ಕೈದಿಯೊಬ್ಬನ ಗುದದ್ವಾರದಲ್ಲಿ 2 ಮೊಬೈಲ್​ಗಳು ಪತ್ತೆಯಾಗಿವೆ. ಪ್ರಕರಣವೊಂದರ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿನೊಳಗೆ ಕಳುಹಿಸುವ ಮೊದಲು ಸ್ಕ್ಯಾನ್ ಮಾಡಿದಾಗ ಆತನ ಗುದದ್ವಾರದಲ್ಲಿ 2 ಮೊಬೈಲ್ ಪತ್ತೆಯಾಗಿವೆ. ಕೋರ್ಟ್​ನಿಂದ ವಾಪಸ್ ಜೈಲಿಗೆ​ ಕರೆತರುವಾಗ ವಿಚಾರಣಾಧೀನ ರಘುವೀರ್ ರಘುವೀರ್, ಬೇರೆಯವರಿಂದ ಫೋನ್ ಪಡೆದುಕೊಂಡು ಗುದದ್ವಾರದಲ್ಲಿ ಇಟ್ಟುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕಾನ್ಸ್​ಟೇಬಲ್ ಶ್ರೀಕೃಷ್ಣ ಅವರು ರಘುವೀರ್​​ನನ್ನ ಕೋರ್ಟ್​ಗೆ ಕರೆದೊಯ್ದಿದ್ದರು. ಈ ವೇಳೆ ರಘುವೀರ್ ಬೇರೆಯವರಿಂದ ಮೊಬೈಲ್​ ಪಡೆದುಕೊಂಡಿದ್ದಾನೆ. ಆದ್ರೆ. ಜೈಲಿಗೆ ಬಂದಾಗ ತಪಾಸಣೆ ವೇಳೆ ಸ್ಕ್ಯಾನ್ ಸೈರನ್ ಹೊಡೆದುಕೊಂಡಿದೆ. ಕೂಡಲೇ ರಘುವೀರ್​ನನ್ನು ವಶಕ್ಕೆ ಪಡೆದ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ಎಕ್ಸ್​ರೇ ಮಾಡಿದಾಗ ಆತನ ಗುದದ್ವಾರದಲ್ಲಿ 2 ಮೊಬೈಲ್ ಫೋನ್, ಬ್ಯಾಟರಿ ಪತ್ತೆಯಾಗಿದೆ. ಇದರಿಂದ ಪೊಲೀಸರೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ‘ಫರ್ಜಿ’ ವೆಬ್ ಸೀರೀಸ್ ನೋಡಿ ಖೋಟಾ ನೋಟ್ ದಂಧೆ; ಈ ಗ್ಯಾಂಗ್ ಪೊಲೀಸ್​ ಖೆಡ್ಡಾಗೆ ಬಿದ್ದಿದ್ದೆ ರಣರೋಚಕ

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈದಿ ರಘುವೀರ್ ಗುದದ್ವಾರದಲ್ಲಿದ್ದ ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಮೊಬೈಲ್ ಹೇಗೆ ಪಡೆದುಕೊಂಡಿದ್ದು? ಯಾರಿಂದ ತೆಗೆದುಕೊಂಡಿದ್ದು? ಏಕೆ ಮೊಬೈಲ್​ ಬೇಕಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ