ಕೌಟುಂಬಿಕ ಕಲಹ ಶಂಕೆ: UBDT ಕಾಲೇಜಿ​ನ ಸಹಾಯಕ ಕುಲಸಚಿವರ ಪತ್ನಿ ಆತ್ಮಹತ್ಯೆ

|

Updated on: Dec 13, 2019 | 2:43 PM

ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್​ನ ಸಹಾಯಕ ಕುಲಸಚಿವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲತಾ ರಂಗಸ್ವಾಮಿ(48) ಮೃತ ಮಹಿಳೆ. ಚಿಕ್ಕಮ್ಮಣ್ಣಿ ಬಡಾವಣೆಯಲ್ಲಿ ಸಹಾಯಕ ಕುಲಸಚಿವ ರಂಗಸ್ವಾಮಿ ವಾಸವಿದ್ದರು. ಮನೆಯಲ್ಲಿ ಚಿಕ್ಕ ವಿಷಯಕ್ಕೆ ಪತಿಯೊಂದಿಗೆ ಜಗಳವಾಗಿದೆ. ಇದರಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಲತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆಗೆ ಮುಂದಾಗಿದ್ದಾರೆ. ಘಟನೆ ಸಂಬಂಧ ಲತಾ ಪುತ್ರಿ ಹಾಗೂ ಸಂಬಂಧಿಕರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೌಟುಂಬಿಕ ಕಲಹ ಶಂಕೆ: UBDT ಕಾಲೇಜಿ​ನ ಸಹಾಯಕ ಕುಲಸಚಿವರ ಪತ್ನಿ ಆತ್ಮಹತ್ಯೆ
Follow us on

ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್​ನ ಸಹಾಯಕ ಕುಲಸಚಿವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲತಾ ರಂಗಸ್ವಾಮಿ(48) ಮೃತ ಮಹಿಳೆ.

ಚಿಕ್ಕಮ್ಮಣ್ಣಿ ಬಡಾವಣೆಯಲ್ಲಿ ಸಹಾಯಕ ಕುಲಸಚಿವ ರಂಗಸ್ವಾಮಿ ವಾಸವಿದ್ದರು. ಮನೆಯಲ್ಲಿ ಚಿಕ್ಕ ವಿಷಯಕ್ಕೆ ಪತಿಯೊಂದಿಗೆ ಜಗಳವಾಗಿದೆ. ಇದರಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಲತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆಗೆ ಮುಂದಾಗಿದ್ದಾರೆ. ಘಟನೆ ಸಂಬಂಧ ಲತಾ ಪುತ್ರಿ ಹಾಗೂ ಸಂಬಂಧಿಕರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.