ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ

ಜಮೀನಿನಲ್ಲಿ ನಾಡಬಾಂಬ್ ಹಾವಳಿ, ಸ್ಫೋಟಕ್ಕೆ ಎರಡು ನಾಯಿ ಬಲಿ

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನ […]

sadhu srinath

|

Dec 13, 2019 | 3:30 PM

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್​ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ.

ತುಂಗಭದ್ರಾ ನದಿಗೆ ಹೊಂದಿಕೊಂಡಂತಿರೋ ಈ ಗ್ರಾಮದ ಹೊರವಲಯದಲ್ಲಿ ಎರಡು ನಾಯಿಗಳು ಸತ್ತು ಬಿದ್ದಿವೆ. ಅದು ಬೇಟೆಗಾರರು ಬಳಸೋ ನಾಡಾಬಾಂಬ್​​ಗಳನ್ನ ಕಚ್ಚಿ. ಪ್ರಾಣಿಗಳನ್ನ ಬೇಟೆಯಾಡಲು ಅಲ್ಲಲ್ಲಿ ನಾಡಾ ಬಾಂಬ್​​ಗಳನ್ನ ಅಲ್ಲಲ್ಲಿ ಹುದುಗಿಸಿಟ್ಟಿದ್ದು ಜನರು ಕೂಡ ಭಯಗೊಂಡಿದ್ದಾರೆ. ಯಾವಾಗ, ಎಲ್ಲಿ ಏನಾಗುತ್ತೋ ಅಂತ ಆತಂಕಗೊಂಡಿದ್ದಾರೆ.

ಸ್ಫೋಟಕ ವಸ್ತುಗಳನ್ನ ಮಾಂಸದಲ್ಲಿ ಹಾಕಿ ಬಿಸಾಡಿರ್ತಾರೆ. ಮಾಂಸದ ವಾಸನೆ ಕಂಡು ತಿನ್ನಲು ಬರೋ ಪ್ರಾಣಿಗಳು, ಸ್ಫೋಟದಿಂದ ಸಾವನ್ನಪ್ಪುತ್ತವೆ. ನಂತರ, ಬಾಂಬ್​ ಇಟ್ಟವರು ಆ ಪ್ರಾಣಿಯನ್ನ ಹೊತ್ತೊಯ್ತಾರೆ. ಭೇಟೆಗೆ ಬಂದವರು ತಕ್ಷಣ ಬಂದು ಆ ಪ್ರಾಣಿಯನ್ನ ತೆಗೆದುಕೊಂಡು ಹೋಗುತ್ತಾರೆ. ಹೀಗೆ, ಎರಡು ನಾಯಿಗಳು ಮೃತಪಟ್ಟಿವೆ. ಕಬ್ಬು ಕಟಾವು ಮಾಡಲು ದೂರದ ಮಹಾರಾಷ್ಟ್ರದಿಂದ ಜನರು ಬರ್ತಿದ್ದಾರೆ. ಅವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada