AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಲಾಸ್‌ನಲ್ಲಿ ಗಲಾಟೆ, ಮಕ್ಕಳ ಮೇಲೆ ಮನಬಂದಂತೆ ಥಳಿಸಿದ ಟೀಚರಮ್ಮ

ಬೆಳಗಾವಿ: ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಕ್ಲಾಸ್​ನಲ್ಲಿ ಗದ್ದಲ ಮಾಡಿದ್ದಾರೆ ಎಂದು ಕೊಠಡಿಯಿಂದ ಹೊರಗೆ ಕರೆತಂದು ಥಳಿಸಿದ್ದಾರೆ. ಇಂತಹ ಚಿಕ್ಕ ಕಾರಣಕ್ಕೆ ಈ ರೀತಿ ಬಾಸುಂಡೆ ಬರುವಂತೆ ಹೊಡೆಯುವುದು ಸರಿನಾ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ಹೊಡೆತ ತಿಂದ ಮಕ್ಕಳಿಗೆ ಕಾಲು ತೊಡೆಯ ಭಾಗದಲ್ಲಿ ಬಾಸುಂಡೆ ಬಂದಿವೆ. ಶಿಕ್ಷಕಿಯ ಕೃತ್ಯಕ್ಕೆ ಅವರನ್ನು […]

ಕ್ಲಾಸ್‌ನಲ್ಲಿ ಗಲಾಟೆ, ಮಕ್ಕಳ ಮೇಲೆ ಮನಬಂದಂತೆ ಥಳಿಸಿದ ಟೀಚರಮ್ಮ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 13, 2019 | 2:23 PM

Share

ಬೆಳಗಾವಿ: ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಕ್ಲಾಸ್​ನಲ್ಲಿ ಗದ್ದಲ ಮಾಡಿದ್ದಾರೆ ಎಂದು ಕೊಠಡಿಯಿಂದ ಹೊರಗೆ ಕರೆತಂದು ಥಳಿಸಿದ್ದಾರೆ. ಇಂತಹ ಚಿಕ್ಕ ಕಾರಣಕ್ಕೆ ಈ ರೀತಿ ಬಾಸುಂಡೆ ಬರುವಂತೆ ಹೊಡೆಯುವುದು ಸರಿನಾ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ಹೊಡೆತ ತಿಂದ ಮಕ್ಕಳಿಗೆ ಕಾಲು ತೊಡೆಯ ಭಾಗದಲ್ಲಿ ಬಾಸುಂಡೆ ಬಂದಿವೆ. ಶಿಕ್ಷಕಿಯ ಕೃತ್ಯಕ್ಕೆ ಅವರನ್ನು ಅಮಾನತುಗೊಳಿಸಲು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬರುತ್ತಿದೆ.

Published On - 2:14 pm, Fri, 13 December 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು