ಬಾಲಕಿ ಸಾವಿಗೆ ಪ್ರೇಮ ಪ್ರಕರಣ ಕಾರಣವಾಯ್ತಾ?
ಕಲಬುರಗಿ: ನಾಪತ್ತೆಯಾಗಿದ್ದ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿಸೆಂಬರ್ 5ರಂದು ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ಹೊರವಲಯದಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಶ್ವೇತಾ(5) ನಾಪತ್ತೆಯಾಗಿದ್ದಳು. ತಂದೆ ನಿಂಗಪ್ಪ ಪೂಜಾರಿ ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಕೆಲ ದಿನಗಳ ನಂತರ ಗ್ರಾಮದ ಹೊರವಲಯ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗು ಶವವಾಗಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ನಿಧಿಗಾಗಿ ಬಾಲಕಿಯನ್ನು ಬಲಿಕೊಟ್ಟಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಗಾಣಗಾಪುರ […]
ಕಲಬುರಗಿ: ನಾಪತ್ತೆಯಾಗಿದ್ದ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿಸೆಂಬರ್ 5ರಂದು ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ಹೊರವಲಯದಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಶ್ವೇತಾ(5) ನಾಪತ್ತೆಯಾಗಿದ್ದಳು.
ತಂದೆ ನಿಂಗಪ್ಪ ಪೂಜಾರಿ ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಕೆಲ ದಿನಗಳ ನಂತರ ಗ್ರಾಮದ ಹೊರವಲಯ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಗು ಶವವಾಗಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ನಿಧಿಗಾಗಿ ಬಾಲಕಿಯನ್ನು ಬಲಿಕೊಟ್ಟಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ವೈಷಮ್ಯದಿಂದ ಕೊಲೆ ಶಂಕೆ: ಗ್ರಾಮದ ಕೆಲವರ ಮೇಲೆ ಬಾಲಕಿ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಬಾಲಕಿ ನಾಪತ್ತೆಯಾದ ದಿನ ಮುಕುಂದ ಮತ್ತು ಹಯ್ಯಾಳಿ ಜೊತೆ ನಿಂಗಪ್ಪ ಜಗಳ ಮಾಡಿದ್ದ. ತಮ್ಮ ಸಂಬಂಧಿ ಯುವತಿಗೆ ತೊಂದರೆ ನೀಡಿದ್ದಕ್ಕೆ ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದ. ಇದೇ ಕಾರಣದಿಂದ ಮಗಳನ್ನು ಅಪಹರಿಸಿ ಕೊಲೆ ಮಾಡಿರಬಹುದೆಂದು ಮುಕುಂದಂಪ್ಪ, ಹಯ್ಯಾಳಿ, ಅಶೋಕ ಎಂಬುವವರ ವಿರುದ್ಧ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಲಕಿ ಸಾವಿಗೆ ಪ್ರೇಮ ಪ್ರಕರಣ ಕಾರಣ? ಬಾಲಕಿ ಸಾವಿಗೆ ಪ್ರೇಮ ಪ್ರಕರಣ ಕಾರಣವಾಗಿರೋ ಶಂಕೆ ವ್ಯಕ್ತವಾಗಿದೆ. ನಿಂಗಪ್ಪನ ಸಂಬಂಧಿ ಯುವತಿಯನ್ನ ಮುಕುಂದಪ್ಪ ಪ್ರೀತಿಸ್ತಿದ್ದ. ಇವರಿಬ್ಬರು ದೇವಸ್ಥಾನದ ಬಳಿ ಮಾತನಾಡುತ್ತಿದ್ದಿದ್ದನ್ನು ನಿಂಗಪ್ಪನ ಸಂಬಂಧಿಗಳು ವಿಡಿಯೋ ಮಾಡಿದ್ದರು. ಈ ವಿಡಿಯೋ ಇಟ್ಚುಕೊಂಡು ನಮ್ಮ ಕುಟುಂಬದ ಯುವತಿ ತಂಟೆಗೆ ಬರದಂತೆ ಮುಕುಂದಪ್ಪ ಮತ್ತು ಆತನ ಸಹೋದರನಿಗೆ ನಿಂಗಪ್ಪ ಎಚ್ಚರಿಕೆ ನೀಡಿದ್ದ. ಆಗ ಎರಡು ಕುಟುಂಬದವರು ಕೈಕೈ ಮಿಲಾಯಿಸಿದ್ದರು. ಆಗ ನೀನು ಕಣ್ಣೀರು ಹಾಕ್ತೀಯ, ನಿನಗೆ ಬೇಕಾದ ಅತ್ಯಮೂಲ್ಯ ವಸ್ತು ಕಳಕೋತಿಯ ಅಂತ ಬೆದರಿಕೆ ಹಾಕಿದ್ದನಂತೆ. ಬೆಳಗ್ಗೆ ಗಲಾಟೆಯಾದ್ರೆ ಅಂದು ಸಂಜೆ ಬಾಲಕಿ ನಾಪತ್ತೆಯಾಗಿದ್ದಳು.
ಹೀಗಾಗಿ ಅವರೇ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಅಂತ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಘಟನೆ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಮುಕುಂದಪ್ಪ, ಹಯ್ಯಾಳಿ ಸೇರಿದಂತೆ ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ. ಬಾಲಕಿ ತಂದೆ ನಿಂಗಪ್ಪ ದೂರಿನ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Published On - 1:41 pm, Fri, 13 December 19