ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಕ್ರಿಯೆಗೆ ಸಿದ್ಧತೆ

ಬೆಂಗಳೂರು: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಇಚ್ಛೆಯಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಈಗಾಗಲೇ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಕೈಗೊಳ್ಳಲಾಗಿದೆ. ಮೊದಲಿಗೆ ಸಿಂಹಾಸನದಲ್ಲಿ ಶ್ರೀಗಳನ್ನ ಕೂರಿಸಿ ಮಾಧ್ವ ಸರೋವರದಲ್ಲಿ ಸ್ನಾನ ಮಾಡಿಸಲಾಗುತ್ತೆ. ಬಳಿಕ ತುಳಸಿ ಮಾಲೆ ಹಾಕಿ ದೇವಾಲಯದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪೂಜೆ ಮಾಡಲಾಗುತ್ತೆ. ಇದಾದ ಬಳಿಕ ಕೃಷ್ಣ ಮಠದ ಕನಕನ ಕಿಂಡಿಯಲ್ಲಿ ಶ್ರೀಗಳಿಗೆ ಕೃಷ್ಣನ ದರ್ಶನ ಮಾಡಿಸಲಾಗುತ್ತೆ. ಬೃಂದಾವನದ ವೇಳೆ ಶ್ರೀಗಳನ್ನ ಪದ್ಮಾಸನದಲ್ಲಿ ಕೂರಿಸಿ ಜಪ ಮಾಡುವ […]

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಕ್ರಿಯೆಗೆ ಸಿದ್ಧತೆ
ಸಾಧು ಶ್ರೀನಾಥ್​

Updated on: Dec 29, 2019 | 12:40 PM

ಬೆಂಗಳೂರು: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಇಚ್ಛೆಯಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತೆ. ಈಗಾಗಲೇ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಕೈಗೊಳ್ಳಲಾಗಿದೆ.

ಮೊದಲಿಗೆ ಸಿಂಹಾಸನದಲ್ಲಿ ಶ್ರೀಗಳನ್ನ ಕೂರಿಸಿ ಮಾಧ್ವ ಸರೋವರದಲ್ಲಿ ಸ್ನಾನ ಮಾಡಿಸಲಾಗುತ್ತೆ. ಬಳಿಕ ತುಳಸಿ ಮಾಲೆ ಹಾಕಿ ದೇವಾಲಯದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪೂಜೆ ಮಾಡಲಾಗುತ್ತೆ. ಇದಾದ ಬಳಿಕ ಕೃಷ್ಣ ಮಠದ ಕನಕನ ಕಿಂಡಿಯಲ್ಲಿ ಶ್ರೀಗಳಿಗೆ ಕೃಷ್ಣನ ದರ್ಶನ ಮಾಡಿಸಲಾಗುತ್ತೆ. ಬೃಂದಾವನದ ವೇಳೆ ಶ್ರೀಗಳನ್ನ ಪದ್ಮಾಸನದಲ್ಲಿ ಕೂರಿಸಿ ಜಪ ಮಾಡುವ ಬಂಗಿಯಲ್ಲಿ ಮಣ್ಣಿನ ಗುಂಡಿ ಒಳಗೆ ಕೂರಿಸಲಾಗುತ್ತೆ.

ಬಳಿಕ ಶ್ರೀಗಳಿಗೆ ನಿತ್ಯ ಪೂಜೆಗೆ ಬಳಸುತ್ತಿದ್ದ ವಿಷ್ಣು ಸಾಲಿಗ್ರಾಮ, ಗಿಂಡಿ, ತುಳಸಿ ಮಾಲೆ ಸೇರಿ ಎಲ್ಲಾ ಪೂಜಾ ಸಾಮಗ್ರಿಗಳನ್ನ ಬೃಂದಾವನದ ಒಳಗೆ ಇಡಲಾಗುತ್ತೆ. ನಂತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನ ಕಾಯಿ ಇಡಲಾಗುತ್ತದೆ. ಸಾಸಿವೆ, ಉಪ್ಪು, ಹತ್ತಿಯಲ್ಲಿ ಬೃಂದಾವನ ಮುಚ್ಚಲಾಗುತ್ತೆ. ಆ ಬಳಿಕ ಪೂರ್ತಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಗುತ್ತೆ. ಈ ವೇಳೆ ಅಷ್ಟ ಮಠದ ವಿದ್ವಾಂಸರುಗಳಿಗೆ ದಶ ದಾನಾದಿಗಳನ್ನ ನೀಡಲಾಗುತ್ತೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us